ನಾಲೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕುರಿಗಾಯಿ ಸಾವು
ವಿಜಯಪುರ, ಜು.24 :ಕುರಿಮರಿ ರಕ್ಷಣೆಗೆ ಕಾಲುವೆಗೆ ಇಳಿದ ಕುರಿಗಾಯಿ ಯುವಕನೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸಾವನಪ್ಪಿದ ಘಟನೆ ಮುದ್ದೇಬಿಹಾಳ ತಾಲ್ಲೂಕಿನ ನಾಗಬೇನಾಳ ಬಳಿ ನಡೆದಿದೆ.
ನಾಗಬೇನಾಳ ಗ್ರಾಮದ ಮಂಜುನಾಥ (28) ಮೃತಪಟ್ಟ ಯುವಕ.
ಮಂಜುನಾಥ ಕುರಿಮರಿ ರಕ್ಷಣೆ ಮಾಡಲು ಹೋಗಿ ಕಾಲುವೆ ನೀರಿಗಿಳಿದು ಸಾವನ್ನಪ್ಪಿದ್ದಾನೆ.
ಮಂಜುನಾಥ ಕುರಿ ಕಾಯಲು ನಿನ್ನೆ ನಾಗಬೇನಾಳ ಗ್ರಾಮದ ಹೊರವಲಯದ ನಾರಾಯಣಪೂರ ಎಡದಂಡೆ ಕಾಲುವೆ ಬಳಿ ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಕಾಲುವೆಗೆ ಬಿದ್ದ ಕುರಿ ಮರಿಯ ರಕ್ಷಣೆಗೆ ಧಾವಿಸಿ ಮಂಜುನಾಥ ಕಾಲುವೆಗೆ ಹಾರಿದ್ದಾನೆ. ಆಗ ಕಾಲುವೆಯಲ್ಲಿ ನೀರಿನ ರಭಸಕ್ಕೆ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಪೊಲೀಸರು, ಅಗ್ನಿ ಶಾಮಕದಳ ಸಿಬ್ಬಂದಿ ಯುವಕನ ಶವ ಹುಡುಕಾಟ ನಡೆಸಿದ್ದಾರೆ.
ನಾಲತವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.