ಸದೃಢ ದೇಹ ಮಾನಸಿಕ ನೆಮ್ಮದಿಗಾಗಿ ಯೋಗ ಅವಶ್ಯಕ
ಬೀದರ:ಜು.೨೪:ನಿಗದಿತ ಸಮಯ ಮತ್ತು ಪ್ರಮಾಣದಲ್ಲಿ ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅನೇಕ ರೋಗ ರುಜುನಗಳನ್ನು ತಡೆಗಟ್ಟಬಹುದು, ಸದೃಢ ದೇಹ ಮಾನಸಿಕ ನೆಮ್ಮದಿಗಾಗಿ ಯೋಗ ಅವಶ್ಯಕ ಎಂದು ಆಯುಷ್ಯ ವೈದ್ಯಾಧಿಕಾರಿ ಡಾ ಸರಸ್ವತಿ ನುಡಿದರು.
ಬೀದರ್ ತಾಲೂಕಿನ ಸಿರಕಟ್ ನಳ್ಳಿ ಗ್ರಾಮದಲ್ಲಿ ಆಯುಷ್ ಇಲಾಖೆ ಬೆಂಗಳೂರು ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ಬೀದರ್ ಸಂಯುಕ್ತಾಕ್ಷರದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಶಿಬಿರದಲ್ಲಿ ಗ್ರಾಮಸ್ಥರಿಗೆ ಆಯುರ್ವೇದ ಔಷಧಿಯ ಚಿಕಿತ್ಸಾ ಕ್ರಮಗಳು, ಗಿಡಮೂಲಿಕೆ, ಆಯುರ್ವೇದ ದಿನಚರಿ, ಆಹಾರ ಪದ್ಧತಿ,ಯೋಗ ಮತ್ತು ಪ್ರಾಣಾಯಾಮದ ಉಪಯೋಗಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ವೀರಶೆಟ್ಟಿ ಚಟ್ನನಳ್ಳಿ, ಉಪಾಧ್ಯಕ್ಷ ಪಾಂಡುರAಗ ಕೋಳಿ, ವೈದ್ಯಾಧಿಕಾರಿ ಡಾ ಜ್ಯೋತಿ ಲಕ್ಷ್ಮಿ,ಸದಸ್ಯರಾದ ಜಗನ್ನಾಥ್ ಪಾಟೀಲ್ ಪೀ ರಪ್ಪ ಹೂಗಾರ್ ಜಯಶೀಲ್ ಕಾಶಿನಾಥ್ ವಿಶ್ವನಾಥ ಬಸಯ್ಯ ಸ್ವಾಮಿ ಹನುಮಂತ್ ಬಾಬು ಗುಂಡಪ್ಪ ಈಶ್ವರ್ ರಮೇಶ್ ಶಾರದಾ ಮನೋಹರ್ ಆಶಾ ಕಮಲಾಬಾಯಿ ಯೋಗ ಶಿಕ್ಷಕಿಕುಶಾಲಾ ವಿಠ್ಠಲ್ ಸೇರಿದಂತೆ ಗ್ರಾಮಸ್ಥರಿದ್ದರು.