75ನೇ ವರ್ಷದ ಎಫ್ ಪಿಎಐ ಸಂಸ್ಥಾಪನಾ ದಿನಾಚರಣೆ
ಬೀದರ:ಜು.೨೪:ಫ್ಯಾಮಿಲಿ ಪ್ಲಾö್ಯನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬೀದರ ಶಾಖೆಯಲ್ಲಿ “೭೫ನೇ ವರ್ಷದ ಎಫ್ ಪಿ ಎಐ ಸಂಸ್ಥಾಪನಾ ದಿನದ ಅಂಗವಾಗಿ ಶಾಖೆಯಲ್ಲಿ ವಜ್ರಮಹೋತ್ಸವ ಕಾರ್ಯಕ್ರಮ” ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೀದರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಧ್ಯಾನೇಶ್ವರ ನಿರಗುಡೆ ಇವರು ಎಫ್ ಪಿ ಎಐ ಸಂಸ್ಥೆಯು ಬೀದರನಲ್ಲಿ ಕುಟುಂಬ ಯೋಜನೆ ಸೇವೆ ನೀಡುವಲ್ಲಿ ಅಗ್ರಗಣ್ಯ ಸಂಸ್ಥೆಯಾಗಿದೆ. ಮಾಹಿತಿ, ಶಿಕ್ಷಣ, ತರಬೇತಿ ಹಾಗೂ ಆರೋಗ್ಯ ಸೇವೆಗಳ ಮೂಲಕ ಹೆಸರುವಾಸಿಯಾಗಿದೆ. ವೈದ್ಯರಿಗೆ ಹಾಗೂ ಅರೆವೈದ್ಯಕೀಯ ಸೇವಾನಿರತರಿಗೆ ವಿಶೇಷ ತರಬೇತಿಗಳನ್ನು ಆಯೋಜಿಸುವ ಮೂಲಕ ಗುರುತಿಸಿಕೊಂಡಿದೆ. ಸಂಸ್ಥೆಯ ಸೇವೆ ನಿರಂತರವಾಗಿ ನಡೆದುಕೊಂಡು ಹೋಗಲಿ ಎಂದು ಶುಭ ಹಾರೈಸಿದರು. ಹಾಗೂ ಎಫ್ ಪಿ ಎಐ ಸಂಸ್ಥೆಯ ಬೆಳವಣಿಗೆಗೆ ಬೀದರನ ಖ್ಯಾತ, ನುರಿತ ಎಲ್ಲಾ ಸ್ವಯಂ ಸೇವಕರ ಹಾಗೂ ಎಲ್ಲ ಸಿಬ್ಬಂದಿ ವರ್ಗದವರ ಸೇವೆ ಅನನ್ಯವಾದದ್ದು ಎಂದು ಹೇಳಿದರು.
ಎಫ್ ಪಿ ಎಐ ಸಂಸ್ಥೆಯ ಅಧ್ಯಕ್ಷರಾದ ಡಾ. ನಾಗೇಶ ಪಾಟೀಲ್ ಇವರು ೭೫ನೇ ವರ್ಷದ ಸಂಸ್ಥಾಪನಾ ದಿನದಂದು ಎಲ್ಲರಿಗೂ ಶುಭ ಕೋರಿ, ಎಫ್ ಪಿ ಎಐ ಬೀದರ ಶಾಖೆ ಇಷ್ಟೊಂದು ಉತ್ತಮವಾಗಿ ಕಾರ್ಯನಿರ್ವಹಿಸಲು ಎಲ್ಲಾ ಮಾಜಿ ಅಧ್ಯಕ್ಷರುಗಳ, ಹಿರಿಯ ಸ್ವಯಂ ಸೇವಕರುಗಳ, ಎಲ್ಲಾ ಸದಸ್ಯರ ನಿಸ್ವಾರ್ಥ ಸೇವೆ ಅನನ್ಯವಾದದ್ದು ಎಂದು ತಿಳಿಸಿದರು. ಹಾಗೂ ಕಡು ಬಡವರಿಗೆ ಎಫ್ ಪಿ ಎಐ ನ ಸೇವಾ ಸೌ¯ಭ್ಯಗಳು ಉಚಿತವಾಗಿ ನೀಡುತ್ತಿದ್ದು, ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗಳನ್ನು ನೀಡಲು ಎಲ್ಲರೂ ಶ್ರಮಿಸುವುದಾಗಿ ತಿಳಿಸಿದರು.
