ಜಿಲ್ಲೆಯಲ್ಲಿ ಡೆಂಗ್ಯೂ ಹತೋಟಿಗೆ,ಭಯ ಬೇಡ ಮುನ್ನೆಚ್ಚರಿಕೆ ವಹಿಸಿದರೆ ಸಾಕು:ಬಿ.ಫೌಜಿಯಾ ತರನ್ನುಮ್
ಕಲಬುರಗಿ,ಜು.24: ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹತೋಟಿಯಲ್ಲಿದ್ದು, ಕಳೆದ ಜನವರಿಯಿಂದ ಇಲ್ಲಿಯವರೆಗೆ ವರದಿಯಾದ 323 ಪ್ರಕರಣಗಳಲ್ಲಿ ಸಕ್ರೀಯ ಪ್ರಕರಣಗಳಿರುವುದು ಕೇವಲ ಎರಡು. ಡೆಂಗ್ಯೂ ಬಗ್ಗೆ ಅನಗತ್ಯ ಬೇಡ. ಸೊಳ್ಳೆ ತಾಣ ನಿರ್ಮೂಲನೆಯ ಎಚ್ಚರಿಕೆ ಜೊತೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಸಾಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಡೆಂಗ್ಯೂ ಟೆಸ್ಟ್ ಹೆಚ್ಚಳ ಮಾಡಿರುವುದರಿಂದ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡುಬAದಿವೆ. ಕಳೆದ ವರ್ಷ ಕೇವಲ 400 ಟೆಸ್ಟ್ ಮಾಡಿಸಲಾಗಿತ್ತು. ಈ ಬಾರಿ 3,167 ಟೆಸ್ಟ್ ಮಾಡಿಸಿದ್ದು, 323 ಪಾಸಿಟಿವ್ ವರದಿಯಾಗಿದೆ ಎಂದರು.
ಡೆAಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ನಿರಂತರ ಲಾರ್ವಾ ಸಮೀಕ್ಷೆ ಮಾಡಲಾಗುತ್ತಿದೆ. ನೀರು ನಿಂತ ಪ್ರದೇಶದಲ್ಲಿ ಈಡಿಸ್ ಸೊಳ್ಳೆ ತಿನ್ನುವ ಗಪ್ಪೆ, ಜಾಂಬೂಸಿಯಾ ಮೀನುಗಳು ಬಿಡಲಾಗುತ್ತಿದೆ. ಮನೆ ಸುತ್ತಮುತ್ತ ನೀರು ನಿಲ್ಲದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಡೆಂಗ್ಯೂ ವಾಸಿಯಾಗುವ ರೋಗವಿದ್ದು, ಸಾರ್ವಜನಿಕರು ಅನಗತ್ಯ ಭಯ ಪಡದೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.
ಡೆAಗ್ಯೂ ಜ್ವರ ನಿಯಂತ್ರಣ ನಿಟ್ಟಿನಲ್ಲಿ ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2, ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಲಾ 5, ತಾಲೂಕಾ ಆಸ್ಪತ್ರೆಯಲ್ಲಿ 10, ಕಲಬುರಗಿ ನಗರದ ಜಿಮ್ಸ್ ಮತ್ತು ಇ.ಎಸ್.ಐ.ಸಿ. ಆಸ್ಪತ್ರೆಯಲ್ಲಿ ತಲಾ 20 ಹಾಸಿಗೆ ಮೀಸಲಿರಿಸಿದೆ. ಇದಲ್ಲದೆ ಖಾಸಗಿ ಆಸ್ಪತ್ರೆಯಲ್ಲಿಯೂ ಬೆಡ್ ಮೀಸಲಿಡಲು ನಿರ್ದೇಶನ ನೀಡಿದೆ ಎಂದರು.
ಎಲಿಸಾ ಟೆಸ್ಟ್ಗೆ ಹೆಚ್ಚಿನ ಹಣ,ಲ್ಯಾಬ್‌ಗಳಿಗೆ ಡಿ.ಸಿ. ಎಚ್ಚರಿಕೆ: ಡೆಂಗ್ಯೂ ಪತ್ತೆಗೆ ಎಲಿಸಾ ಟೆಸ್ಟ್ ಮಾಡಲಾಗುತ್ತಿದ್ದು, ಕಲಬುರಗಿ ನಗರದಲ್ಲಿ ಲ್ಯಾಬ್‌ಗಳು ಸರ್ಕಾರ ನಿಗದಿಪಡಿಸಿದ 250 ರೂ. ಕ್ಕಿಂತ ಹೆಚ್ಚಿನ ಹಣ ಪಡೆಯುತ್ತಿರುವುದು ಸಾರ್ವಜನಿಕರಿಂದ ದೂರು ಬರುತ್ತಿವೆ. ಈ ರೀತಿಯ ಯಾವುದೇ ಪ್ರಯೋಗಾಲಯ ಎಲಿಸಾ ಟೆಸ್ಟ್ ಮಾಡಿಸಲು ಹೆಚ್ಚಿನ ಹಣ ಪಡೆದ ಪ್ರಕರಣ ಕಂಡುಬAದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.