ಶಾಂತರಸರ ಜನ್ಮ ಶತಮಾನೋತ್ಸವ
ಸೇಡಂ, ಜು,೨೪: ಇಲ್ಲಿನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ನೃಪತುಂಗ ಅಧ್ಯಯನ ಸಂಸ್ಥೆ, ಸೇಡಮ್ ಹಾಗೂ ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ, ಸೇಡಮ್ ಸಹಯೋಗದಲ್ಲಿ ಶಾಂತರಸರ ಜನ್ಮ ಶತಮಾನೋತ್ಸವ ಸಮಾರಂಭ ನಿಮಿತ್ತ ಶಾಂತರಸರ ಬದುಕು ಬರಹ ಕುರಿತು ವಿಶೇಷ ಉಪನ್ಯಾಸಗಳನ್ನು ಇಂದು ನರ್ಮದಾದೇವಿ ಗಿಲಡಾ ಮಹಿಳಾ ಮಹಾವಿದ್ಯಾಲಯದಲ್ಲಿ ಜರುಗಿತು.ಪೂಜ್ಯಶ್ರೀ ಸದಾಶಿವ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದ ಶ್ರೀಗಳು ಮಾತನಾಡಿದರು.ಈ ವೇಳೆಯಲ್ಲಿ ಸಿದ್ದರಾಮ ಹೊನ್ನಲ್, ಎಚ್.ಎಸ್.ಬಸವಪ್ರಭು ಸಿದ್ದಪ್ಪ ತಳ್ಳಳ್ಳಿ,ಡಾ. ಸುಜಾತಾ ಜಂಗಮಶೆಟ್ಟಿ,ಪ್ರಭಾಕರ ಜೋಶಿ ಶ್ರೀಮತಿ ಅನುರಾಧ ಪಾಟೀಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಈ ವೇಳೆಯಲ್ಲಿ ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ, ಸೇರಿದಂತೆ ಹಲವರು ಇದ್ದರು.