ಕೊಪ್ಪಳ : ಜು. ೩೦ ರವರೆಗೆ ದುರ್ಗಾದೇವಿ ಜಾತ್ರಾ ಮಹೋತ್ಸವ
ಸಂಜೆವಾಣಿ ವಾರ್ತೆ
ಕೊಪ್ಪಳ, ಜು,24-  ಗಾಂಧಿನಗರ ಕಾಲೋನಿಯ ಗೊಂದಳಿ ಸಮಾಜದ ಆರಾಧ್ಯ ದೈವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಹಾಗೂ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರ ವರೆಗೆ  ಜರುಗಲಿದೆ.
 ಈ ಕುರಿತು ದೇವಸ್ಥಾನ ಸಮಿತಿ ಪ್ರಮುಖರಾದ ಗಾಳೆಪ್ಪ ಎಚ್ಚ. ಪಂಚಂಗಿ ಹಾಗೂ ನಗರಸಭೆ ಮಾಜಿ ಸದಸ್ಯ ನಾಮದೇವ ಜಕ್ಕಲಿ  ಪತ್ರಿಕೆ ಜೊತೆ ಮಾತನಾಡಿ,  ಶ್ರೀ ದುರ್ಗಾದೇವಿ  ಎಲ್ಲಾ ಧಮ೯ದವರ   ಒಳತನ್ನು ಬಯಸುವ ಜಗನ್ಮಾತೆ, ನಮ್ಮ ಪೂವಿ೯ಕರಿಂದ  ಪೂಜೆ ಪುನಸ್ಕಾರ ದಿಂದ ಆಚರಿಸುತ್ತಾ ಇದೀಗ ಜಾತ್ರಾ ಮಹೋತ್ಸವ ಮಟ್ಟಿಗೆ ದೇವಿ ನಮ್ಮೆಲ್ಲರ ಯುವಶಕ್ತಿಗೆ ಆಶಿವಾ೯ದ ಮಾಡ್ತಾ ಬಂದಿದ್ದಾಳೆ. ಮೊದಲು ಉದ್ಭವ ಮೂತಿ೯ ಯಾಗಿ ಈಗ ಜನಪ್ರತಿನಿಧಿಗಳ ಸಹಕಾರದಿಂದ ದೇವಸ್ಥಾನ ಕಟ್ಟಡ, ಸಮುದಾಯ ಭವನ ನಿರ್ಮಾಣ ವಾಗಿವೆ.                                                           ದೇವಿಯ ಕೃಪೆಯಿಂದ ಸಾಮೂಹಿಕ ಮದುವೆಗಳು ನಡೆಯುತ್ತವೆ. ಅಮ್ಮನು ನಂಬಿದ ಭಕ್ತರನ್ನು ಕೈಬಿಡುವುದಿಲ್ಲ. ಕರದಂಟು ಮಾರುವ ಮಹಿಳೆಯನ್ನು ಅಮೆರಿಕ ದಲ್ಲಿ ಉದ್ಯೋಗ ಮೂಲಕ ಬೆಳೆಸಿದ ಕೀರ್ತಿ ಇದೆ ಎಂದು ತಿಳಿಸಿದರು.