ಡಾ.ಪಂಡಿತ ರಂಗ ಮಂದಿರದ ನಿರ್ವಹಣೆಯಲ್ಲಿ ಅದಕ್ಷತೆ: ಕ್ರಮಕ್ಕೆ ಆಗ್ರಹ
ಕಲಬುರಗಿ, ಜು.24- ಮಹಾನಗರದ ಡಾ: ಎಸ್.ಎಂ.ಪAಡಿತ ರಂಗ ಮಂದಿರದ ಸಮರ್ಪಕ ನಿರ್ವಹಣೆ ಮಾಡುವಲ್ಲಿ ಮತ್ತು ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಅವರಿಗೆ ಇಲ್ಲಿಂದ ವರ್ಗಾವಣೆಗೊಳಿಸಬೇಕು ಹಾಗೂ ಈ ರಂಗ ಮಂದಿರದ ತುರ್ತು ದುರಸ್ಥಿ ಹಾಗೂ ನವೀಕರಣ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಜಿಲ್ಲಾ ಅಧ್ಯಕ್ಷರು ಮತ್ತು ಕಲ್ಯಾಣ ಕರ್ನಾಟಕ ಕರವೇ ಕಾವಲು ಪಡೆಯ ಅಧ್ಯಕ್ಷರಾದ ಮಂಜುನಾಥ ನಾಲವಾರಕರ್ ಅವರು ಒತ್ತಾಯಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 2019 ರಿಂದ ಇಲ್ಲಿಯವರೆಗೆ ಕಲಬುರಗಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ದತ್ತಪ್ಪ ಸಾಗನೂರ ರವರು ಕಲಬುರಗಿ ನಗರದ ಡಾ: ಎಸ್.ಎಂ. ಪಂಡಿತ ರಂಗ ಮಂದಿರ ನಿರ್ವಹಣೆ ಮಾಡುವಲ್ಲಿ ಮತ್ತು ಆ ಸಿಬ್ಬಂದಿಗಳ ಸಂಬಳ / ವೇತನ ನೀಡುವಲ್ಲಿಯೂ ಕೂಡಾ ತಾರತಮ್ಮ ಮಾಡುತ್ತಿದ್ದು ಹಾಗೆ ಯಾವುದೇ ಕಲಾವಿದರಿಗೂ ಕೂಡಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುಕೂಲಗಳನ್ನು ಮಾಡಿಕೊಡುವುದರಲ್ಲಿಯೂ ಕೂಡಾ ಹಿಂದೇಟು ಹಾಕುತ್ತಿದ್ದು ಅನೇಕ ಮಹಾ ಪುರುಷರ ಜಯಂತಿಗಳು ಕೂಡಾ ಕಾಟಾಚಾರಕ್ಕಾಗಿ ಮತ್ತು ಪ್ರಚಾರವಿಲ್ಲದೆ ಜಯಂತಿಗಳನ್ನು ಆಚರಣೆ ಮಾಡುತ್ತಿದ್ದು ಆದ್ದರಿಂದ ಸಧ್ಯದ ಪರಿಸ್ಥಿತಿಯಲ್ಲಿ ಡಾ: ಎಸ್.ಎಂ.ಪAಡಿತ ರಂಗ ಮಂದಿರದಲ್ಲಿ ಆಸನಗಳು, ಧ್ವನಿ ವರ್ಧಕ, ಹವಾ ನಿಯಂತ್ರಣ, ಶೌಚಾಲಯ ದುರಸ್ತಿ ಮಟ್ಟದಲ್ಲಿದ್ದು ಅಲ್ಲದೆ ಕಟ್ಟಡವಿ ಕೂಡಾ ಬಿರುಕು ಬಿಟ್ಟಿದೆ. ಇದೆಲ್ಲದಕ್ಕೂ ಕೂಡಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ದತ್ತಪ್ಪ ಸಾಗನೂರ ಇವರ ನಿರ್ಲಕ್ಷವೇ ಕಾರಣ. ಹಾಗಾಗಿ ಇವರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಿ ನಿಷ್ಠೆ,ದಕ್ಷ ಪÁ್ರಮಾಣಿವಾಗಿ ಕೆಲಸ ನಿರ್ವಹಿಸುವ ಅಧಿಕಾರಿಯನ್ನು ನಿಯೋಜನೆ ಮಾಡುವಂತೆ ಅವರು ಮನವಿ ಮಾಡಿದರು.