ಎಫ್ ಪಿ ಎಐ ಸಂಸ್ಥೆ ಕೇಂದ್ರ ಕಛೇರಿಯ ಮಾಜಿ ಖಜಾಂಚಿಗಳಾದ ಡಾ. ಆರತಿ ರಘು ಇವರು ಸಂಸ್ಥೆಯ ಸೇವೆಗಳಲ್ಲಿ ಗರ್ಭಕೋಶ ಕೊರಳಿನ ಕ್ಯಾನ್ಸರ್ ಕುರಿತು ಅರಿವು, ಪರೀಕ್ಷೆ ಹಾಗೂ ಊPಗಿ ಲಸಿಕೆ ಬಗ್ಗೆ ತಿಳಿಸಿದರು.
ಈPಂI ಸಂಸ್ಥೆಯ ಹಿರಿಯ ಸದಸ್ಯರು ಹಾಗೂ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಅಬ್ದುಲ್ ಖದೀರ್ ಇವರು “ಎಫ್ ಪಿ ಎಐ ಸಂಸ್ಥೆ ಬೀದರನಲ್ಲಿ ೫೦ ವರ್ಷಗಳಿಂದ ಮಹಿಳೆಯರು, ಮಕ್ಕಳು, ಹದಿಹರೆಯದವರ ಆರೋಗ್ಯ, ಕುಟುಂಬ ಯೋಜನೆ ಇನ್ನಿತರ ಸೇವೆಗಳು ನೀಡುತ್ತಿರುವುದು ಹೆಮ್ಮೆಯ ಸಂಸ್ಥೆಯಾಗಿದೆ. ಈ ಸಂಸ್ಥೆ ಮೌಲ್ಯಗಳನ್ನಾಧರಿಸಿ ಬಡಜನರಿಗೆ ದೂರದ ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ನಾನು ಬಹುಕಾಲದಿಂದಲೂ ಗಮನಿಸುತ್ತಾ ಬಂದಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಡಾ. ವಿಜಯಶ್ರೀ ಬಶೆಟ್ಟಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ದಿಲೀಪ್ ಡೋಂಗ್ರೆ, ರೋಟರಿ ಕ್ಲಬ್ ಆಫ್ ಬೀದರ ನ್ಯೂ ಸೆಂಚುರಿಯ ಗೌರವ ಖಜಾಂಚಿಗಳಾದ ಡಾ. ಶರಣ ಬುಳ್ಳಾ ಇವರುಗಳು ಕಾರ್ಯಕ್ರಮದ ಕುರಿತು ಮಾತನಾಡಿದರು.
