30 ಗೋವುಗಳ ಅಕ್ರಮ ಸಾಗಾಟ ತಡೆದ ಹಿಂದೂ ಕಾರ್ಯಕರ್ತರು
ಕಲಬುರಗಿ: ಜು.24: 30 ಗೋವುಗಳನ್ನು ಟಾಟಾ ಇಚರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ಹಿಂದೂ ಜಾಗೃತ ಸೇನೆಯ ಸುರೇಶ್ ಠಾಕೂರ್ ಅವರು ನಗರದ ಹೊರವಲಯದ ಆಳಂದ್ ಚೆಕ್ ಪೋಸ್ಟ್ ಬಳಿ ತಡೆದು ಪೋಲಿಸರ ಮೂಲಕ ಅವುಗಳನ್ನು ರಕ್ಷಿಸಿದ್ದಾರೆ.
ಸುರೇಶ್ ಠಾಕೂರ್ ಅವರು ಟಾಟಾ ಇಚರ್ ತಡೆದು ತಕ್ಷಣವೇ 112ಗೆ ಕರೆ ಮಾಡಿದಾಗ ಪೋಲಿಸ್ ಸಿಬ್ಬಂದಿಗಳು ಸ್ಥಳಕ್ಕೆ ಬಂದರು. ಆಕ ವಾಹನ ಚಾಲಕನು ಕೆಲ ಅನ್ಯ ಕೋಮಿನ ಯುವಕರನ್ನು ಕರೆದು ಭಯದ ವಾತಾವರಣ ನಿರ್ಮಾಣ ಮಾಡಿದ. ಆಗ ವಾಹನವನ್ನು ಪೋಲಿಸರ ಎದುರಿನಲ್ಲಿಯೇ ರಾಜಾರೋಷವಾಗಿ ಪೋಲಿಸ್ ಠಾಣೆಗೆ ತೆಗೆದುಕೊಂಡು ಹೋದರು. ನಂತರ 112 ಪೋಲಿಸ್ ಸಿಬ್ಬಂದಿಯವರು ಸಬ್ ಅರ್ಬನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಆದಾಗ್ಯೂ, ಸುರೇಶ್ ಠಾಕೂರ್ ಅವರು ಸಬ್ ಅರ್ಬನ್ ಪೋಲಿಸ್ ಠಾಣೆಯ ಸಿಪಿಐ ಅವರಿಗೆ ಖುದ್ದು ಭೇಟಿ ಮಾಡಿದರು. ತಕ್ಷಣ ವಾಹನ ಹಾಗೂ ವಾಹನ ಚಾಲಕನಿಗೆ ಪೋಲಿಸರು ವಶಕ್ಕೆ ತೆಗೆದುಕೊಂಡರು. ಈ ಕುರಿತು ಪೋಲಿಸರು ಮಶಾಕ್, ಅನ್ವರ್, ಮೊಹಸೀನ್ ನಸೀಮ್, ಗುಲ್ಜಾರ್ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.