ಭಕ್ತ ಮಹಾಶಯರೇ ನಿಜವಾದ ಧರ್ಮ ಸಂರಕ್ಷಕರು : ಡಾ. ರಾಜಶೇಖರ ಶಿವಾಚಾರ್ಯರು
ಬೀದರ:ಜು.೨೪:ಗುರು ಧರ್ಮದ ಸುಭದ್ರತೇ ಸಂರಕ್ಷಣೆ ಮತ್ತು ಬೆಳವಣಿಗೆಯಲ್ಲಿ ಭಕ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಬೇಮಳಖೇಡದ ಶ್ರೀ ಷ.ಬ್ರ. ಡಾ|| ರಾಜಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಅವರು ಗುರುಪೂರ್ಣಿಮಾ ನಿಮಿತ್ತ ನಗರದ ನೌಬಾದ ಹತ್ತಿರ ಜ್ಞಾನಶಿವಯೋಗಾಶ್ರಮದಲ್ಲಿ ನಡೆದ ಗುರು ವಂದನಾ ಕರ‍್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಆಧ್ಯಾತ್ಮ ಜೀವನದಲ್ಲಿ ಭಕ್ತ ಭಗವಂತನ ಸಂಬAಧ ಸಂಸಾರದ ಎಲ್ಲ ಸಂಬAಧಗಳಿಗಿAತ ಶ್ರೇಷ್ಠವಾಗಿರುವಂತೆ, ಸಂಸಾರಿಕ ಜಗತ್ತಿನಲ್ಲಿ ಭಕ್ತ ಮತ್ತು ಗುರುವಿನ ಸಂಬAಧವೂ ಕೂಡ ಅಷ್ಟೇ ಮಹತ್ವದ್ದಾಗಿದೆ, ಭಕ್ತರ ಭಕ್ತಿಯು ಗುರುತತ್ವದ ಗೌರವ ಶ್ರದ್ಧೆ ಎತ್ತಿ ಹಿಡಿದಿದೆ. ಆದರೆ ಇಂದು ಶಿಷ್ಯನ ನಿಷ್ಠೆ ಅಷ್ಠೇ ಗಟ್ಟಿಯಾಗಿದ್ದರೂ ಗುರುತತ್ವದ ಅಸ್ತಿತ್ವ ಸಡಿಲಗೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ.
ಭಾರತೀಯ ಸನಾತನ ಧರ್ಮ ಸಂಸ್ಕೃತಿಯಲ್ಲಿ ಸದ್ಗುರುವಿಗೆ ಪರಮೋಚ್ಚ ಸ್ಥಾನವಿದೆ. ಗುರು ಹರನ ಸಾದೃಶ್ಯ ರೂಪವೆಂದು ಗೌರವಿಸಲ್ಪಟ್ಟಿದೆ. ಗುರು ನಡೆದಾಡುವ, ಮಾತನಾಡುವ ದೇವರೆಂದೇ ಭಾವಿಸಿ ಭಕ್ತರು ನಡೆದು ಕೊಳ್ಳುತ್ತಾರೆ. ಗುರು ಭಕ್ತರಿಗೆ ದೀಕ್ಷೆಯ ಮೂಲಕ ಸಂಸ್ಕಾರ ಸದಾಚಾರವನ್ನು ಬಿತ್ತಿ ಬೆಳೆದು ಸನ್ಮಾರ್ಗ ತೋರಿ ಬದುಕು ಬಂಗಾರ ಮಾಡುವವರು. ಗುರು ತನ್ನ ಅಸಾಧಾರಣ ದಿವ್ಯ ಸಾಧನೆಯಿಂದ ಭಕ್ತ ಸಮುದಾಯ ತನ್ಮೂಲಕ ಸಮಾಜ ನಾಡು-ದೇಶವನ್ನು ಉದ್ಧಾರ ಮಾಡುವ ಮಹಾಶಕ್ತಿ ಗುರುವಿಗಿದೆ. ಅತ್ಯಂತ ಶ್ರೇಷ್ಠ ಸ್ಥಾನದಲ್ಲಿರುವ ಗುರುತನದಲ್ಲಿ ಇಂದು ಅಜ್ಞಾನ, ಅಹಂಕಾರ, ಸ್ವಾರ್ಥ, ಸ್ವಜನ ಪಕ್ಷಪಾತ, ವ್ಯಕ್ತಿ ಪ್ರತಿಷ್ಠೆ ಮತ್ತು ಸಮಾಜದ ಅಗೌರವ ಮುಂತಾದವುಗಳು ಹೊಕ್ಕು ತಲ್ಲಣಗೊಂಡು ಅಪಾಯದತ್ತ ಜರುಗುತ್ತಿರುವ ದುರ್ದೈವದ ಸಂಗತಿಯಾಗಿದೆ.
