ಕಲಬುರಗಿ ಮಹಾಸಭೆಯ ನೂತನ ಪದಾಧಿಕಾರಿಗಳ ಪಟ್ಟಿಗೆ ಬೆಂಕಿ ಹಚ್ಚಿ ಚುನಾವಣಾಧಿಕಾರಿ ಮತ್ತು ಮೋದಿ ನಡೆಗೆ ಕಿಡಿಕಾರಿದ ಮುಖಂಡರು
ಕಲಬುರಗಿ:ಜು.೨೪:ಅಖಿಲ ಭಾರತ ವೀರಶೈವ ಮಾಹಾಸಭಾ ಜಿಲ್ಲಾ ಘಟಕಕ್ಕೆ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆಯೂ ಭರದಿಂದ ನಡೆದು ೨೧ರಂದು ಚನಾವಣೆ ನಡೆಯುವದಿತ್ತು ಆದರೆ ಸಮಾಜದ ಮುಖಂಡರುಗಳಾದ ಸಚಿವ ಡಾ?ಶರಣ ಪ್ರಕಾಶ ಪಾಟೀಲ್ ಶಾಸಕರಾದ ಅಲ್ಲಮಪ್ರಭು ಪಾಟೀಲ್,ಎಂ ವೈ ಪಾಟೀಲ್ ,ಬಿ ಆರ್ ಪಾಟೀಲ್ ,ಮಾಜಿ ಶಾಸಕ ಅಪ್ಪುಗೌಡ ಪಾಟೀಲ್ ಮತ್ತು ಸಮಾಜದ ಮುಖಂಡರ ನೇತ್ರತ್ವದಲ್ಲಿ ಸಭೆ ನಡೆಸಿ ಈ ಬಾರಿ ವಸತಿನಿಲಯದ ಕೆಲಸ ಬಾಕಿ ಉಳಿದಿರುವುದರಿಂದ ಅದನ್ನು ಪೂರ್ಣ ಗೊಳಿಸಬೇಕಾಗಿದೆ ಆದ್ದರಿಂದ ಸಮಾಜದಲ್ಲಿ ಗೊಂದಲ ಆಗದಂತೆ ಇದೊಂದು ಬಾರಿ ಅದ್ಯಕ್ಷ ಮತ್ತು ಕಾರ್ಯಕಾರಿಣಿ ಸದಸ್ಯರನ್ನು ಅವಿರೋಧ ಆಯ್ಕೆ ಮಾಡೋಣ ಅದ್ಯಕ್ಷರನ್ನಾಗಿ ಹಾಲಿ ಅಧ್ಯಕ್ಷರಾಗಿರುವ ಶರಣು ಮೋದಿ ಯವರನ್ನೆ ಮುಂದುವರೆಸೋಣ ಆದರೆ ಕಾರ್ಯಕಾರಿಣಿ ಸದಸ್ಯರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಶಶಿಕಾಂತ ಪಾಟೀಲ್ ಮತ್ತು ಸ್ವತಂತ್ರವಾಗಿ ಸ್ಪರ್ದಿಸಿದವರಿಗೆ ಹೆಚ್ಚಿನ ಅವಕಾಶ ನೀಡಬೇಕು. ಮತ್ತು ಕಲಬುರಗಿ ತಾಲೂಕಾ ಅಧ್ಯಕ್ಷ ಪ್ರಶಾಂತ ಗುಡ್ಡಾ ಅವರಿಗೆ ಬಿಟ್ಟುಕೊಡಬೇಕೆಂಬುದು ಸೇರಿದಂತೆ ಕೆಲ ಒಪ್ಪಂದಗಳು ಆಗಿದ್ದವು ಎಂದು ಹೇಳಲಾಗುತ್ತಿದೆ. ಅಲ್ಲದೆ ಚುನಾವಣೆ ದಿನಾಂಕವಾದ ೨೧ರಂದು ರಾತ್ರಿಯೆ ಆಯ್ಕೆ ಯಾದವರ ಪಟ್ಟಿಯನ್ನು ಬಿಡುಗಢೆಗೋಳಿಸಬೇಕು ಇದು ನಿಯಮ ಆದರೆ ಇಂದು ಎರಡು ದಿನಗಳ ನಂತರ ಪಟ್ಟಿ ಬಿಡುಗಡೆ ಮಾಡಿದ್ದಲ್ಲದೆ ಸಭೆಯಲ್ಲಿ ಆಗಿರುವಂತೆ ನಡೆಯದೆ ಸಭೆಯಲ್ಲಿದ್ದ ಎಲ್ಲಾ ಹಿರಿಯರ ಕಿವಿಮಾತುಗಳನ್ನು