ಖಾಸಗಿ ಶಾಲಾ ಅಡಳಿತ ಮಂಡಳಿ ಸಂಘದಿಂದ ಪ್ರತಿಭಟನೆ ನಾಳೆ
ಭಾಲ್ಕಿ:ಜು.೨೪: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ ೨೫ರಂದು ಬೀದರ್ನಲ್ಲಿ ಖಾಸಗಿ ಶಾಲೆಗಳ ಅಡಳಿತ ಮಂಡಳಿ ಹಾಗೂ ಸಿಬ್ಬಂದಿಗಳಿAದ ಬೃಹತ್ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಭಾಲ್ಕಿಯ ಸದ್ಗುರು ವಿದ್ಯಾಲಯದಲ್ಲಿ ಮಂಗಳವಾರ ಸಂಘದ ಗೌರವಾಧ್ಯಕ್ಷ ರೇವಣಸಿದ್ಧಪ್ಪ ಜಲಾದೆ ಹಾಗೂ ಜಿಲ್ಲಾಧ್ಯಕ್ಷ ರಾಜೇಂದ್ರ ಮಣಿಗೆರೆ ಅವರು ಕರಪತ್ರ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಜಲಾದೆ ಅವರು, ಕರ್ನಾಟಕ ರಾಜ್ಯದಲ್ಲಿ ಬಹುತೇಕ ಖಾಸಗಿ ಕನ್ನಡ ಶಾಲೆಗಳು ಸಂಪೂರ್ಣ ಮುಚ್ಚಿಹೋಗಿವೆ. ಇದಕ್ಕೆ ಸರ್ಕಾರದ ನಿರ್ಲಕ್ಷತೆಯೇ ಕಾರಣವಾಗಿದೆ ಎಂದು ಜಲಾದೆ ಆರೋಪಿಸಿದರು. ಶಾಸಗಿ ಶಾಲೆಗಳ ನವೀಕರಣ ಸರಳಿಕರಣಗೊಳಿಸಬೇಕು. ೧೯೯೫ರ ನಂತರ ಆರಂಭಗೊAಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಆರ್ಟಿಇ ಮರುಜಾರಿಗೊಳಿಸಬೇಕು. ೩೭೧(ಜೆ) ಅಡಿಯಲ್ಲಿ ಸಿಗಬೇಕಾದ ಸೌಲಭ್ಯಗಳನ್ನು ಶಾಲೆಗಳಲ್ಲಿ ಕೊಡಬೇಕು. ಅನಧಿಕೃತ ಕೋಚಿಂಗ್ಸೆAಟರ್ಗಳನ್ನು ಮುಚ್ಚಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಜು. ೨೫ರಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವದು ಎಂದು ಹೇಳಿದರು. ಅದಕ್ಕೂ ಮುನ್ನ ಜು, ೨೫ರ ಮುಂಜಾನೆ ೧೦:೩೦ಕ್ಕೆ ನೆಹರು ಕ್ರೀಡಾಂಗಣದ ಬಳಿಯ ಸಾಯಿ ಸ್ಕೂಲ್ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಸಂಘದ ಭಾಲ್ಕಿ ತಾಲೂಕು ಅಧ್ಯಕ್ಷ ರೋಹಿತ್ ವೈರಾಗೆ, ಪ್ರಮುಖರಾದ ಸಂತೋಷ ಖಂಡ್ರೆ, ಮೋಹನರೆಡ್ಡಿ, ಅಕ್ಷಯ್ ಮುದ್ದಾ, ವಸಂತರಾವ ಪಾಟೀಲ, ವಿನೋದ ಜಗತಾಪ, ಗೋವಿಂದರಾವ ಭಾಲ್ಕೆ, ಅಮರ ಹಲಮಂಡಗೆ, ಪ್ರಭುರಾಜ ಧೂಪೆ, ಧನರಾಜ ನಿಲಂಗೆ ಮುಂತಾದವರು ಇದ್ದರು. ರಾಜಕುಮಾರ ಮೇತ್ರೆ ಸ್ವಾಗತಿಸಿದರು. ವೀರಣ್ಣ ಪರಸಣ್ಣೆ ವಂದಿಸಿದರು.