ಲೇಖಕಿ ಅನುಪಮಾಗೆ ಸನ್ಮಾನ
ಕಲಬುರಗಿ,ಜು.24-ಲೇಖಕಿ ಅನುಪಮಾ ಅಪಗುಂಡೆಯವರ ಎರಡನೇ ಕೃತಿ “ಇನಿ ದನಿ” ಪುಸ್ತಕ ಲೋಕಾರ್ಪಣೆ ನಂತರ ಕಲಬುರಗಿಯ ಸಪ್ತ ನೇಕಾರರ ಸೇವಾ ಸಂಘದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ನೇಕಾರ ಸಮುದಾಯದ ಯುವ ನಾಯಕ ಶ್ರೀನಿವಾಸ ಬಲಪೂರ , ಹಿರಿಯ ವಕೀಲ ಶಿವಲಿಂಗಪ್ಪಾ ಅಷ್ಟಗಿ, ಕ.ಸಾ.ಪ ಕಾರ್ಯಕಾರಿಣಿ ಸದಸ್ಯ ಜೇನವೆರಿ ವಿನೋದ ಕುಮಾರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ.ಚಂದ್ರಕಲಾ ಬಿದರಿ ಯವರು ವೇದಿಕೆಯಲ್ಲಿ ಇದ್ದರು, ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸ್ವಾಮಿರಾವ ಕುಲಕರ್ಣಿ, ನಿವೃತ್ತ ಪೊಲೀಸ್ ಅಧಿಕಾರಿ ಆರ್.ಸಿ.ಘಾಳೆ, ಕವಿ ಹಣಮಂತರಾಯ ಮಂಗಾಣೆ, ಮಕ್ಕಳ ಸಾಹಿತಿ ಎ. ಕೆ.ರಾಮೇಶ್ವರ, ವಿಶ್ವನಾಥ್ ಮಂಗಲಗಿ, ಸಿ. ಎಸ್. ಮಾಲಿಪಾಟೀಲ ಡಾ. ಶರಣ ಬಸಪ್ಪ ವಡ್ಡನಕೇರಿ, ಲೇಖಕರು, ಸಾಹಿತಿಗಳು ಉಪಸ್ಥಿತರಿದ್ದರು.