ಕೇಂದ್ರದ ಬಜೆಟ್ – ಜನತೆಗೆ ಉತ್ತರದಾಯಿಯಾಗಿಲ್ಲ- ಆರೋಪ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು,24- ದೇಶದಾದ್ಯಂತ ಹೆಚ್ಚಾಗುತ್ತಿರುವ ಬಡತನ, ಆರ್ಥಿಕ ದುಸ್ಥಿತಿ, ಆದಾಯದ ಕುಸಿತ, ನಿರುದ್ಯೋಗ, ಉದ್ಯೋಗಗಳ ಕಡಿತ ಇತ್ಯಾದಿಯಾಗಿ ಜನತೆಯನ್ನು  ವಿನಾಶದ ಅಂಚಿಗೆ ತಳ್ಳುತ್ತಿರುವ, ಸಮಸ್ಯೆಗಳಿಗೆ  ಹಣಕಾಸು ಸಚಿವಾಲಯವು ದೇಶದ ಜನತೆಗೆ ಉತ್ತರದಾಯಿಯಾಗಬೇಕಿತ್ತು.ಆದರೆ ಆದು ತನ್ನ ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿಯಲ್ಲದೇ, ಇವುಗಳನ್ನು ನಿವಾರಿಸುವ ನಿಟ್ಟಿನಲ್ಲಿ, ತಾನು ಹಿಂದಿನ ವರ್ಷಗಳಲ್ಲಿ ಜಾರಿಗೆ ತಂದ ನೀತಿಗಳು ಮತ್ತು ತೆಗೆದುಕೊಂಡ ಕ್ರಮಗಳಿಂದ ಆದ ಪರಿಣಾಮಗಳ ಕುರಿತು ಯಾವುದೇ ವರದಿಯನ್ನು ಮಂಡಿಸದೇ ಆ ಕುರಿತು  ಇಡೀ ದೇಶದ ಜನತೆಯನ್ನು ಸಂಪೂರ್ಣ ಕತ್ತಲೆಯಲ್ಲಿಟ್ಟಿದೆ. ಆಹಾರ ಸಾಮಗ್ರಿಗಳು ಮತ್ತು ಇತರೆ ಆಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ಸಹ ಅದರ ಬಗ್ಗೆ ಪ್ರಸ್ತಾಪಿಸದೇ, ಹಣದುಬ್ಬರವು ನಿಯಂತ್ರಣದಲ್ಲಿದೆ ಎನ್ನುವ ಮೂಲಕ ಹಣಕಾಸು ಸಚಿವರು ವಿರೋಧಾಭಾಸವಾದ ಹೇಳಿಕೆ ನೀಡಿದ್ದಾರೆ ಎಂದು  ಎಸ್.ಯು.ಸಿ.ಐ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರವಾಶ ಘೋಷ್ ಆರೋಪಿಸಿದ್ದಾರೆ.
ಪರ್ಯಾಯವಾಗಿ “ಉದ್ದಿಮೆಗಳನ್ನು ಸುಲಭವಾಗಿ ನಡೆಸುವ” ಹೆಸರಿನಲ್ಲಿ ತೆರಿಗೆಯ ಕಡಿತ, ಆರ್ಥಿಕ ಪ್ರೋತ್ಸಾಹ, ಮತ್ತಿತರ ಸೌಲಭ್ಯಗಳನ್ನು ನೀಡುವ ಮೂಲಕ ಕಾರ್ಪೊರೇಟ್ ಮನೆತನಗಳನ್ನು ಮತ್ತಷ್ಟು ಒಲೈಸಲಾಗುತ್ತಿದೆ. ಇನ್ನೊಂದೆಡೆ ಉದ್ಯೋಗ ಸೃಷ್ಟಿಯನ್ನು ಕೌಶಲ್ಯ ತರಬೇತಿಯ ಹಂತಕ್ಕೆ ಇಳಿಸಿ,  ಕೌಶಲಗಳ ತರಬೇತಿ ನೀಡುವ  ಹೆಸರಿನಲ್ಲಿ ತಿಂಗಳಿಗೆ ೫,೦೦೦ ರೂಪಾಯಿಗಳ ಅತ್ಯಲ್ಪ ಸ್ಟೈಪೆಂಡ್ ನೀಡಿ, ಕಂಪನಿಗಳಲ್ಲಿ, ಕಾಯಂ ನೇಮಕಾತಿ ಮಾಡಿಕೊಳ್ಳದೇ, ಒಂದು ವರ್ಷದ ಅವಧಿಗೆ ಇಂಟರ್ನ್ಶಿಪ್ ಒದಗಿಸುವ
ಅಂದರೆ ಪರೋಕ್ಷವಾಗಿ ಮಾಲೀಕರಿಗೆ ಅಗ್ಗದ ದರದಲ್ಲಿ ಶ್ರಮ ಮತ್ತು ಹೆಚ್ಚುವರಿ ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುವ ಯೋಜನೆಯನ್ನು ತರಲಾಗಿದೆ.
22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು, ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ೫೦ ಪ್ರತಿಶತದಷ್ಟು ಹೆಚ್ಚುವರಿಯಾಗಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯವು ಹೇಳಿಕೊಂಡಿದೆ. ಆದರೆ ಇದು ವಾಸ್ತವಾಗಿ ರೈತರ ಬೇಡಿಕೆಯಂತೆ,  ಅ೨ + ೫೦% ಸೂತ್ರವನ್ನು ಆಧರಿಸಿಲ್ಲ, ಬದಲಿಗೆ ವಾಸ್ತವವಾಗಿ ಅದಕ್ಕಿಂತಲೂ ಕಡಿಮೆ ದರವನ್ನು ನಿಗದಿಪಡಿಸಲಾಗಿದೆ ಎಂದು  ಎಸ್.ಯು.ಸಿ.ಐ (ಸಿ) ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ತಿಳಿಸಿದ್ದಾರೆ.