2 ನೇ ರೈಲ್ವೇ ಗೇಟ್ ಸಂಪರ್ಕ ಸೇತುವೆಗೆ ಭೂಮಿ ಸ್ಥಿರತೆ ಪರೀಕ್ಷೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಗರದ ರೇಡಿಯೋ ಪಾರ್ಕ್ ಹತ್ತಿರದ ಎರೆಡನೇ ರೈಲ್ವೇ ಗೇಟ್ ಬಳಿ ನಿರ್ಮಿಸಿ ಅರ್ಧದಲ್ಲೇ ನಿಂತ  ಫ್ಲೈ ಓವರ್ ಗೆ ಹಲವು ವರ್ಷಗಳ ನಂತರ ಸಂಪರ್ಕ ಸೇತುವೆಗೆ
ಭೋಮಿಯ ಸ್ಥಿರತೆಯ ಪರೀಕ್ಷೆ ಕಾರ್ಯ ನಡೆಯುತ್ತಿದೆ.
ಮೇಲ್ಸೇತುವೆಯನ್ನು ರೈಲ್ವೇ ಇಲಾಖೆ ನಿರ್ಮಿಸಿ ಬಿಟ್ಟಿತ್ತು. ರಾಜ್ಯ ಸರ್ಕಾರ ತನ್ನ ಪಾಲಿನ ಸಂಪರ್ಕ ಸೇತುವೆಯನ್ನು ನಿರ್ಮಿಸದೆ ಇತ್ತು. ಈಗ ನಿರ್ಮಿಸಲು ಯೋಜನೆಯನ್ನು ರೂಪಿಸಿ ಕಾಮಗಾರಿ ಕೈಗೊಳ್ಳಲು ಪರೀಕ್ಷೆ ನಡೆದಿದೆ.
ಈ ಸೇತುವೆ ಕಾಮಗಾರಿ ಮುಗಿದರೆ ಮೊದಲ ಗೇಟ್ ಬಳಿಯ ಸೇತುವೆಯ ಮೇಲಿನ ಟ್ರಾಫಿಕ್ ಒತ್ತಡ ಕಡಿಮೆಯಾಗಲಿದೆ.