ಸಲಹೆಗಳನ್ನು ಗಾಳಿಗೆ ತೂರಿ ತಮಗೆ ಬೇಕಾದವರನ್ನು ಮಾತ್ರ ಮೋದಿ ಯವರು ಕಾರ್ಯಕಾರಿಣಿಯಲ್ಲಿ ಸೇರಿಸಿಕೋಂಡು ಸಮಾಜಕ್ಕೂ ಸಮಾಜದ ಹಿರಿಯರಿಗೂ ಗೌರವ ನೀಡದೆ ಹಿಟ್ಲರ್ ಮಾದರಿ ಆಡಳಿತ ನಡೆಸಲು ಹೊರಟಿದ್ದನ್ನು ಖಂಡಿಸಿದ್ದಲ್ಲದೆ ಚುನಾವಣಾದಿಕಾರಿ ಶರಣಬಸ್ಸಪ್ಪಾ ಕಾಡಾದಿ ಅವರು ಕೂಡಾ ಇಲ್ಲಿ ಯಾರದೋ ಕೈಗೊಂಬೆಯಾಗಿ ಕೆಲಸ ಮಾಡಿದ್ದನ್ನು ವಿರೋದಿಸಿ ಚುನಾವಣಾದಿಕಾರಿ ಪ್ರಕಟಿಸಿರುವ ಅಧ್ಯಕ್ಷ ಮತ್ತು ಕಾರ್ಯಕಾರಿಣಿ ಸದಸ್ಯರ ಪಟ್ಟಿಗೆ ಬೆಂಕಿ ಹಚ್ಚಿ ವೀರಶೈವ ಕಲ್ಯಾಣ ಮಂಟಪದ ಚುನಾವಣೆ ಕಾರ್ಯಾಲಯದೆದುರು ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತೊಮ್ಮೆ ಚುನಾವಣೆ ಘೋಷಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದೋ ಅಥವಾ ನ್ಯಾಯಾಲಯದ ಮೊರೆ ಹೋಗಬೆಕಾ ಎಂದು ಚರ್ಚೆ ನಡೆಸುತ್ತಿದ್ದಾರೆ ಒಟ್ಟಿನಲ್ಲಿ ಚುನಾವಣೆ ಆಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲಾ ಅವಿರೋಧ ಆಯ್ಕೆ ಮಾಡಿದ ಪರಿಣಾಮ ಗೊಂದಲವಾಗಿದೆ ಇದು ಎಲ್ಲಿಗೆ ಹೋಗಿ ಮುಟುತ್ತದೋ ತಿಳಿಯದಾಗಿದೆ ಅಲ್ಲದೆ ಮೋದಿ ಪೇನಲ್ನಾ ನಾಮಪತ್ರ ತಿರಸ್ಕುತಗೊಂಡಿರುವ ಅನ್ನಪೂರ್ಣ ಹಿರೇಮಠ ಅವರನ್ನು ಕಾರ್ಯಕಾರಿಣಿಯಲ್ಲಿ ತೆಗೆದುಕೊಂಡು ಶಶಿಕಾಂತ ಪಾಟೀಲ ಪೇನಲ್ ನಲ್ಲಿರುವ ನಾಮಪತ್ರ ಸ್ವೀಕ್ರತಗೊಂಡ ಕವಿತಾ ದೇಗಾಂವ್ ಸಂತೋಷ ಪೋಲಿಸ್ ಪಾಟೀಲ್ ನರಿಬೋಳ ಇನ್ನಿತರರನ್ನು ಕಾರ್ಯಕಾರಿಣಿಯಿಂದ ಹೋರಗಿಟ್ಟಿರುವುದು ಚನಾವಣಾ ಅದಿಕಾರಿಗಳಾ…! ಅಥವಾ ಮೋದಿ ಯವರಾ….? ಎಂದು ಗೊಂದಲವಿದ್ದು ಇಬ್ಬರ ವಿರುದ್ದ ಸಮಾಜದ ಹಿರಿಯರು ಕೆಂಡಾ ಕಾರುತ್ತಿದ್ದಾರೆ. ಹಿರಿಯರ ಮಾತಿಗೆ ಗೌರವಕೋಟ್ಟು ನಾನು ಕಣದಿಂದ ಹಿಂದೆ ಸರಿದು ಹಿರಿಯರ ಸಲಹೇಯಂತೆ ನನ್ನ ಪೆನಲ್ ನಿಂದ ೧೫ ಹೆಸರುಗಳನ್ನು ಮೋದಿಯವರಿಗೆ ನೀಡಿದೆ ಆದರೆ ಕೆಲವಸ್ಟೆ ಪರಿಗಣಿಸಿ ಬಹಳ ಸದಶ್ಯರನ್ನು ಕಡೆಗಣಿಸಿದಿದಾರೆ ಈವಿಷಯದ ಕುರಿತು ಶಾಸಕರುಗಳ ಗಮನಕ್ಕೆ ತಂದಿದ್ದೆವೆ ಇಂದು ಮಠಾಧಿಶರು ಮತ್ತು ಬಸವರಾಜ ದೇಶಮುಖ ಸಮ್ಮುಕದಲ್ಲಿ ಸಬೆ ಸೇರಿ ಒಂದು ನಿರ್ಣಯಕ್ಕೆ ಬರುತ್ತೆವೆ ಶಶಿಕಾಂತ ಪಾಟೀಲ
ಮೊದಲನೆಯದಾಗಿ ಅವಿರೋಧ ಆಯ್ಕೆಗೆ ಯಾರು ಮುಂದಾದರೋ ಅವರ ನಡೆಯನ್ನು ಉಗ್ರವಾಗಿ ಖಂಡಿಸತ್ತೇನೆ ಹೀಗೂ ಉಂಟೆ ಎನ್ನುವಂತೆ ಮೋದಿ ಪೆನಲ್ ದಿಂದ ನಾಮಪತ್ರ ಸಲ್ಲಿಸಿದ್ದ ಸಹೋದರಿ ಅನ್ನಪೂರ್ಣಾ ಹಿರೇಮಠ ನಾಮಪತ್ರ ತಿರಸ್ಕ್ರುತಗೊಂಡಿದೆ ಆದರು ಅವರನ್ನು ಮೋದಿ ಯವರು ಕಾರ್ಯಕಾರಿಣಿಗೆ ಆಯ್ಕೆ ಮಾಡಿ ನಾಮಪತ್ರ ಸ್ವಿಕ್ರುತಗೊಂಡ ಶಶಿಕಾಂತ ಪಾಟೀಲ್ ಪೇನಲ್ ದಿಂದ ಸ್ಪರ್ದೇ ಮಾಡಿದ ಹೋರಾಟಗಾರ್ತಿ ಕವಿತಾ ದೇಗಾಂವ್ ಸಂತೋಷ್ ಪೋಲಿಸ್ ಪಾಟೀಲ್ ನರಿಬೋಳ ಸೆರಿದಂತೆ ಹಲವರನ್ನು ಪರಿಗಣಿಸದಿರುವುದು ಅನುಮಾನಾಸ್ಪದವಾಗಿದೆ ಇದನ್ನು ಪ್ರಶ್ನಿಸಿ ಶಶಿಕಾಂತ ಪಾಟೀಲರು ಅವರುಗಳಿಗೆ ಸೂಕ್ತ ಸ್ಥಾನ ಮಾನ ಕೊಡಿಸಿದರೆ ಸರಿ ಇಲ್ಲದಿದ್ದರೆ ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ.
ಎಂ ಎಸ್ ಪಾಟೀಲ್ ನರಿಬೋಳ ಯುವ ಮುಖಂಡರು
ಸಂಸ್ಥಾನದರ ಸಚಿವರ ಶಾಸಕರ ಮಾಜಿಶಾಸಕರ ಮುಖಂಡರ ಮಾತಿಗೆ ಕಿಮ್ಮತ್ತು ಕೊಡದೆ ನಾನೇ ಎಲ್ಲಾ ನನ್ನಿಂದಾನೆ ಸಮಾಜ ಎನ್ನವಂತೆ ವರ್ತಿಸಿರುವ ಶರಣು ಮೋದಿ ಅವರು ಹಿರಿಯರೆಲ್ಲರ ಕ್ಷಮೆ ಕೇಳಿ ಪಟ್ಟಿಯನ್ನು ಪರಿಸೀಲಿಸಬೇಕು ಇಲ್ಲದಿದ್ದರೆ ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲಾ ಮುಂದೆ ಏನೆಂದು ತೋರಿಸುತ್ತೇವೆ.
ಪ್ರಶಾಂತ ಗುಡ್ಡಾ, ಕಲಬುರಗಿ ತಾಲೂಕಾ ಅಧ್ಯಕ್ಷ ಸ್ಥಾನದ ಸ್ಪರ್ಧಿ