ಮಹಾಪುರುಷರ ತತ್ವಗಳೊಂದಿಗೆ ಧಮ್ಮದೀಪದ ಆಚರಣೆಗೆ ಬಂತೇಜಿ ಕರೆ
ಆಳಂದ:ಜು.೨೪: ಬುಧ್ಧ ಹಾಗೂ ಡಾ. ಬಿ.ಆರ್. ಅಂಬೇಡ್ಕರವರ ತತ್ವ ಆದರ್ಶಗಳು ಇಂದಿನ ಯುವ ಸಮೂಹ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಕಾರ್ಯಗತ್ತರಾಗಬೇಕೆಂದು ಬೆಳಮಗಿಯ ಅಮರ ಜ್ಯೋತಿ ಭಂತೆಜೀ ಅವರು ಕರೆ ನೀಡಿದರು.
ತಾಲೂಕಿನ ಧಂಗಾಪೂರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಡಾ. ಬಿ.ಆರ್.ಅಂಬೇಡ್ಕರ ಸೇವಾ ಸಂಘವು ಆಯೋಜಿಸಿದ್ದ ಧಮ್ಮ ದೀಪೋತ್ಸವ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮೂಢÀನಂಬಿಕೆಗಳಿAದ ಹೊರ ಬಂದು ಸನ್ಮಾರ್ಗದ ಕಡೆ ನಾವು ನಡೆಯಬೇಕಾಗಿದೆ. ಇದನ್ನು ಯಶ್ವಸಿಯಾಗಬೇಕಾದರೆ ಗೌತಮ ಬುದ್ಧರ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ವಿಚಾರಗಳು ಅಧ್ಯಯನ ಮೂಲಕ ಮೈಗೂಡಿಸಕೊಳ್ಳಬೇಕು. ಜೊತೆಗೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿಕೊಳ್ಳಬೇಕೆAದರು.
ಸಂಘದ ಅಧ್ಯಕ್ಷ ಶಿವಲಿಂಗ ತೇಲ್ಕರ ಮಾತನಾಡಿ, ಗ್ರಾಮದಲ್ಲಿ ಪ್ರತಿಯೊಬ್ಬರು ಸಹಾಕರದಿಂದ ಡಾ. ಅಂಬೇಡ್ಕರ್ ಅವರ ಮೂರ್ತಿ ನಿರ್ಮಾಣ ಮಾಡಿ ಪ್ರತಿಷ್ಠಾಪಿಸಲಾಗಿದೆ. ಪ್ರತಿ ಹುಣಿಮೆ ದಿನದಂದು ಧಮ್ಮ ದಿಪೋತ್ಸವ ಕಾರ್ಯಕ್ರಮ ನಡೆಸಲಾಗುವುದು ತಿಳಿಸಿದರು.
ಈ ಸಂದರ್ಭದಲ್ಲಿ ಲಕ್ಷಿö್ಮÃಭಾಯಿ ಬಾಬು ಭೂಸನೂರ ಧಂಪತಿಗಳಿAದ ದೀಪೋತ್ಸವ ಕಾರ್ಯಕ್ರಮವು ಮನೆಯಿಂದ ಅಂಬೇಡ್ಕರ ಪ್ರತಿಮೆ ವರೆಗೆ ಮೇಣದ ಬತ್ತಿ ಬೆಳಗುವ ಮೂಲಕ ಮಹಾಪುರುಷರ ಭಾವ ಚಿತ್ರಗಳ ಮೇರವಣಿಗೆ ಮಾಡಲಾಯಿತು.
ತುಕಾರಮ ಮೇಲಕೇರಿ, ಶರಣಬಸಪ್ಪ ಕಾಂಬಳೆ, ಕೃಷ್ಣಾ ಮೇಲಕೇರಿ, ಕೃಷ್ಣಾ ಕಾಂಬಳೆ, ವಿಠ್ಠಲ ಪಟ್ಟಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿವಕುಮಾರ ಮೇಲಕೇರಿ ನಿರೂಪಿಸಿದರು, ಅಮೃತ ಮೇಲಕೇರಿ ಪ್ರಾಸ್ಥವಿಕ ಮಾತನಾಡಿದರು. ಶರಣಬಸವೇಶ್ವರ ಕೋರೆ ವಂದಿಸಿದರು. ನಂತರ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.