ಕೃಷಿ ಅಧಿಕಾರಿಗಳ ಅನಿರೀಕ್ಷಿತ ಭೇಟಿ: ಜೇವರ್ಗಿಯ ಏಳು ರಸಗೊಬ್ಬರ ಮಾರಾಟ ಮಳಿಗೆಗಳಿಗೆ ನೋಟಿಸ್ ಜಾರಿ
ಕಲಬುರಗಿ: ಜು,೨೪: ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಜಾಗೃತಿ ಕೋಶದ ಸಹಾಯಕ ಕೃಷಿ ನಿರ್ದೇಶಕರು, ಉಪ ಕೃಷಿ ನಿರ್ದೇಶಕರು ತಾಲ್ಲೂಕಿನ ವಿವಿಧ ಮಾರಾಟ ಮಳಿಗೆಗಳಿಗೆ ಕಳೆದ ೨೨ ಮತ್ತು ೨೩ರಂದು ಎರಡು ದಿನಗಳ ಕಾಲ ಅನಿರೀಕ್ಷಿತ ಭೇಟಿ ನೀಡಿ, ದಾಖಲಾತಿಗಳನ್ನು ಪರಿಶೀಲಿಸಿ ಸುಮಾರು ಏಳು ಮಾರಾಟ ಮಳಿಗೆಗಳಿಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಿದ್ದಾರೆ.
ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ಕಾನೂನು ಬದ್ದವಾಗಿ ವಿವಿಧ ಕೃಷಿ ಪರಿಕರಗಳನ್ನು ಮಾರಾಟ ಮಾಡಲು ಸೂಚಿಸಿದ ಅವರು, ತಪ್ಪಿದ್ದಲ್ಲಿ ಕಾನೂನು ಬದ್ದವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಕೃಷಿ ನಿರ್ದೇಶಕ ಸೋಮಶೇಖರ್ ಬಿರಾದಾರ್ ಅವರು ಎಚ್ಚರಿಸಿದರು.
ಯುರಿಯಾ ರಸಗೊಬ್ಬರವು ಪಟ್ಟಣದ ರೈತ ಸೇವಾ ಅಗ್ರೋ ಏಜೆನ್ಸಿಸ್, ಸಿದ್ದಗಂಗಾ ಟ್ರೇಡರ್ಸ್, ಬೋಜ್ ಗಣೇಶ್ ಅಗ್ರೋ ಏಜೆನ್ಸಿಸ್, ತೋಟೆಂದ್ರ ಅಗ್ರೋ ಟ್ರೇಡಸ್ ð, ದೇವರಮನಿ ಆಂಡ್ ಕಂಪೆನಿ, ಗಂಗಾ ಆಗ್ರೋ ಟ್ರೇಡರ್ಸ್, ಜೇರಟಗಿಯ ಶಿವ ಫರ್ಟಿಲೈರ‍್ಸ್, ಖಾಜಾ ಸೈಫನ್ ಮಲಕ ಅಗ್ರೋ ಏಜೆನ್ಸೀಸ್, ಗರಿದೇವರಾಯ್ ಆಗ್ರೋ ಟ್ರೇಡರ್ಸ್, ಸೊನ್ನದ ಸೌದಾಗರ್ ಟ್ರೇಡರ್ಸ್, ಕೆಲ್ಲೂರಿನ ಭಾಗ್ಯವಂತಿ ಆಗ್ರೋ ಏಜೆನ್ಸಿಸ್, ಶ್ರೀಶೈಲ ಮಲ್ಲಿಕಾರ್ಜುನ್ ಆಗ್ರೋ ಏಜೆನ್ಸೀಜ್, ಯಡ್ರಾಮಿಯ ಗಜಾನನ ಆಗ್ರೋ ಕೇಂದ್ರ, ಭಾಗ್ಯವಂತಿ ಆಗ್ರೋ ಕೇಂದ್ರ, ರೇವಣಸಿದ್ದೇಶ್ವರ್ ಆಗ್ರೋ ಏಜೆನ್ಸೀಸ್, ಅಪ್ಪಾಜಿ ಆಗ್ರೋ ಏಜೆನ್ಸೀಸ್, ಶ್ರೀ ಸಾಯಿ ವೆಂಕಟೇಶ್ವರ್ ಟ್ರೇಡರ್ಸ್, ಮಳ್ಳಿಯ ಕಾನಕಶ್ರೀ ಆಗ್ರೋ, ಬಿಳವಾರದ ಶ್ರೀ ವೀರಭದ್ರೇಶ್ವರ್ ಅಗ್ರೋ ಏಜೆನ್ಸೀಸ್, ಹಿರೇಮಠ್ ಆಗ್ರೋ ಕೇಂಧ್ರ, ಅಂಕಲಗಾದ ಅಮೂಲ್ಯ ಟ್ರೆಡರ್ಸ್, ಮಂದೇವಾಲದ ಅನಿಲ್ ಟ್ರೇಡರ್ಸ್ ಮುಂತಾದ ಕೃಷಿ ಪರಿಕರ ಮಳಿಗೆಗಳಲ್ಲಿ ದಾಸ್ತಾನು ಇದ್ದು, ರೈತರು ದೃತಿಗೆಡದೆ ಸದರಿ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ತಮಗೆ ಅವಶ್ಯಕವಿರುವ ರಸಗೊಬ್ಬರವನ್ನು ನಿಗದಿತ ದರದಲ್ಲಿ ಪಡೆದುಕೊಳ್ಳಲು ಅವರು ತಿಳಿಸಿದ್ದಾರೆ.
ದಪ್ಪ ಕಾಳು ಯುರಿಯಾ ಮತ್ತು ಸಣ್ಣ ಕಾಳು ಯುರಿಯಾ ಎರಡರಲ್ಲೂ ಸಹ ಸಾರಜನಕ ಒಂದೇ ಪ್ರಮಾಣದಲ್ಲಿ ಇರುವುದರಿಂದ ಎರಡರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಆದ್ದರಿಂದ ಯಾವ ಗೊಬ್ಬರ ಲಭ್ಯವಿರುವುದೋ ಅದನ್ನು ಉಪಯೋಗಿಸಲು ರೈತರಿಗೆ ಅವರು ಸಲಹೆ ನೀಡಿದ್ದಾರೆ.