ಶ್ರಮಿಕರಿಗೆ ಪ್ರೋತ್ಸಾಹಿಸುವ ಬಜೇಟ್‌ಇದಾಗಿದೆ: ಭಗವಂತ ಖೂಬಾ
ಬೀದರ:ಜು.24:ವಿಶ್ವ ಮೆಚ್ಚಿದ ನಾಯಕರಾದ ಪ್ರಧಾನಿ ನರೇಂದ್ರ ಮೋದಿಜಿಯವರ ಮಾರ್ಗದರ್ಶನದಲ್ಲಿ, ಶ್ರೇಷ್ಠ ಭಾರತದದೃಷ್ಟಿಕೊನದಿಂದ ವಿತ್ತ ಸಚಿವೆ ನಿರ್ಮಲಾ ಸಿತಾರಾಮನರವರು ಇಂದು ಮಂಡಿಸಿರುವ ಬಜೇಟ್ ವಿಕಸಿತ ಭಾರತಕ್ಕೆಕಾಯಕಲ್ಪಕೊಡುವ ಬಜೇಟ್‌ಆಗಿರುತ್ತದೆ, ದೇಶದರೈತರ, ಮಹಿಳೆಯರ, ಯುವಕರಎಲ್ಲರ ಏಳಿಗೆಗೆ ಮುಂದಿನ 5 ವರ್ಷಗಳಲ್ಲಿ ಮಾಡಬಹುದಾದ ಕೆಲಸಗಳ ನೀಲಿನಕ್ಷೆಯ ಬಜೇಟಇದಾಗಿದೆ, ರೈತರ ಬೆಳೆಗಳ ಜೊತೆಗೆತರಕಾರಿ ಬೆಳೆಗೆ ಒತ್ತು, 1000 ಹೊಸ ಕೈಗಾರಿಕಾತರಬೇತಿ ಕೇಂದ್ರಗಳ ಸ್ಥಾಪನೆ ಮತ್ತು 1 ಕೋಟಿಯುವಕರಿಗೆ ಇಂಟರ್ನಶೀಪ್ ನೀಡಿ ಕೌಶಲ್ಯಾಭಿವೃದ್ದಿಗೊಳಿಸಿ ಯುವಕರಉದ್ಯೋಗಕ್ಕೆ ಸಹಾಯವಾಗಲಿದೆ.
ಪ್ರತಿ ಮನೆಗೆ ಉದ್ಯಮಿಯನ್ನು ನಿರ್ಮಿಸುವಉದ್ದೇಶದಿಂದ ಮುದ್ರಾಯೋಜನೆಯ ಮಿತಿ 10 ರಿಂದ 20 ಲಕ್ಷಏರಿಕೆ ಮಾಡಲಾಗಿದೆ, ಇದರಿಂದ ಎಮ್.ಎಸ್.ಎಮ್.ಈಗಳಿಗೂ ಹೆಚ್ಚಿನ ಬಲ ಬರಲಿದೆ, ಮುಂದಿನ ದಿನಗಳಲ್ಲಿ ಭಾರತವು ಮ್ಯಾನುಫ್ಯಾಕ್ಚರಿಂಗ್‌ಗ್ಲೋಬಲ್ ಹಬ್ ಮಾಡುವಕಲ್ಪನೆಐತಿಹಾಸಿಕವಾಗಿದ್ದು. ಮಧ್ಯಮವರ್ಗದವರಿಗೂ ಹೊರೆಯಾಗದಂತೆತೆರಿಗೆಯಲ್ಲಿ ಬದಲಾವಣೆ ಮಾಡಿರುವುದು ಸ್ವಾಗತಾರ್ಹ,
ಪ್ರವಾಸೋದ್ಯಮಕ್ಕೆಒತ್ತು ನೀಡಿರುವುದು, ಸೋಲಾರ್ ಶಕ್ತಿಗೆಒತ್ತು ನೀಡಿ, ಸೋಲಾರ್ ಪ್ಯಾನೇಲ್‌ಗಳ ದರ ಇಳಿಕೆ, ಆರೋಗ್ಯ ಕಾಳಜಿ, ಗ್ರಾಮ,ನಗರಗಳ ಅಭಿವೃದ್ದಿಗೆ ವಿಶೇಷ ಅನುದಾನ ನೀಡುತ್ತಿರುವುದುನವಭಾರತಕ್ಕೆ ಸಾಕ್ಷಿಯಾಗಲಿದೆ. ಐತಿಹಾಸಿಕ ಬಜೇಟ್ ನೀಡಿರುವದೇಶದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರಿಗೆ ಮತ್ತು ವಿತ್ತಸಚಿವೆ ನಿರ್ಮಲಾಸೀತಾರಾಮನವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.