ಗುರುವಿನ ಸ್ಮರಣೆಯೊಂದಿಗೆ ಮನತಣಿಸಿದ ನಿಂಬರಗಾ ಸಂಗೀತ ಕಾರ್ಯಕ್ರಮ
ಆಳಂದ: ಜು.೨೪:ತಾಲೂಕಿನ ಹೋಬಳಿ ಕೇಂದ್ರ ನಿಂಬರ್ಗಾ ಗ್ರಾಮದಲ್ಲಿ ಭೀಮರತ್ನ ಸಾಂಸ್ಕೃತಿಕ ಕಲಾ ಸೇವಾ ಸಂಸ್ಥೆ ವತಿಯಿಂದ ಗುರುಪೂರ್ಣಿಮೆಯ ನಿಮಿತ್ಯ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಕಲಾರಸೀಕರ ಮನತಣ್ಣಿಸಿತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗ್ರಾಮದ ಗುದ್ದುಗೆ ಮಠದ ಶ್ರೀ ನೀಲಕಂಠ ಶಿವಾಚಾರ್ಯರರು ಭಕ್ತಾದಿಗಳು ನೀಡಿದ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿ, ತಾಯಿ, ಶಿಕ್ಷಕ, ಅಧ್ಯಾತ್ಮೀಕ ಗುರು ಈ ಮೂವರು ಬದುಕಿಗೆ ಬಹಳ ಅಮೂಲ್ಯವಾಗಿದ್ದು, ಇವರ ಮಾರ್ಗದರ್ಶನದಲ್ಲಿ ನಡೆದರೆ ಶ್ರೇಷ್ಠ ವ್ಯಕ್ತಿಯಾಗುತಾರೆ. ಪ್ರತಿ ವ್ಯಕ್ತಿಗೆ ಗುರುಬಲ ಬೇಕು ಅಂದಾಗ ಸಾಧನೆಗೆ ಪೂರಕವಾಗುತ್ತದೆ ಎಲ್ಲರು ಭಕ್ತಿಯಿಂದ ಶ್ರದ್ಧೆಯಿಂದ ಮುನ್ನೆಡೆಯಬೇಕು ಎಂದು ಆಶಿರ್ವಚನ ನೀಡಿದ್ದರು.
ಗ್ರಾಪಂ ಮಾಜಿ ಅಧ್ಯಕ್ಷ ಸಾತಪ್ಪ ಮಂಟಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವನಾಗಿ ಹುಟ್ಟಿ ಬಂದ ಮೇಲೆ ಒಳ್ಳೆÀ್ಳಯೆ ಕೆಲಸ ಮಾಡಬೇಕು ಹುಟ್ಟುವಾಗ ಏನುತರಲೀಲಾ ಸತ್ತಾಗ ಏನು ಓಯುವದಿಲ್ಲಾ ಹುಟ್ಟು ಸಾವಿನ ನಡುವೆ ಒಳ್ಳೆಯ ಬದುಕು ಗುರುವಿನ ಮಾರ್ಗದಲ್ಲಿ ಕಟ್ಟಿಕೊಳ್ಳಬೆಕು ಎಂದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಸ್ಥಾವರ ಮಠ, ಶರಣಬಸಯ್ಯ ವಸ್ತ್ರದ ಭೀಮ ರತ್ನ ಸಾಂಸ್ಕೃತಿ ಕಲಾ ಸೇವಾ ಸಂಸ್ಥೆ ಅಧ್ಯಕ್ಷ ಧರ್ಮಣ್ಣಾ ಖರ್ಚನ, ಧರ್ಮರಾಯ ಕಾಮಣ್ಣಗೋಳ, ಗ್ರಾಮ ಪಂಚಾಯತ ಸದಸ್ಯ ಕಾರ್ತಿಕ ಕುಂಬಾರ, ಬಸವರಾಜ ಕಲಗುರತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಈ ಮೊದಲು ಗದ್ದುಗೇಶ್ವರ ಮಠದ ನೀಲಕಂಠ ಶಿವಾಚಾರ್ಯರರಿಗೆ ಗುರುಪೂರ್ಣಿಮೆಯ ನಿಮಿತ್ತ ಕಲಾ ಸಂಸ್ಥೆಯವತಿಯಿAದ ಹಾಗೂ ಗ್ರಾಮದ ವತಿಯಿಂದ ಸನ್ಮಾನಿಸಿ ಗುರು ವಂಧನೆ ಸಲ್ಲಿಸಲಾಯಿತು. ಚಂದ್ರಶೇಖರ ಸ್ವಾಮಿ ನಿರೂಪಿಸಿ ಸ್ವಾಗತಿಸಿ ವಂದಿಸಿದರು.