ಎಲ್ಲ ಕ್ಷೇತ್ರಗಳಂತೆ ಧರ್ಮ ಕ್ಷೇತ್ರದಲ್ಲಿಯೂ ರಾಜಕಾರಣ ಮನೆ ಮಾಡಿ ಮಲೀನಗೊಳ್ಳುತ್ತಿದೆ. ಇದು ಹೀಗೆ ಮುಂದುವರೆದರೆ ಭಯಾನಕ ಸ್ಥಿತಿ ತಲೆದೋರ ಬಹುದು. ಇದನ್ನು ತಡೆಗಟ್ಟುವುದು ಅವಶ್ಯಕವಾಗಿದೆ. ಮಠಾಧೀಶರು ರಾಜಕೀಯದಲ್ಲಿ ಬಂದರೆ ಭಕ್ತರು ಧರ್ಮ ಎಲ್ಲಿಗೆ ಹೋಗಬೇಕೆಂಬ ಪ್ರಶ್ನೆ ಭಕ್ತರನ್ನು ಕಾಡುತ್ತಿದೆ ಭಕ್ತರು ಜಾಗೃತಗೊಳ್ಳಬೇಕು ಮಠಗಳು ಮನೆಗಳಾದರೆ, ಮಠಾಧೀಶರು ಎಂ.ಪಿ, ಎಂ.ಎಲ್.ಎ ಸ್ಥಾನದತ್ತ ಚಿತ್ತ ಹರಿಸುತ್ತಿದ್ದರೆ ಧರ್ಮದ ಗತಿ ಅಧೋಗತಿಯೇ ಸರಿ ಎಂದಾ ಶ್ರೀಗಳು ಹಿಂದೆAದಿಗಿAತಲೊ ಈಗ ಭಕ್ತರು ಎಚ್ಚರಗೊಂಡು ಧರ್ಮವನ್ನು ಕಾಪಾಡಬೇಕೆಂದು ಶ್ರೀಗಳು ಹೇಳಿದರು.
ರಾಜ್ಯ ದಿಶಾ ಸಮಿಯ ಸದಸ್ಯ ಶಿವಯ್ಯ ಸ್ವಾಮಿ, ಮಾಳೇವಾಡಿ ಕಿಶನರಾವ ಬಿರಾದಾರ, ಗಂಗಾಧರಪ್ಪ ಮಾಳೇವಾಡಿ, ನಗರಸಭೆ ಸದಸ್ಯೆ ಮಹಾದೇವಿ ಹುಮನಾಬಾದೆ, ಸರಸ್ವತಿ ಗೌರಶೆಟ್ಟಿ, ಸುನೀತಾ ಕಂಟೆಪ್ಪಾ ಭಂಗೊರೆ, ಶಿವಕುಮಾರ ಕೋಳಾರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಯೋಗಪಟು ಯೋಗೇಶ ಯದ್ಲಾಪೂರೆ, ಮಾದೇವಪ್ಪಾ ಭಂಗೊರೆ, ಮಹಾದೇವಿ ಮಠಪತಿ ಧನ್ನೂರು ಗುರುವಂದನ ನುಡಿ ಸೇವೆ ಸಲ್ಲಿಸಿದರು ಲಂಜವಾಡ ಶಿವಾನಂದ ಸ್ವಾಮಿ ಪ್ರಾಸ್ತವಿಕ ನುಡಿ ಹೇಳಿದರು, ಮುಕ್ತಾ ಬ್ಯಾಂಕ್ ಅಧ್ಯಕ್ಷರಾದ ರಾಜಕುಮಾರ ಸಜ್ಜನಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು,
ಸುನಿತಾ ಕಂಟೆಪ್ಪಾ ಭಂಗೊರೆ ರವರು ದಾಸೋಹ ಸೇವೆಯನ್ನು ನೇರವೇರಿಸಿದ್ದರು, ರಮೇಶ ಅರಳೆ, ಪ್ರಕಾಶ ಪಾಟೀಲ, ಸಂಗಮೇಶ ಹುಮನಾಬಾದೆ, ಪ್ರಭು ತರನಳ್ಳಿ, ಓಂ ಪ್ರಕಾಶ ರೊಟ್ಟೆ, ರೇವಣಸಿದ್ದಪ್ಪಾ ನೀಲಾ, ಹಣಮಂತಪ್ಪಾ ಮರಕುಂದಾ ಮುಂತಾದ ಗಣ್ಯರು ಇದ್ದರು. ಮಾಳೇವಾಡಿಯ ಭಜನ ಮಂಡಳಿ ಭಜನೆ ಸಂಗೀತ ಎಲ್ಲರ ಗಮನ ಸೆಳೆಯಿತು.