ರಾಷ್ಟ್ರದ ಅಭಿವೃದ್ಧಿಗೆ ತೆರಿಗೆ ಪಾವತಿ ಅಗತ್ಯ
ಕಲಬುರಗಿ:ಜು.೨೪: ಪ್ರಜಾಪ್ರಭುತ್ವ ಸರ್ಕಾರವು ರಾಷ್ಟçದ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಅನುಷ್ಠಾನಗೊಳಿಸುವ ವಿವಿಧ ಕಲ್ಯಾಣ ಯೋಜನೆ, ಕಾರ್ಯಕ್ರಮಗಳ ಸಲುವಾಗಿ ಸರ್ಕಾರ ತನ್ನ ಪ್ರಮುಖ ಹಣಕಾಸು ಮೂಲವಾದ ವಿವಿಧ ಪ್ರಕಾರದ ತೆರಿಗೆಯನ್ನು ವಿಧಿಸುತ್ತದೆ. ತೆರಿಗೆದಾರರು ಅದನ್ನು ತಪ್ಪದೇ ಪಾವತಿಸದರೆ, ಅನೇಕ ಹೊಸ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತದೆ. ತನ್ಮೂಲಕ ರಾಷ್ಟç ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ಅರ್ಥಶಾಸ್ತç ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪವಿರುವ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಸಂಜೆ ಜರುಗಿದ ‘ರಾಷ್ಟಿçÃಯ ಆದಾಯ ತೆರಿಗೆ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಇದನ್ನು 1860ರಲ್ಲಿ ಸರ್ ಜೇಮ್ಸ್ ವಿಲಿಯಮ್ ಅವರು ಪರಿಚಯಿಸಿದ್ದಾರೆ ಎಂದರು.
ಆದಾಯ ತೆರಿಗೆಯನ್ನು ಕೇಂದ್ರ ಸರ್ಕಾರ ವಿಧಿಸಿ, ಸಂಗ್ರಹಿಸುತ್ತದೆ. ಆದರೆ ಈ ತೆರಿಗೆಯಿಂದ ಸಂಗ್ರಹವಾದ ಆದಾಯವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಲಾಗುತ್ತದೆ. ಹಣಕಾಸು ಆಯೋಗವು ತೆರಿಗೆಯ ಹಂಚಿಕೆಯ ಪ್ರಮಾಣವನ್ನು ನಿರ್ಧರಿಸುತ್ತದೆ. ವ್ಯಕ್ತಿ ಗಳಿಸುವ ವಾರ್ಷಿಕ ಆದಾಯದ ಮೇಲೆ ಆದಾಯ ತೆರಿಗೆಯನ್ನು ವಿಧಿಸಲಾಗುತ್ತದೆ. ಕೇಂದ್ರದ ಪ್ರಸ್ತುತ ಬಜೆಟ್‌ನಲ್ಲಿ 3 ಲಕ್ಷ ರೂ.ವರೆಗೆ ತೆರಿಗೆ ವಿನಾಯತಿ ನೀಡಲಾಗಿದೆ. 3-7 ಲಕ್ಷ ರೂ.ಗಳಿಗೆ ಶೇ.5, 7-10 ಲಕ್ಷ ರೂ.ಗಳಿಗೆ ಶೇ.10, 10-12 ಲಕ್ಷ ರೂ.ಗಳಿಗೆ ಶೇ.15, 12-15 ಲಕ್ಷ ರೂ.ಗಳಿಗೆ ಶೇ.20 ಮತ್ತು 15 ಲಕ್ಷ ರೂ. ಮೇಲ್ಪಟ್ಟು ಶೇ.30ರಷ್ಟು ತೆರಿಗೆ ವಿಧಿಸಲಾಗುವುದು ಎಂದು ತಿಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ದತ್ತು ಹಡಪದ, ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಕಾಶ ಬಿರಾದಾರ, ಅಂಬಾರಾಯ ಅವರಾದ, ಶಿವಶರಣಪ್ಪ ಭೀಮಳ್ಳಿ, ಗುರು ಗುತ್ತೇದಾರ ಸೇರಿದಂತೆ ಇನ್ನಿತರರಿದ್ದರು.