ಮಕ್ಕಳಿಗೆ ಭಾರತೀಯ ಸಂಸ್ಕೃತಿ ಕಲಿಸಿ
ಗುಳೇದಗುಡ್ಡ,ಜು೨೪: ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಸಂಸ್ಕಾರವನ್ನು ಕಲಿಸಬೇಕು. ಸಂಸ್ಕಾರದಿಂದ ಮಕ್ಕಳ ಜೀವನ ಸಾರ್ಥಕಗೋಳ್ಳುತ್ತದೆ. ಹಿಂದೂ ಸನಾತನ ಧರ್ಮ ಪರಂಪರೆಯನ್ನು ಸಂಸ್ಕಾರ ಮಕ್ಕಳಲ್ಲಿ ಬೆಳೆಸಿದರೆ ಮಕ್ಕಳು ಮುಂದಿನ ದಿನಗಳಲ್ಲಿ ಆದರ್ಶ ಪ್ರಜೆಗಳಾಗಿ ಬೆಳೆಯುತ್ತಾರೆ ಎಂದು ವೇದಮೂರ್ತಿ ಚಿದಾನಂದಸ್ವಾಮಿ ದೇವಾಂಗಮಠ ಹೇಳಿದರು.
ಅವರು ಪಟ್ಟಣದ ರವಿವಾರ ಸಂಜೆ ನಡುವಿನ ಪೇಟೆಯ ಬನಶಂಕರಿ ದೇವಸ್ಥಾನದಲ್ಲಿ ಸಂಸ್ಕಾರ ಭಾರತಿ ಹಾಗೂ ಅಖಿಲ ಭಾರತೀಯ ಕಲೆ ಮತ್ತು ಸಾಹಿತ್ಯ ಸಂಸ್ಥೆ ಗುಳೇದಗುಡ್ಡ ಶಾಖೆ ವತಿಯಿಂದ ಆಯೋಜಿಸಿದ್ದ ಗುರುವಂದನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಸ್ಕಾರ ಭಾರತಿ ತೆರೆಮರೆಯಲ್ಲಿ ಅವಿರತ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವ ಕಾರ್ಯ ಮಾಡುತ್ತಿರುವುದು ಮೆಚ್ಚುವಂಥದ್ದು. ಮತ್ತು ಕಲೆ, ಸಾಹಿತ್ಯಕ್ಕೆ ಮಹತ್ವ ನೀಡಿ ಅದರ ಬೆಳವಣಿಗೆಗೂ ಕೂಡ ಕೈಜೋಡಿಸಿರುವುದು ಶ್ಲಾö್ಯಘನೀಯವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಜ್ಞಾನ ಸಿಂಧು ಸಾಂಸ್ಕೃತಿಕ ಸಂಸ್ಥೆಯ ಶಂಕರ ಮುಂದಿನಮನಿ ಹಾಗೂ ಕಲಾ ತಂಡದವರಿಂದ ಮತ್ತು ಸೋಮಶೇಖರ ಗಡೆದಗೌಡರ, ಶಶಿಕಲಾ ಭಾವಿ, ಬಸವರಾಜ ಸಿಂದಗಿಮಠ, ಕುಮಾರ ರಾಠೋಡ, ಭೀಮಸಿಂಗ ರಾಠೋಡ, ಗಗನ ಗುಡ್ಡದ ಮೊದಲಾದವರಿಂದ ಸಂಗೀತ ಸುಧೆ ಕೇಳುಗರ ಮನತಣಿಸಿತು. ಕಾರ್ಯಕ್ರಮದಲ್ಲಿ ಶಂಕರ ರೂಡಗಿ, ವಿವೇಕಾನಂದ ದೇವಾಂಗಮಠ, ಬಸವರಾಜ ಕುಂಬಾರ, ಮಲ್ಲಿಕಾರ್ಜುನ ರಾಜನಾಳ, ಮಹಾದೇವ ಜಗತಾಪ, ತಿಪ್ಪಣ್ಣ ಮಂಗಳೂರು, ಬಸವರಾಜ ಜಿಡಗಿ, ಸಂಗಮೇಶ ಉಣಚಗಿ ಮತ್ತಿತರರು ಉಪಸ್ಥಿತರಿದ್ದರು.