ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ
ಕಲಬುರಗಿ:ಜು.24: ಮಾನವನ ದೇಹದ ಪ್ರಮುಖ ಅಂಗವಾದ ಮೆದುಳು ಎಲ್ಲಾ ಅಂಗಗಳನ್ನು ನಿಯಂತ್ರಿಸುವ ಮೂಲಕ ದೇಹ ಮತ್ತು ಮನಸ್ಸಿನ ನಡುವೆ ಸಮತೋಲನ ಕಾಪಾಡುತ್ತದೆ. ಆಧುನಿಕ ಒತ್ತಡದ ಬದುಕು, ಅನಾರೋಗ್ಯಕರ ಜೀವನ ಶೈಲಿ, ಅಪಘಾತ, ವಿಶ್ರಾಂತಿ ಇಲ್ಲದಿರುವುದು, ಜೀವನದಲ್ಲುಂಟಾಗುವ ಅಹಿತಕರ ಘಟನಗಳು ಸೇರಿದಂತೆ ಮುಂತಾದ ಕಾರಣಗಳಿಂದ ಮಿದುಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಇವುಗಳ ಬಗ್ಗೆ ಎಚ್ಚರಿಕೆ ವಹಿಸಿ ಮೆದುಳಿನ ಆರೋಗ್ಯವನ್ನು ಪ್ರತಿಯೊಬ್ಬರು ಕಾಪಾಡಿಕೊಳ್ಳುಬೇಕಾದದ್ದು ತುಂಬಾ ಅಗತ್ಯವಾಗಿದೆಯೆಂದು ಕುಟುಂಬ ವೈದ್ಯ ಡಾ.ಸಂತೋಷ ರೆಡ್ಡಿ ಸಲಹೆ ನೀಡಿದರು.
ನಗರದ ಆಳಂದ ಚೆಕ್‌ಪೋಸ್ಟ್ ಸಮೀಪವಿರುವ ‘ಶ್ರೇಯಸ್ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ಮೆದುಳು ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮೆದುಳಿಗೆ ಸಂಬAಧಿಸಿದAತೆ ನಿರ್ಲಕ್ಷö್ಯ ವಹಿಸುವುದು ಬೇಡ. ಒತ್ತಡ ರಹಿತ ಜೀವನ ಶೈಲಿ, ಧನಾತ್ಮಕ ಚಿಂತನೆ, ಸೂಕ್ತ ಕಾಲಕ್ಕೆ ಆಹಾರ, ವಿಶ್ರಾಂತಿ ಮಾಡುವುದು, ಮೆದುಳಿಗೆ ಪೆಟ್ಟಾಗದಂತೆ ಕಾಳಜಿ ವಹಿಸುವುದು, ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಂದ ದೂರವಿರುವದು ಸೇರಿದಂತೆ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಿದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆಯೆಂದು ಹೇಳಿದರು.
ಕ್ಲಿನಿಕ್‌ನ ಮುಖ್ಯಸ್ಥ ಹಾಗೂ ಕೂಡಲಸಂಗಮ ಪಂಚಮಸಾಲಿ ಪೀಠದ ಪಂಚಸೇನಾ ಜಿಲ್ಲಾಧ್ಯಕ್ಷ ಸೋಮಶೇಖರ ಬಿ.ಮುಲಗೆ ಮಾತನಾಡಿ, ಮೆದುಳು ದೇಹದ ಸೂಕ್ಷö್ಮ ಅಂಗವಾಗಿದ್ದು, ಅದರ ಮಲೆ ಕೆಟ್ಟ ಪರಿಣಾಮ ಬೀರುವಂತಹ ಚಟುವಟಿಕಗಳಿಂದ ಮುಕ್ತವಾಗಿರುವುದು ಅವಶ್ಯಕವಾಗಿದೆ. ಆರೋಗ್ಯಕರ ಜೀವನಶೈಲಿ ಮತ್ತು ನಿರಂತರವಾಗಿ ಉತ್ತಮ ಚಟುವಟಿಕೆಗಳಿಂದ ಕೂಡಿರುವ ಜೀವನದಿಂದ ಮಿದುಳು ಸದಾ ಕ್ರೀಯಾಶೀಲವಾಗಿರಲು ಸಾಧ್ಯವಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಸದಸ್ಯ ಅಣ್ಣಾರಾವ ಮಂಗಾಣೆ, ಮಹಾಂತೇಶ, ವಿಷ್ಣು, ಬಸವರಾಜ ಸೇರಿದಂತೆ ಇನ್ನಿತರರಿದ್ದರು.