ಎಫ್ ಪಿ ಎಐ ಸಂಸ್ಥೆಯ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಬಿರಾದಾರ ಇವರು ಪ್ರಾಸ್ತವಿಕವಾಗಿ ಮಾತನಾಡಿ, ಎಲ್ಲರಿಗೂ ಸ್ವಾಗತ ಕೋರಿದರು ಹಾಗೂ ಈPಂI ಸಂಸ್ಥೆಯ ೭೫ ವರ್ಷಗಳ ವಜ್ರಮಹೋತ್ಸವದ ಅಂಗವಾಗಿ ಮುಂದಿನ ದಿನಗಳಲ್ಲಿ ಇತ್ತೀಚಿಗೆ ಹೆಚ್ಚಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿರುವ ಗರ್ಭಕೋಶ ಕೊರಳಿನ ಕ್ಯಾನ್ಸರ್ ಕುರಿತು ಅರಿವು- ಜಾಗೃತಿ ಮೂಡಿಸುವ ಸಲುವಾಗಿ ಬೀದರ ನಗರದಲ್ಲಿ ವಾಕ್‌ಥಾನ್, ಸೈಕಲ್ ರ‍್ಯಾಲಿ ನಡೆಸಲಾಗುವುದು, ಮಹಿಳೆಯರಿಗೆ ಗರ್ಭಕೋಶ ಕೊರಳಿನ ಕ್ಯಾನ್ಸರ್‌ನ ಸ್ಕಿçÃನಿಂಗ್ ಮಾಡಲಾಗುವುದು, ಹದಿಹರೆಯದ ಹೆಣ್ಣುಮಕ್ಕಳಿಗೆ ಊPಗಿ ಲಸಿಕೆ ಹಾಕಲಾಗುವುದು ಹಾಗೂ ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉತ್ತಮ ಸೇವೆ ನೀಡುವುದಾಗಿ ತಿಳಿಸಿದರು
ಎಫ್ ಪಿ ಎಐ ಸಂಸ್ಥೆಯ ೭೫ ವರ್ಷಗಳ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಬೀದರ ನ್ಯೂ ಸೆಂಚುರಿಯ ಅಧ್ಯಕ್ಷರಾದ ಶ್ರೀ. ಶಿವಕುಮಾರ ಪಾಕಲ್, ಗೌರವ ಖಜಾಂಚಿಗಳಾದ ಡಾ. ಶರಣ್ ಬುಳ್ಳಾ, ಗೌರವ ಕಾರ್ಯದರ್ಶಿಗಳಾದ ಶ್ರೀ ಪ್ರಭು ತಡಪತಿ ಹಾಗೂ ರೋಟರಿ ಕ್ಲಬ್ ಆಫ್ ಬೀದರ ಸಿಲ್ವರ್ ಸ್ಟಾರ್‌ನ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಪೂಜಾ ಜಾರ್ಜ್ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಹಾಗೂ ಇದೇ ಸಂದರ್ಭದಲ್ಲಿ ಎಫ್ ಪಿ ಎಐ ಬೀದರ ಶಾಖೆಯಲ್ಲಿ ಸುಮಾರು ೪೨ ವರ್ಷಗಳಿಂದ ಕಛೇರಿ ಸಹಾಯಕರಾಗಿ ಉತ್ತಮವಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಬಸವರಾಜ ಓತ್ಗೆ ಇವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಎಫ್ ಪಿ ಎಐ ಸಂಸ್ಥೆಯ ಅಂಕಿ ಸಂಖ್ಯಾಧಿಕಾರಿಗಳು ಹಾಗೂ ಆಪ್ತ ಸಮಾಲೋಚಕರಾದ ವಿನಾಯಕ ಕುಲಕರ್ಣಿ ಇವರು ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರುಗಳು, ಕಾರ್ಯಕಾರಿಣಿ ಸಭೆಯ ಸದಸ್ಯರು, ಹಿರಿಯ ಸಲಹಾಗಾರರು, ಜಿಲ್ಲಾ ಆರೋಗ್ಯ ಕೇಂದ್ರದ ಕೆಲ ಸಿಬ್ಬಂದಿವರ್ಗದವರು, ರೋಟರಿ ಕ್ಲಬ್ ಆಫ್ ಬೀದರನ ಪದಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಹಲಬರ್ಗಾದ ಕೆಲ ಸಿಬ್ಬಂದಿವರ್ಗದವರು ಹಾಗೂ ಎಫ್ ಪಿ ಎಐ ನ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ನಂತರ ಆಶಾ ಕಾರ್ಯಕರ್ತೆಯರಿಗೆ ಹಾಗೂ ಇತರ ಮಹಿಳೆಯರಿಗೆ ಗರ್ಭಕೋಶ ಕೊರಳಿನ ಕ್ಯಾನ್ಸರ್‌ನ ಸ್ಕಿçÃನಿಂಗ್ ಮಾಡಲಾಯಿತು.