ತೊಗರಿ ಬೆಳೆಯಲ್ಲಿ ಫೈಟೊಪ್ಥೋರಾ ಕಜಾನಿ ಎಂಬ ಶಿಲೀಂದ್ರದಬಾಧೆ: ರೈತರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು
ಕಲಬುರಗಿ:ಜು.೨೪:ತೊಗರಿಯ ನಾಡು ಎಂದೇ ಪ್ರಖ್ಯಾತಿಯಾಗಿರುವ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಕಲಬುರಗಿ, ಬೀದರ, ಯಾದಗಿರಿ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಸುಮಾರು ೧೪ ಲಕ್ಷ ಹೆಕ್ಟೇರ ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ ಎಂದು ಕಲಬುರಗಿ ವಲಯ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ (ಸಸ್ಯ ರೋಗಶಾಸ್ತçದ) ಮಲ್ಲಿಕಾರ್ಜುನ ಕೆಂಗನಾಳ್ ಅವರು ತಿಳಿಸಿದ್ದಾರೆ.
ಕಳೆದ ಎರಡು ವಾರಗಳಲ್ಲಿ ಸತತವಾದ ಮಳೆಯಿಂದಾಗಿ ತೊಗರಿ ಬೆಳೆ ಅಲ್ಲಲ್ಲಿ ಹೆಚ್ಚಿನ ತೇವಾಂಶದ ಬಾಧೆಗೆ ಒಳಪಡುವಂತಾಗಿದೆ. ಮೋಡ ಕವಿದ ವಾತಾವರಣ ಮತ್ತು ಸತತವಾದ ಜಿಟಿ ಜಿಟಿ ಮಳೆಯಿಂದಾಗಿ ತೊಗರಿಯಲ್ಲಿ ಫೈಟೊಪ್ಥೋರಾ ಕಜಾನಿ ಎಂಬ ಶಿಲೀಂದ್ರದ ಬಾಧೆ ಕಂಡುಬAದಿದ್ದು, ಗಿಡದ ಎಲೆಗಳ ಅಂಚಿನ ಮೇಲೆ ನೀರಿನಿಂದ ಹಸಿಯಾಗಿ ತೊಯಿದು ನೆನೆದ ಹಾಗೆ ಮತ್ತು ಹಳದಿಯಾಗಿ ಒಣಗುತ್ತಿರುವ ಮಚ್ಚೆಗಳು ಕಂಡು ಬರುತ್ತಿದೆ. ತೊಗರಿ ಬೆಳೆಯುತ್ತಿರುವ ಎಲ್ಲಾ ರೈತರು ತೊಗರಿ ಬೆಳೆಗೆ ಯಾವುದೇ ತರಹದ ಬೇರು ಕೊಳೆ ಅಥವಾ ನೆಟೆ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಬೆಳೆಗೆ ಟ್ರೆöÊಕೊಡರ್ಮದಿಂದ ಉಪಚರಿಸುವದು ಸೂಕ್ತವಾಗಿದೆ.
ರೋಗ ಹೆಚ್ಚಾದಂತೆ ಕ್ರಮೇಣವಾಗಿ ಎಲೆಗಳು ಸಂಪೂರ್ಣ ಹಳದಿಯಾಗಿ ಒಣಗಿ ಗಿಡಗಳು ಬಾಡುತ್ತಿವೆ. ಗಿಡದ ಕಾಂಡಗಳು ನೆಲದ ಹತ್ತಿರ ಕೊಳೆತಂತೆ ಕಂಡುಬರುತ್ತಿವೆ. ಇನ್ನು ಹೆಚ್ಚಿನ ಮಳೆಯ ನೀರು ಹರಿದು ಹೋಗದೆ ಹೊಲಗಳಲ್ಲಿ ನಿಲ್ಲುತ್ತಿರುವದರಿಂದ ತೊಗರಿ ಗಿಡಗಳ ಬೇರುಗಳಿಗೆ ಸರಿಯಾಗಿ ಗಾಳಿ ಸಿಗದೆ ಕೊಳೆಯಲು ಪ್ರಾರಂಭಿಸಿ ನೆಟೆ ಹೊಗುತ್ತಿವೆ. ಬಾದಿತ ಗಿಡಗಳನ್ನು ಕಿತ್ತಿ ನೋಡಿದಾಗ ಕುತ್ತಿಗೆಯ ಹತ್ತಿರ ಕೊಳೆತಂತೆ ಕಂಡು ಬಂದು ಕಂದು ಬಣ್ಣದ ಮಚ್ಚೆಗಳಿಂದ ಕೂಡಿರುತ್ತವೆ.
