ಉಚಿತ ಆರೋಗ್ಯ ತಪಾಸಣಾ ಶಿಬಿರ
ಬೀದರ: ಜು.೨೪:೨೦೨೩-೨೪ನೇ ಸಾಲಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಐದನೇ ದಿವಸ ದಂದು ಸುರಕ್ಷಾ ಆಸ್ಪತ್ರೆ ಸಹಯೋಗದೊಂದಿಗೆ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಸುಮಾರು ನೂರಾರು ಗ್ರಾಮಸ್ಥರು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಂಡರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ರಾಮೇಶ್ವರಿ ಮಲಶೆಟ್ಟಿ. ಸ್ತ್ರೀರೋಗ ತಜ್ಞರು. ಅತಿಥಿಗಳಾಗಿ ಡಾ. ರಾಹುಲ್ ಕೆ. ಮಕ್ಕಳ ತಜ್ಞರು ಹಾಗೂ ಮಾಳೇಗಾವ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳಾದ ಡಾ. ಫಾತಿಮಾ ಉಚಿತ ಆರೋಗ್ಯ ತಪಾಸಣಾ ಶಿಬಿರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಈ ಸಂದರ್ಭದಲ್ಲಿ ಆರ್. ವಿ .ಬಿಡಪ್ಪ ಕಾನೂನು ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ಜಯಶ್ರೀ ಪಾಟೀಲ್, ಡಾ. ಗಣಪತಿ, ಹಾಗೂ ಗುರುದಾಸ ಅಮದಲಪಾಡ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.