ನಗರದ ಡಾ: ಎಸ್.ಎಂ.ಪAಡಿತ ರಂಗ ಮಂದಿರವು ದಿನಾಂಕ: 04.01.2009 ರಂದು ಅಂದಿನ ರಾಷ್ಟ್ರಪತಿಗಳಾದ ಶ್ರೀಮತಿ ಪ್ರತಿಭಾ ಪಾಟೀಲ ಮತ್ತು ಅಂದಿನ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ರವರು ಉದ್ಘಾಟಿಸಿದರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲೆ, ಸಾಹಿತ್ಯ, ಸಂಗೀತ ಚಟುವಟಿಕೆಗಳು ಈ ಭಾಗದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಬಹು ದೊಡ್ಡದಾದ ರಂಗ ಮಂದಿರವು ನಿರ್ಮಾಣಗೊಳಿಸಿ ಈ ರಂಗ ಮಂದಿರ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ರಂಗಮAದಿರಕ್ಕಿAತಲೂ 1000 ಆಸನಗಳುಳ್ಳ ಈ ರಂಗ ಮಂದಿರಕ್ಕೆ ಅಂತರ್ ರಾಷ್ಟ್ರೀಯ ಕಲಾವಿದ ಕಲಬುರಗಿಯವರೇ ಆದ ಡಾ: ಎಸ್.ಎಂ. ಪಂಡಿತ ರವರ ಹೆಸರು ನಾಮಕರಣ ಮಾಡಲಾಯಿತು.
ಇಲ್ಲಿನ ಡಾ: ಎಸ್.ಎಂ.ಪAಡಿತ ರಂಗ ಮಂದಿರ ತುಂಬಾ ದುಬಾರಿ ಬಾಡಿಗೆಯ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸುಮಾರು ದಿನಗಳಿಂದ ಹೋರಾಟದ ಫಲವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ಸಚಿವರಾದ ಉಮಾಶ್ರೀ ಯವರು ಮತ್ತು ಕಲಬುರಗಿ ಅಂದಿನ ಉಸ್ತುವಾರಿ ಸಚಿವರಾದ ದಿ: ಖಮರುಲ್ ಇಸ್ಲಾಂ ರವರ ವಿಶೇಷ ಕಾಳಜಿಯಿಂದ ಕರ್ನಾಟಕದಲ್ಲಿ ಇರುವಂತಹ ಎಲ್ಲಾ ರಂಗ ಮಂದಿರಗಳು ಏಕರೂಪ ಬಾಡಿಗೆ ದರ ಜಾರಿಗೊಳಿಸಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅತೀ ಹೆಚ್ಚು ಸಹಾಯವಾಗುವಂತೆ ದುಬಾರಿ ಬಾಡಿಗೆಯನ್ನು ಕಡಿತಗೊಳಿಸಿ ಏಕರೂಪ ದರ ಜಾರಿಗೊಳಿಸಿದ್ದು, ತೃಪ್ತಿತಂದಿದೆ ಎಂದರು.
ಡಾ: ಎಸ್.ಎಂ. ಪಂಡಿತ ರಂಗ ಮಂದಿರದ ದುರಸ್ಥಿಯ ಕೆಲಸಕ್ಕೆ ಇಲ್ಲಿನ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು ಅಥವಾ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರು ಮತ್ತು ಕಲಬುರಗಿ ಉಸ್ತುವಾರಿ ಸಚಿವರು ಅನುದಾನವನ್ನು ನೀಡುವ ಮೂಲಕ ರಂಗ ಮಂದಿರದ ಸುಣ್ಣ-ಬಣ್ಣ ಮತ್ತು ದುರಸ್ತಿ ಕಾಮಗಾರಿಗೆ ಆಸನ. ಧ್ವನಿ ವರ್ಧಕ, ಹವ ನಿಯಂತ್ರಣ ಮತ್ತು ಗೋಡೆ ಬಿರುಕು ದುರಸ್ತಿ ಅಲ್ಲದೆ ಡಾ: ಎಸ್.ಎಂ. ಪಂಡಿತ ರಂಗ ಮಂದಿರಕ್ಕೆ ವಿಶೇಷ ಅಧಿಕಾರಿಯನ್ನು ಏಕೆ ನೇಮಿಸಬಾರದು ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕೂಡಲೇ ಇಲ್ಲಿನ ಎಲ್ಲ ಸಮಸ್ಯೆಗಳು ಬಗೆಹರಿಸದಿದ್ದಲ್ಲಿ ರಂಗ ಮಂದಿರದ ಎದುರುಗಡೆ ವಿನೂತನ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.