ಸಾಹಿತ್ಯ ಓದುವ ಸಂಸ್ಕೃತಿ ಬೆಳೆಯಲಿ
ಭಾಲ್ಕಿ:ಜು.೨೪:ಜನರು ಸಾಹಿತ್ಯ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು. ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಸೋಮವಾರ ಆಯೋಜಿಸಿದ್ದ ಶರಣ ಕುಂಬಾರ ಗುಂಡಯ್ಯ ಜಯಂತಿ, ೩೦೧ನೆಯ ಮಾಸಿಕ ಶರಣ ಸಂಗಮ ಮತ್ತು ಮನದ ಮಂದರ ಕೃತಿ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕತೆಯಲ್ಲಿ ಒತ್ತಡದ ಜೀವನ ಸಾಗಿಸುತ್ತಿರುವ ಎಲ್ಲರಲ್ಲಿಯು ಸಾಹಿತ್ಯ ಓದುವ ಅಭಿರುಚಿ ಕಡಿಮೆ ಆಗುತ್ತಿದೆ. ಇದರಿಂದ ಜ್ಞಾನದ ಮಟ್ಟ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು. ವ್ಯಕ್ತಿಯ ಜೀವನದ ಬೆಳವಣಿಗೆಯಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಪ್ರತಿಯೊಬ್ಬರು ಸಾಹಿತ್ಯ, ಪುಸ್ತಕ, ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರೋ.ಶಂಭುಲಿAಗ ಕಾಮಣ್ಣ ಅವರ ವಿರಚಿತ ಮನದ ಮಂದಾರ ಕೃತಿ ಅತ್ಯುತ್ತಮವಾಗಿದೆ. ಪ್ರತಿಯೊಬ್ಬರೂ ಈ ಕೃತಿಯನ್ನು ಓದಬೇಕು ಎಂದು ಕಿವಿಮಾತು ಹೇಳಿದರು. ನೇತೃತ್ವ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಸಮಾಜದ ಎಲ್ಲ ಸಮುದಾಯಗಳು ಶರಣರ ಸಮಾನತೆಯ ನೆಲೆಗಟ್ಟಿನಲ್ಲಿ ಒಂದಾಗುವುದು ಎಂದಿಗಿAತಲೂ ಇಂದು ಬಹಳ ಅವಶ್ಯವಾಗಿದೆ. ಶ್ರೀಮಠದ ಎಲ್ಲ ಕಾರ್ಯಕ್ರಮಗಳು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಲು ಭಕ್ತರ ದಾಸೋಹ ಅರ್ಪಣೆ ಪ್ರಮುಖವಾಗಿದೆ ಎಂದು ತಿಳಿಸಿದರು.
ಸಿಂಧನಕೇರಾ ಶಿಕ್ಷಕ ವೀರಣ್ಣ ಕುಂಬಾರ ಅವರು ಕುಂಬಾರ ಗುಂಡಯ್ಯನವರ ಜೀವನ ಪರಿಚಯ ಮಾಡಿಕೊಟ್ಟರು. ಜಯಪ್ರಕಾಶ ಕುಂಬಾರ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಪ್ರೊ.ಶಂಭುಲಿAಗಕಾಮಣ್ಣ, ವಿದ್ಯಾವತಿ ಅಷ್ಟೂರೆ, ನಿರ್ಮಲಾ ಚಂದ್ರಕಾAತ ಪಾಟೀಲ್ ಸೇರಿದಂತೆ ಹಲವರು ಇದ್ದರು.
ಸನ್ಮಾನ
ಮಾನವನ ಬದುಕು ಸಾರ್ಥಕತೆ ಪಡೆಯಲು ಶರಣರ ಸಂಗ ಮಹತ್ವದ ಸಾಧನೆಯಾಗಿದೆ. ಪ್ರತಿ ತಿಂಗಳು ನಡೆಯುವ ಶರಣ ಸಂಗಮ ಭಾಲ್ಕಿ ಪಟ್ಟಣದಲ್ಲಿ ಶರಣ ಸಂಸ್ಕೃತಿ ವಾತಾವರಣ ಮೂಡಿಸಿದೆ. ಈ ಕಾರ್ಯಕ್ರಮದ ಮೂಲಕ ಶರಣರ ದಿವ್ಯ ಜೀವನ ಮತ್ತು ವಚನ ಸಾಹಿತ್ಯ ಎಲ್ಲರೂ ತಿಳಿದುಕೊಳ್ಳಲು ಉತ್ತಮ ವೇದಿಕೆಯಾಗಿದೆ.