ಕಡಗಂಚಿ ಮಠದಲ್ಲಿ ಆಷಾಡ ಮಾಸದ ಕಾರ್ಯಕ್ರಮ
ಕಲಬುರಗಿ,ಜು.24-ನಗರದ ಶೇಖ್ ರೋಜಾ ಕಡಗಂಚಿ ಮಠದಲ್ಲಿ 17ನೇ ವರ್ಷದ ಆಷಾಡ ಮಾಸದ ಕಾರ್ಯಕ್ರಮ ನಡೆಯಿತು.
ಸಿದ್ಧಾಂತ ಶಿಖಾಮಣಿ ಪ್ರವಚನ ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾದೀಶ್ವರ ಒಂದು ಸಾವಿರದ ಎಂಟು ಡಾ.ಚಂದ್ರಶೇಖರ್ ಶಿವಾಚಾರ್ಯ ಭಗವತ್ಪಾದರು ವಾರಣಾಸಿ ಇವರ ಸಾನಿಧ್ಯದಲ್ಲಿ ನಡೆಯುವಂತಹ ಕಾರ್ಯಕ್ರಮ ಕಡಗಂಚಿ ಕಟ್ಟಿ ಮಠದ ಒಡೆಯರಾದ ವೀರ ತಪಸ್ವಿ ವೀರಭದ್ರ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ, ಚಂದನ್ ಕೆರಾದ ಡಾ.ರಾಚೋಟೇಶ್ವರ ಶಿವಾಚಾರ್ಯರ ಸಮ್ಮುಖದಲ್ಲಿ ,ಜಗದ್ಗುರು ಮಹಾ ಸನ್ನಿಧೀಯವರ ಆಗಮನ ಪೂರ್ವದಲ್ಲಿ ನಿನ್ನೆಯ ದಿವಸ ಶಾಂತಲಿAಗೇಶ್ವರರ ಪುರಾಣದ ಉದ್ಘಾಟನೆ ಮಾಡಲಾಯಿತು.
ಪುರಾಣಿಕರಾದ ಶಿವಲಿಂಗಯ್ಯ ಸ್ವಾಮಿ ಗರೂರ್ ಪುರಾಣಿಕ ಮಠ ,ಸಂಗೀತ ಗುರ್ಲಿಂಗಯ್ಯ ಸ್ವಾಮಿ ಹಿತ್ತಲಶಿರೂರ್, ಮಹಾಂತಯ್ಯ ಸ್ವಾಮಿ ನಿಂಗದಳ್ಳಿ, ಶರಣು ಬೂಸನೂರ, ಸಿದ್ರಾಮಪ್ಪ ಅಲಗುಡ್ಕರ್, ಶಿವಾನಂದ ಮಠಪತಿ, ಶಂಕ್ರಯ್ಯಸ್ವಾಮಿ, ಮಲ್ಲಯ್ಯ ಮುತ್ಯಾ ಹಾಗೂ ಕಾರ್ಯಕ್ರಮದಲ್ಲಿ ಶ್ರೀಮಠದ ಭಕ್ತಾದಿಗಳು ಭಾಗವಹಿಸಿದ್ದರು. ಸಭೆಯ ಸಂಚಾಲನೆಯನ್ನು ಸಿದ್ದೇಶ್ವರ ಶಾಸ್ತ್ರಿಗಳು ಸಂಸ್ಥಾನ ಹಿರೇಮಠ ಸುಂಟನೂರ್ ನಡೆಸಿಕೊಟ್ಟರು.