ಹಾಸ್ಟೆಲ್ ನಲ್ಲಿ ಮೂಲ ಸೌಕರ್ಯಗಳ ನೀಡುವಂತೆ ಒತ್ತಾಯಿಸಿ ಮನವಿ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜು.24 ಪಟ್ಟಣದ ರಾಮರಹಿಮ್ ನಗರದಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಕಾಲೇಜ ವಿದ್ಯಾರ್ಥಿ ನಿಲಯದಲ್ಲಿ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಎಸ್ಎಫ್ಐ ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
 ಉಪ ತಹಶಿಲ್ದಾರರಾದ ಶಿಲ್ಪಾ  ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆಂಜನೇಯ ರವರಿಗೆ ಮನವಿ ಪತ್ರವನ್ನು ನೀಡಲಾಯಿತು,
ಎಸ್ ಎಫ್ ಐ ತಾಲೂಕು ಸಮಿತಿ ಸದಸ್ಯರಾದ ನಾಗರಾಜ್  ಮಾತನಾಡಿ ಹಾಸ್ಟೆಲ್ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಅನೇಕಬಾರಿ ಸಭೆ ಮತ್ತು ಮನವಿ ಪತ್ರಗಳನ್ನು ನೀಡಿದ್ದರು  ಯಾವುದೇ ರೀತಿಯ ಕ್ರಮಗಳನ್ನು ಕಾರ್ಯಗಳನ್ನು ಕೈಗೊಂಡಿಲ್ಲಾ ಅದುದರಿಂದ ತಾವುಗಳು ಮುತುವರ್ಜಿಯಿಂದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸುತ್ತಿದ್ದೇವೆ ಎಂದರು, ಎಸ್ ಎಫ್ ಐ ಘಟಕ ಕಾರ್ಯದರ್ಶಿಗಳದ ಅಜಯ್ ಮಾತನಾಡಿ ಶುದ್ಧ ನೀರಿನ ಯಂತ್ರವನ್ನು ಸರಿಪಡಿಸಬೇಕು  ಕಂಪ್ಯೂಟರ್ ಶಿಕ್ಷಣ
ಸಿಸಿ ಕ್ಯಾಮರಾ ಅಳವಡಿಕೆ ಮತ್ತು ಪಠ್ಯಕ್ರಮದ ಅನುಸಾರ ಪುಸ್ತಕಗಳು
ಶೌಚಾಲಯ ಮತ್ತು ಸ್ನಾನದ ಕೊಠಡಿಗಳನ್ನು ಸರಿಪಡಿಸಬೇಕು 
ಕಿಟಕಿ ಮತ್ತು  ಬಾಗಿಲುಗಳನ್ನು ಸರಿಪಡಿಸಬೇಕು
ತಟ್ಟೆ ಲೋಟ ಮಿಕ್ಸಿ ಇತರ ಸೌಲಭ್ಯಗಳನ್ನು ನಿಲಯಕ್ಕೆ ಕಲ್ಪಸಬೇಕು ಎಲೆಕ್ಟ್ರಿಕಲ್ ಅಂಡ್ ಪ್ಲಂಬಿಂಗ್ ರಿಪೇರಿಯನ್ನು ಮಾಡಿಸುವುದು
ಸೋಲಾರ್ ವಾಟರ್ ಅಂಡ್ ಲೈಟ್ ರಿಪೇರಿ ಮಾಡಿಸುವ ಮೂಲಕ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಎಂದು ಆಗ್ರಹಿಸಿದರು 
 ಈ ಸಂದರ್ಭದಲ್ಲಿ ನಿಲಯದ ಎಲ್ಲಾ ವಿದ್ಯಾರ್ಥಿಗಳು ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆಯ ಘಟಕ ಪದಾಧಿಕಾರಿಗಳಾದ  ಮೋಹನ್, ವಿಜಯ್,     ಬೋವಿ ಅಜಯ್ , ಮಿತ್ಯ ನಾಯ್ಕ್ , ನಕುಲ್ , ಗಾಂಧಿ ,ಶಿವುನಾಯ್ಕ್ ,ಹುಲುಗೇಶ್, ಆಕಾಶ್, ದರ್ಶನ್,ವಿನಯ್, ಹೇಮಂತ, ನರಸಿಂಹ ಮೂರ್ತಿ, ಅಜಯ್ ಎಂ, ಸುನಿಲ್ ,ವೀರೇಶ್ , ದಿನೇಶ್ ನಾಯ್ಕ್ , ಕಾರ್ತಿಕ್, ಇದ್ದರು.