ಪ್ರೌಢಶಾಲಾ ಶಿಕ್ಷಕರ ಸಂಘದ ಸದಸ್ಯತ್ವ ಶುಲ್ಕ ಜಮಾವಣೆಗೆ ಮನವಿ
ಭಾಲ್ಕಿ: ಜು.೨೪:ಪ್ರಸ್ತುತ ೨೦೨೪ನೇ ಸಾಲಿನ ಪ್ರೌಢಶಾಲಾ ಶಿಕ್ಷಕರ ಸಂಘದ ಸದಸ್ಯತ್ವ ಶುಲ್ಕವನ್ನು ಶಿಕ್ಷಕರ ಸಂಬಳದಲ್ಲಿ ಕಟಾವು ಮಾಡಲಾಗಿದ್ದು ಅದನ್ನು ಸಂಬAಧಪಟ್ಟ ಖಾತೆಗೆ ಜಮಾ ಮಾಡಬೇಕು ಎಂದು ತಾಲೂಕು ಶಿಕ್ಷಕರ ಸಂಘದ ಪದಾಧಿಕಾರಿಗಳು ಖಜಾನಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತು ಕಾಟಕರ ನೇತೃತ್ವದಲ್ಲಿ, ಶಿಕ್ಷಕರ ಸಂಘದ ಪದಾಧಿಕಾರಿಗಳು, ಸರ್ಕಾರದ ಅಧೀನ ಕಾರ್ಯದರ್ಶಿಗಳು ಪ್ರೌಢಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯವರು ಹೊರಡಿಸಿದ ಆದೇಶದ ಅನುಸಾರ ಜುಲೈ೨೦೨೪ನೇ ತಿಂಗಳ ಪ್ರೌಢಶಾಲಾ ಶಿಕ್ಷಕರ ವೇತನದಲ್ಲಿ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸದಸ್ಯತ್ವ ಶುಲ್ಕ ಪ್ರತಿ ಒಬ್ಬ ಶಿಕ್ಷರ ೨೦೦ ರೂ.ಗಳನ್ನು ಕಟಾವು ಮಾಡಿ ಸಂಘದ ಕೇಂದ್ರ ಶಾಖೆಗೆ ಜಮಾ ಮಾಡಬೇಕು ಎಂದು ವಿನಂತಿಸಿಕೊAಡರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಂಜೀವಕುಮಾರ ಮೇತ್ರೆ, ನಿರಂಜಪ್ಪ ಪಾತ್ರೆ, ಚಂದ್ರಕಾAತ ತಳವಾಡೆ, ಸಂಜೀವ ಬಿರಾದಾರ(ಗಾಂಧಿ), ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು.