ಸಂಗನ ಹಾಳ ಗ್ರಾ.ಪಂ. ಅಧ್ಯಕ್ಷರಾಗಿ ಈಶಪ್ಪ ಕೋಳೂರು ಆಯ್ಕೆ.
ಸಂಜೆವಾಣಿ ವಾರ್ತೆ
ಯಲಬುರ್ಗಾ, ಜು24-  ತಾಲೂಕಿನ ಸಂಗನಹಾಲ ಗ್ರಾಮ ಪಂಚಾಯತ ನೂತನ ಅಧ್ಯಕ್ಷರಾಗಿ  ಕಾಂಗ್ರೆಸ್ ಬೆಂಬಲಿತ ಈಶಪ್ಪ ಬಸಪ್ಪ ಕೋಳೂರು ಆಯ್ಕೆ ಯಾಗಿದ್ದಾರೆ.                                                    ಈ ಕುರಿತು ಪತ್ರಿಕೆ ಜೊತೆ ಮಾತನಾಡಿ , ೧೦ ತಿಂಗಳ ಅವಧಿ ಮಟ್ಟಿಗೆ ನಮ್ಮ ಪಕ್ಷದ ಮುಖಂಡರು ಅಧಿಕಾರ ವಹಿಸಿಕೊಟ್ಟಿದ್ದಾರೆ , ಈ ಅವಧಿಯಲ್ಲಿ ಊರಿನ ಜನ ಸಾಮಾನ್ಯರ ಕಸ್ಟ ಕಾಪ೯ಣ್ಯ ಅರಿತು ಸಕಾರಾತ್ಮಕ ಸ್ಪಂದಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಬೇಕಿದೆ, ಕುಡಿಯುವ ನೀರು, ಸಿ.ಸಿ. ರಸ್ತೆ,  ಆರೋಗ್ಯ, ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಪೀ.ಡಿ. ಓ ಹಾಗೂ ಸಿಬ್ಬಂದಿ ನೆರವು ಪಡೆದು ಜನರ ಕುಂದು ಕೊರತೆಗಳನ್ನು ನಿವಾರಹಣೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.  ಈ ವೇಳೆ ಪೀ.ಡಿ. ಓ ಸವ೯ಮಂಗಳ, ಬಿಲ್ ಕಲೆಕ್ಟರ್  ಶರಣಪ್ಪ ಇದ್ದರು.