ಕೇಂದ್ರ ಬಜೆಟ್ ಸ್ವಾಗತಾರ್ಹ
ಬೀದರ:ಜು.೨೪:೨೦೨೪-೨೫ನೇ ಸಾಲಿನ ಶ್ರೀಮತಿ ನಿರ್ಮಲಾ ಸಿತಾರಾಮನ್ ಮಂಡಿಸಿದ ಬಜೆಟ್ ಕೃಷಿಗೆ, ಉದ್ಯೋಗ ಸೃಷ್ಟಿಗೆ ಹಾಗು ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಅನುದಾನ ಘೋಷಿಸಿರಿವುದು ಸ್ವಾಗತಾರ್ಹವಾಗಿದೆ.
ಮುಂಬರುವ ೫ ವರ್ಷಗಳಲ್ಲಿ ೪ ಕೋಟಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಭರವಸೆ ನೀಡುವ ಬಜೆಟ್ ಆಗಿದೆ ಎಂದು ಚೆಂಬರ್ ಆಫರ್ ಕಾಮರ್ಸ ತಿಳಿಸಿದೆ.
ಕ್ಯಾನ್ಸರ್ ರೋಗಿಗಳಿಗಾಗಿ ಉಪಯೋಗಿಸುವ ಯಂತ್ರೋಪಕರಣಗಳ ಮೇಲಿನ ಅಮದು ತೆರಿಗೆ ಕಡಿಮೆ ಮಾಡುವುದಲ್ಲದೇ ಕ್ಯಾನ್ಸರ್ ಔಷಧ ಮೇಲಿನ ಅಮದು ಶುಲ್ಕ ಸಂಪೂರ್ಣ ಕಡಿತಗೊಳಿಸಲಾಗಿದೆ. ಇದರಿಂದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲಕರವಾಗಿದೆ.
ಮೋಬೈಲ್ ಫೋನುಗಳ ಉತ್ಪಾದನೆ ಆರುಪಟ್ಟು ಹೆಚ್ಚಳಮಾಡುವ ಗುರಿ ಅಲ್ಲದೇ ಮೋಬೈಲ್ ಫೋನ್‌ಗಳ ಬಿಡಿಭಾಗಗಳ ಮೇಲಿನ ಅಮದು ತೆರಿಗೆ ಕಡಿಮೆ ಮಾಡಲಾಗಿದೆ.
ಕೃಷಿಗೆ ಹೆಚ್ಚು ಒತುಕೊಟ್ಟು ರೂ ೧.೫೨ ಲಕ್ಷ ಕೋಟಿ ಅನುದಾನ ಮೀಸಲಿಡಲಾಗಿದೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ. ೧೨ ಕೈಗಾರಿಕಾ ಪಾರ್ಕ ಅಭಿವೃದ್ಧಿ ಮಾಡಲಾಗುವುದು ಹಾಗು ಕಾರ್ಮಿಕರ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಪಿಎಂ ಆವಾಸ್ ಅಡಿಯೋಜನೆಯಲ್ಲಿ ೩ ಕೋಟಿ ಮನೆಗಳ ನಿರ್ಮಿಸಲಾಗುವುದು ಮತ್ತು ಬಡವರಿಗೆ ಮನೆ ನಿರ್ಮಾಣಕೋಸ್ಕರ ಬಡ್ಡಿ ರಹಿತ ಸಾಲ ನೀಡಲಾಗುವುದು. ಬ್ಯಾಂಕ ದಿವಾಳಿ ತಪ್ಪಿಸಲು ಹೊಸ ನೀತಿ ಘೋಶಿಸಲಾಗಿದೆ. ಸೌರ ಶಕ್ತಿ ಉತ್ಪಾದನೆಗೆ ಒತ್ತು ನೀಡಲಾಗಿದೆ ಮತ್ತು ಪಿಎಂ ಸೂರ್ಯಘರ ಯೋಜನೆ ಪ್ರಾರಂಭಿಸಲಾಗಿದೆ.
ಬೀದರ ನಾಂದೇಡ ವಾಯಾ ಔರಾದ ದೇಗಲೂರ ಹೊಸ ಮಾರ್ಗ ನಿರ್ಮಾಣಕ್ಕೆ ಯಾವುದೇ ಅನುದಾನ ನೀಡದಿರುವುದು ಬೀದರ ಜನರಿಗೆ ನಿರಾಶೆ ಮುಡಿಸಿದೆ.
ನೌಕರರ ಆದಾಯದ ಸ್ಟಾö್ಯಂಡರ್ಡ ಡಿಡಕ್ಷನ್ ರೂ ೫೦ ಸಾವೀರ ಇದ್ದಿದ್ದು ೭೫ ಸಾವೀರಕ್ಕೆ ಹೆಚ್ಚಿಸಲಾಗಿದೆ. ತೆರಿಗೆ ಪದ್ದತಿಯಲ್ಲಿ ಸರಳಿಕರಣ ಗೊಳಿಸಲಾಗಿದೆ. ಹಾಗು ತೆರಿಗೆ ದರಗಳನ್ನು ಕಡಿಮೆ ಮಾಡಿ ಕೆಲವು ತೆರಿಗೆ ದಂಡಗಳನ್ನು ರದ್ದುಗೊಳಿಸಲಾಗಿದೆ.
ದೇಶದಲ್ಲಿ ಕೃಷಿ ಸಂಶೋದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ೩೦ ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ಹಾಗು ಮಹಿಳೆಯರಿಗೂ ತರಬೇತಿ ನಿಡುವುದಕ್ಕೆ ಒತ್ತು ಕೊಡಲಾಗಿದೆ. ಮುಂಬರುವ ೫ ವರ್ಷಗಳಲ್ಲಿ ನಾಲ್ಕು ಕೋಟಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಈ ಬಜೆಟ್ ಪೂರಕವಾಗಿದೆ. ಒಟ್ಟಾರೆಯಾಗಿ ಹೇಳಬೇಕಾದರೆ ಬಡವರಿಗೆ, ಮಧ್ಯಮ ವರ್ಗದವರಿಗೆ ಸಂಬಳದಾರರಿಗೆ, ತರಿಗೆ ದಾರರಿಗೂ ಸಹ ಹಾಗು ಕೈಗಾರಿಕಾ ಉದ್ದಿಮೆಗಳಿಗೆ ಪರೋಕ್ಷ ಮತ್ತು ಅ ಪರೋಕ್ಷವಾಗಿ ಈ ಬಜೆಟ್‌ನಿಂದ ಅನುಕೂಲವಾಗಲಿದೆ ಎಂದು
ಬಿ.ಜಿ. ಶೆಟಕಾರ, ಅಧ್ಯಕ್ಷರು ಹಾಗೂ ಡಾ. ವಿರೆಂದ್ರ ಶಾಸ್ತಿç ಕಾರ್ಯದರ್ಶಿಗಳು ತಿಳಿಸಿದ್ದಾರೆ.