ಪುಲಿಗೆರೆ ಪೌರ್ಣಿಮೆ ಕಾರ್ಯಕ್ರಮ
ಲಕ್ಷೆ÷್ಮÃಶ್ವರ,ಜು೨೪: “ವೇದವ್ಯಾಸರ ಜನ್ಮದಿನವಾದ ಆಷಾಢ ಮಾಸದ ಶುಕ್ಲ ಪಕ್ಷದ ಪೌರ್ಣಿಮಿ ದಿನವನ್ನು ಗುರು ಪೌರ್ಣಿಮಿ ಎಂದು ಕರೆಯಲಾಗುತ್ತದೆ. ಏಕಲವ್ಯ ತನ್ನ ಗುರುಗಳಾದ ದ್ರೋಣಾಚಾರ್ಯರಿಗೆ ತನ್ನ ಬಲಗೈ ಹೆಬ್ಬೆರಳು ಗುರು ಕಾಣಿಕೆಯಾಗಿ ನೀಡಿದ ದಿನವಿದು. ಶಿವನು ಸಪ್ತ ಋಷಿಗಳಿಗೆ ಯೋಗಾಭ್ಯಾಸ ಮಾಡಿಸಿದ ದಿನ, ಬೌದ್ಧ ಧರ್ಮದ ಗುರುಗಳಾದ ಗೌತಮ ಬುದ್ಧರು ತನ್ನ ಅನುಯಾಯಿಗಳಿಗೆ ಪ್ರಥಮ ಭೋಧನೆ ನೀಡಿದ ಶ್ರೇಷ್ಠ ದಿನವೂ ಇದಾಗಿದೆ” ಎಂದು ಶಿಕ್ಷಕಿ ಶ್ರೀಮತಿ ನಿರ್ಮಲಾ ಅಡವಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪ್ರತಿ ಪೌರ್ಣಿಮಿ ದಿನ ಲಕ್ಷೆ÷್ಮÃಶ್ವರದ ಶ್ರೀಸೋಮೇಶ್ವರ ಭಕ್ತರ ಸೇವಾ ಟ್ರಸ್ಟ ಕಮಿಟಿ ವತಿಯಿಂದ ನಡೆಯುವ ‘ಪುಲಿಗೆರೆ ಪೌರ್ಣಿಮೆ’ ಕಾರ್ಯಕ್ರಮ ಸರಣಿಯ ೩೨ನೇ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.
ಸಸಿಗೆ ನೀರುಣಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿರಹಟ್ಟಿ ಸಿ.ಡಿ.ಪಿ.ಓ ಮೃತ್ಯಂಜಯ ಗುಡ್ಡದಾನ್ವೆರಿ ಮಾತನಾಡಿ “ಲಕ್ಷೆ÷್ಮÃಶ್ವರ ನಗರದಲ್ಲಿ ಬಹಳಷ್ಟು ಶ್ರದಾಕೇಂದ್ರಗಳು ಇದ್ದು ಇಲ್ಲಿನ ಹಿರಿಯರು ಪ್ರತಿ ವಾರ, ಹುಣ್ಣಿಮೆಯ ದಿನ ಭಕ್ತಿ ಕಾರ್ಯಕ್ರಮಗಳು ನಡೆಸಿಕೊಂಡು ಬರುತ್ತಿರುವದು ಹೆಮ್ಮೆಯ ವಿಷಯ” ಎಂದು ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ನೀಡಿದ “ಕಾಯಕ ರತ್ನ” ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕöÈತ ವಿಶ್ರಾಂತ ಶಿಕ್ಷಕ ಪೂರ್ಣಾಜಿ ಖರಾಟೆಯವರಿಗೆ ಶ್ರೀಸೋಮೇಶ್ವರ ಭಕ್ತರ ಸೇವಾ ಟ್ರಸ್ಟ ಕಮಿಟಿಯವರು ಮತ್ತು ಲಕ್ಷೆ÷್ಮÃಶ್ವರ ತಾಲೂಕ ವೈಜ್ಞಾನಿಕ ಸಂಶೋಧನಾ ಪರಿಷತ್ ಘಟಕದ ಎಲ್ಲ ಪದಾಧಿಕಾರಿಗಳು ಸನ್ಮಾನಿಸಿದರು.”ಈ ಪ್ರಶಸ್ತಿಯು ಈ ಊರಿನ ಎಲ್ಲ ಹಿರಿಯರ ಆಶೀರ್ವಾದಿಂದ ಲಭಿಸಿದೆ. ಇದು ನಾನು ಇನ್ನಷ್ಟು ಜವಾಬ್ದಾರಿಯುತ ಕೆಲಸ ಮಾಡುವಂತೆ ಮಾಡಿದೆ” ಎಂದು ಖರಾಟೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂಬಣ್ಣಾ ಬಾಳಿಕಾಯಿ ವಹಿಸಿದ್ದರು. ಶ್ರೀಮತಿ ಮಂಜುಳಾ ಓದುನವರ, ಶ್ರೀಮತಿ ಪಾರ್ವತಿ ಕಳ್ಳಿಮಠ ಅತಿಥಿ ಸ್ಥಾನ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುರೇಶ ರಾಚನಾಯ್ಕರ, ಸುರೇಶ ಬಳ್ಳೊಳ್ಳಿ, ವಿರೂಪಾಕ್ಷಪ್ಪ ಆದಿ,ಬಸವರಾಜ ಪುಠಾಣಿ, ನೀಲಪ್ಪ ಕರ್ಜಕ್ಕಣ್ಣನವರ, ಎನ್. ಆರ್.ಸಾತಪೂತೆ, ಬಿ.ಎಸ್. ಈಳಗೇರ, ಎಚ್.ಜಿ. ದುರಗಣ್ಣವರ, ಸೋಮಣ್ಣ ಅಣ್ಣಿಗೇರಿ,ವೀರಣ್ಣ ಅಕ್ಕೂರ,ಸಂತೋಷ ಸಾತಪೂತೆ, ಪಿ.ಸಿ.ಕಾಳಶೆಟ್ಟಿ, ಶ್ರೀಪಾಲ ಗೊಂಗಡಿ,ಬಸವರಾಜ ಹೆಬ್ಬಾಳ, ಬಸವರಾಜ ಮೆಣಸಿನಕಾಯಿ,ಎನ್.ಎ. ತಹಶೀಲ್ದಾರ, ಎನ್.ಎಸ್. ಗೊರವರ, ಶ್ರೀಮತಿ ಮಾಲಾ ದಂಧರಗಿ, ಸುಮಾ ಚೊಟಗಲ್, ವಿ.ಎಫ್. ಯಲಿಶಿರೂಂದ ಉಪಸ್ಥಿತರಿದ್ದರು.
ಸೋಮಶೇಖರ ಕೆರಿಮನಿ, ಜಯಪ್ರಕಾಶ ಹೊಟ್ಟಿ, ಸ್ನೇಹಾ ಹೊಟ್ಟಿ , ಜಿ.ಎಸ್.ಗುಡಗೇರಿ ನಿರ್ವಹಿಸಿದರು.