ಈ ರೋಗದ ನಿರ್ವಹಣೆಗೆ ರೈತರು ಹೊಲಗಳಲ್ಲಿ ಮಳೆಯ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ರೋಗಕಾರಕ ಶಿಲೀಂದ್ರದ ಕೋಶಗಳು ಮಳೆಯ ನೀರಿನೊಂದಿಗೆ ಇತರೆ ಹೊಲಗಳಿಗೆ ಹರಡುವ ಸಾದ್ಯತೆ ಇರುತ್ತದೆ. ಹೆಚ್ಚಾದ ಮಳೆಯ ನೀರು ಹರಿದು ಹೋಗಲು ಕಾಲುವೆ ಮತ್ತು ಹರಿವುಗಳನ್ನು ಮಾಡಿ ನೀರು ಇತರೆ ಹೊಲಗಳನ್ನು ಸೇರದೆ ನಾಲೆಗಳಿಗೆ ಸೇರುವಂತೆ ದಾರಿ ಮಾಡಬೇಕು. ವಾತಾವರಣದಲ್ಲಿ ಶೇ. ೮೫ ಕ್ಕಿಂತಲೂ ಹೆಚ್ಚಿನ ಆದ್ರತೆ ಇರುವದರಿಂದ ಮುಂಜಾಗ್ರತ ಕ್ರಮವಾಗಿ ತೊಗರಿ ಬೆಳೆಗೆ ರೈತರು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಟ್ರೆöÊಕೊಡರ್ಮ ಜೈವಿಕ ಶಿಲೀಂದ್ರ ನಾಶಕದಿಂದ ಬುಡ ಮತ್ತು ಬೇರು ತೋಯಿಸಬೇಕು. ಇದರಿಂದ ತೊಗರಿ ಗಿಡದ ಕುತ್ತಿಗೆ ಹಾಗೂ ಬೇರುಗಳು ಕೊಳೆಯದಂತೆ ತಡೆಗಟ್ಟಬಹುದು. ಪ್ರತಿ ಲೀಟರ ನೀರಿಗೆ ೫ ಗ್ರಾಂ. ಟ್ರೆöÊಕೊಡರ್ಮ ಬೆರಸಿ ಕೈಪಂಪು ಅಥವಾ ಬ್ಯಾಟರಿ ಚಾಲಿತ ಪಂಪುಗಳನ್ನು ಬಳಸಿ ಗಿಡಗಳ ಕಾಂಡ ಮತ್ತು ಬೇರುಗಳು ತೊಯುವಹಾಗೆ ಉಪಚಾರ ಮಾಡುವದರಿಂದ ತೊಗರಿ ಗಿಡಗಳನ್ನು ಫೈಟೋಫ್ಥೋರ ಸಸಿ ಕೊಳೆ ರೋಗದ ಬಾಧೆಯಿಂದ ರಕ್ಷಿಸಬಹುದು. ರೋಗ ತೀವ್ರತೆ ಹೆಚ್ಚಾಗಿ ಇರುವ ಹೊಲಗಳಲ್ಲಿ ಮೆಟಲ್ಯಾಕ್ಸಿಲ್ ಶಿಲೀಂದ್ರನಾಶಕವನ್ನು ೩ಗ್ರಾಂ ಪ್ರತಿ ಲೀಟರ ನೀರಿಗೆ ಬೆರಸಿ ಬೆಳೆಗೆ ಸಿಂಪರಣೆ ಮಾಡುವದರಿಂದ ರೊಗದ ಹರಡುವದನ್ನು ತಡೆಯಬಹುದಾಗಿದೆ.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ವಲಯ ಕೃಷಿ ಸಂಶೋಧನಾ ಕೇಂದ್ರ ಸಸ್ಯ ರೋಗ ಶಾಸ್ತç ವಿಭಾಗವನ್ನು ಅಥವಾ ಸಮೀಪದ ಕೃಷಿ ವಿಜ್ಞಾನ ಕೇಂದ್ರ ಮತ್ತು ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬೇಕೆAದು ಅವರು ತಿಳಿಸಿದ್ದಾರೆ.