ಭಾವೈಕ್ಯತೆಯಿಂದ ಜರುಗುವ ಬಿಬಿ ಫಾತೀಮಾ ಜಿಯಾರತ್
ಕೊಲ್ಹಾರ:ಜು.24: ತಾಲೂಕಿನ ಬಳೂತಿ ಗ್ರಾಮದ ಆರಾಧ್ಯ ದೇವತೆ ಬಿ ಬಿ ಫಾತೀಮಾ ಜಿಯಾರತ್ ಕಾರ್ಯಕ್ರಮ ಜುಲೈ 25 ಹಾಗೂ 26ರ ಎರಡು ದಿನಗಳ ಕಾಲ ವಿಜೃಂಭಣೆಯಿAದ ಜರುಗಲಿದೆ ಎಂದು ವಿಠ್ಠಲ ಲೋಕಾಪುರ ಹೇಳಿದರು
ಬಳೂತಿ ಗ್ರಾಮದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಅವಳಿ ಜಿಲ್ಲೆಗೆ ಸುಪ್ರಸಿದ್ಧಿ ಪಡೆದಿರುವ ಬಳೂತಿ ಗ್ರಾಮದ ಬಿಬಿ ಫಾತೀಮಾ ಜಿಯಾರತ್ ಕಾರ್ಯಕ್ರಮ ಪ್ರತಿವರ್ಷ ಅತ್ಯಂತ ವಿಜೃಂಭಣೆಯಿAದ ಆಚರಿಸಿಕೊಂಡು ಬರಲಾಗುತ್ತಿದೆ, ಅನೇಕ ಪವಾಡಗಳಿಗೆ ಹೆಸರಾಗಿರುವ ಬಳೂತಿ ಬಿಬಿ ಫಾತೀಮಾ ಜಿಯಾರತ್ ಮೋಹರಂ ಹಬ್ಬ ಮುಗಿದ 10 ನೇ ದಿನಕ್ಕೆ ಜೀಯಾರತ್ ಕಾರ್ಯಕ್ರಮ ಪ್ರತಿವರ್ಷ ಅತ್ಯಂತ ವಿಜೃಂಭಣೆಯಿAದ ಆಚರಿಸುವ ವಾಡಿಕೆಯಂತೆ ಈ ವರ್ಷವೂ ಕೂಡ ಜುಲೈ 25 ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಜೀಯಾರತ್ ಕಾರ್ಯಕ್ರಮ ನಡೆಯುವುದು
ಈ ಜೀಯಾರತ್ ಕಾರ್ಯಕ್ರಮನ್ನು ನಾಗರದಿನ್ನಿ ಗ್ರಾಮದ ಸದಾಶಿವ ಶಿವಯೋಗಾಶ್ರಮದ ತಪೋನಿಷ್ಠ ಸದ್ಗುರು ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಜುಲೈ 25 ರ ಗುರುವಾರ ರಂದು ಬೆಳಿಗ್ಗೆ 10 ಗಂಟೆಗೆ ಬಳೂತಿ ಗ್ರಾಮಕ್ಕೆ ಆಗಮಿಸಿ ಚಾಲನೆ ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜಾನಪದ ಅಕಾಡೆಮಿ ಕಲಾ ತಂಡಕ್ಕೆ ಪ್ರಶಸ್ತಿ ಪತ್ರ ನೀಡಲಾಗುವುದು.
ಅವಳಿ ಜಿಲ್ಲೆಯಿಂದ ಸುಮಾರು 20 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದೆ.ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ ಸರ್ವರು ಕಾರ್ಯಕ್ರಮಕ್ಕೆ ಆಗಮಿಸಿ ದೇವತೆಯ ಕೃಪೆಗೆ ಪಾತ್ರರಾಗಲು ಕೋರಲಾಗಿದೆ.
ಈ ಸಂದರ್ಭದಲ್ಲಿ ದುಂಡಪ್ಪ ಬನಗೊಂಡ,ಶAಕ್ರಯ್ಯ ಚಿಕಮಠ್, ಹುಚ್ಚಪ್ಪ ವಾಲಿಕಾರ, ಅಡಿವೆಪ್ಪ ಹೆಬ್ಬಿ, ಚಂದ್ರಶೇಖರ ಹೆಬ್ಬಿ, ದುಂಡಪ್ಪ ಪಡಶೆಟ್ಟಿ, ವಿಠ್ಠಲ ಶಾವಿಗೊಂಡ, ಶ್ರೀಶೈಲ್ ದ್ಯಾಮಣ್ಣವರ, ಜಗದೀಶ ಸುನಗದ, ಬಶೀರ್ ಮಸೂತಿ, ಬಸವರಾಜ ಚೌದ್ರಿ ಸಹಿತ ಅನೇಕರು ಉಪಸ್ಥಿತರಿದ್ದರು.