ಹಬೋಹಳ್ಳಿ : ನಾಟಕವನ್ನು ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಲು ಕರೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.24 ತಂತ್ರಜ್ಞಾನ ಬೆಳದಂತೆ ಸಿನಿಮಾ ಮತ್ತು ನಾಟಕ ರಂಗ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ರಂಗಭೂಮಿ ಕಲಾವಿದರ ಬದುಕು ದುಸ್ತರವಾಗಿದೆ ಎಂದು ಶ್ರೀ ಗುರು ಸಿದ್ದಲಿಂಗೇಶ್ವರ ನಾಟಕ ಸಂಘ ಮಂಡಲಗಿರಿ ನಿರ್ದೇಶಕ ಶರತ್ ಕಂಬ್ಳೆ ಹೇಳಿದರು.
ಪಟ್ಟಣದ ಬಸವೇಶ್ವರ ಬಜಾರ್ ಯು.ಕೆ ಕೊಟ್ರುಬಸಪ್ಪ ಜಾಗದಲ್ಲಿ ಹಾಕಿರುವ ನಾಟಕ ಕಂಪನಿ ಥಿಯೇಟರಲ್ಲಿ  ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಲಾವಿದರು ಉದ್ಯೋಗವಿಲ್ಲದೆ ಊರೂರು ಅಲೆದು ಕಂಪನಿ ನಾಟಕಗಳು ಪ್ರದರ್ಶನ ಗೊಳ್ಳುತ್ತಿವೆ.. ಮೊದಲು ಸಾಕಷ್ಟು ಕಂಪನಿಗಳಿದ್ದವು. ಈಗ ಬೆರಳೆಣಿಕೆಯಷ್ಟು ಕಂಪನಿಗಳು ಉಳಿದಿವೆ. ಅದರಲ್ಲಿ ನಮ್ಮ ಕಂಪನಿಯು ಒಂದು. ಇತ್ತೀಚಿಗೆ ಸಿನಿಮಾ ಗಿಂತ ನಾಟಕ ನೋಡುವವರ ಸಂಖ್ಯೆ ಹೆಚ್ಚಾಗಿದೆ. ರೈತರು ಮತ್ತು ಹಳ್ಳಿಗಾಡಿನ ಜನರು ನಾಟಕದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಅವರೇ ನಮಗೆ ಅನ್ನದಾತರು. ನಾಳೆ ಜು.25 ಒಂದು ನಾಟಕ ಆರಂಭವಾಗಲಿದ್ದು. ಮೊದಲ ನಾಟಕ ತವರು ಬಿಟ್ಟ ತಂಗಿ ಮೊದಲ ದಿನವೇ ಎರಡು ಪ್ರದರ್ಶನಗಳು ಮಹಿಳೆಯರಿಗೆ ಉಚಿತವಾಗಿರುತ್ತದೆ. ನಮ್ಮ ಥಿಯೇಟರ್ ಅತ್ಯಾಧುನಿಕ ಸಾಮಗ್ರಿಗಳಿಂದ ಫ್ಯಾನು ಚೇರು ಶುದ್ಧ ಕುಡಿಯುವ ನೀರು  ಸೇರಿದಂತೆ ಉತ್ತಮ ಕ್ಯಾಂಟೀನ್ ಹೊಂದಿರುತ್ತದೆ. ನಾಟಕದಲ್ಲಿ ಎಲ್ಲಾ ಮಹಿಳೆಯರು ಮತ್ತು ಮಕ್ಕಳು ಕುಟುಂಬ ಸಮೇತವಾಗಿ ನೋಡಬೇಕಾಗಿರುವುದರಿಂದ ನಾಟಕದಲ್ಲಿ ಅಶ್ಲೀಲ ಸಂಭಾಷಣೆ, ನೃತ್ಯ ಇರುವುದಿಲ್ಲ. ಎಂದರು.  ಕಂಪನಿಯ ಮಾಲೀಕರಾದ ಪಂಚಾಕ್ಷರಿ ಮಾತನಾಡಿ ನಾಟಕಗಳು ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿ ಜೀವಂತವಾಗಿರಿಸುವ ಜವಾಬ್ದಾರಿ ನಾಟಕ ರಂಗದ ಅಭಿಮಾನಿಗಳಿಗೆ ಇದೆ ಎಂದರು ಈ ಸಂದರ್ಭದಲ್ಲಿ ಕಲಾವಿದರಾದ ಮಹಾ ರುದ್ರಚಾರ್ ಸಿದ್ದಾರ್ಥ್ ಮಹಾಬಲೇಶ್ವರ ಗುರುಲಿಂಗಯ್ಯ ಹಿರೇಮಠ ಇದ್ದರು.