ಸರಳಾದೇವಿ ಕಾಲೇಜಿನಲ್ಲಿ ಉದ್ಯೋಗ ಮೇಳ.
ಬಳ್ಳಾರಿ ಜು 24ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿನ್ನೆ ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ ಘಟಕದಿಂದ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಜೆಯ ರೆಡ್ಡಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎಚ್ ಕೆ ಮಂಜುನಾಥ್ ರೆಡ್ಡಿ ವಹಿಸಿದ್ದರು.
 ಉದ್ಯೋಗ ಮತ್ತು ಮಾರ್ಗದರ್ಶನ ಘಟಕದ ಸಂಚಾಲಕ ಕಲ್ಯಾಣ ಬಸವ, ಸೂಪರ್ ಸೆವೆನ್, ಅಪನಾ,ಬಿಬಿ,ಟಾಟಾ ಎಲೆಕ್ಟ್ರಾನಿಕ್ಸ್ ,  ಮುಂತಾದ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳಾದ ಉಮೇಶ್,  ನಾಗಚಾರಿ, ಪವನ್, ರಾಬಿಯ ಭಾಗವಹಿಸಿದ್ದರು. ಈ ಉದ್ಯೋಗ ಮೇಳದಲ್ಲಿ ಹೆಚ್ಚು ನಿರುದ್ಯೋಗಿಗಳು  ಭಾಗವಹಿಸಿದ್ದರು