ಕರ್ನಾಟಕದ ಪಾಲಿಗೆ ನಿರಾಶಾದಾಯಕ ಬಜೆಟ್
ವಿಜಯಪುರ,ಜು.24:ಕರ್ನಾಟಕದ ಪಾಲಿಗೆ ಕೇಂದ್ರ ಬಜೆಟ್ ನಿರಾಶೆದಾಯಕವಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಾ. ಬಾಬುರಾಜೇಂದ್ರ ನಾಯಕ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕೇವಲ ಬಿಹಾರ ಮತ್ತು ಆಂಧ್ರ ಪಾಲಿಗೆ ಇದು ಲಾಭದಾಯಕ ಬಜೆಟ್ ಆಗಿದೆ. ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳನ್ನು ನೇರವಾಗಿ ಗುರಿಯಾಗಿಸಿ ಕೇಂದ್ರ ಸರ್ಕಾರ ಯಾರಿಗೂ ಉಪಯೋಗವಿಲ್ಲದ ಬಜೆಟ್ ಮಂಡಿಸಿದೆ ಎಂದಿದ್ದಾರೆ.
ರೈತರ ಬೆಳವಣಿಗೆ, ಯುವಕರಿಗೆ ದೂರದೃಷ್ಟಿಯುಳ್ಳ, ಬಡವರ ಪಾಲಿಗೆ ಯಾವುದೇ ಆಶಾದಾಯಕ ಬೆಳವಣಿಗೆ ಬಜೆಟ್ ನಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದ ಬಹುಬೇಡಿಕೆಯ ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ ಯೋಜನೆ, ಮೇಕೆದಾಟು ಯೋಜನೆಗಳ ಬಗ್ಗೆ ಏನು ನೀಡದೆ ಕನ್ನಡಿಗರಿಗೆ ಈ ಬಜೆಟ್ ದೊಡ್ಡ ನಿರಾಶದಾಯಕವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.
ತೆರಿಗೆ ವಿಚಾರದಲ್ಲೂ ದಕ್ಷಿಣ ಭಾರತದ ರಾಜ್ಯಗಳಿಗೆ ಮೋಸ ಮಾಡಿರುವ ಕೇಂದ್ರ ಸರ್ಕಾರ ತನ್ನ ಸರ್ಕಾರವನ್ನು ಭದ್ರ ಪಡಿಸಲು ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಹೆಚ್ಚಿನ ಲಾಭ ಕೊಟ್ಟಿರುವುದು ಕಂಡು ಬರುತ್ತಿದೆ. ಇದರಿಂದ ಕೇಂದ್ರ ಸರ್ಕಾರ ಖುರ್ಚಿ ಬಚಾವ್ ಬಜೆಟ್ ಮಂಡಿಸಿದೆ ಎಂದು ತಿಳಿಸಿದ್ದಾರೆ..
ತಮ್ಮನ್ನು ಬೆಂಬಲಿಸುವವರಿಗೆ ಬೆಣ್ಣೆ, ಕಾಂಗ್ರೆಸ್ ಆಡಳಿತ ರಾಜ್ಯಗಳಿಗೆ ಸುಣ್ಣ ಎಂಬAತಾಗಿದೆ ಎಂದು ಟೀಕಿಸಿದ್ದಾರೆ.
ಭಾರತ ಅಂದರೆ ಎಲ್ಲಾ ರಾಜ್ಯಗಳು ಕೂಡಿದರೆ ಮಾತ್ರ ಆಗುವುದು. ಕೇಂದ್ರ ಸರ್ಕಾರ ತನ್ನ ಬಜೆಟ್ ಮೂಲಕ ಭಾರತವನ್ನು ಒಡೆದು ಆಳುವದಕ್ಕೆ ಸಿದ್ದವಾಗಿದೆ ಎಂದು ಹೇಳಿದ್ದಾರೆ.