ಕ್ರೀಡಾ ಸಾಮಗ್ರಿ ಕೊಡುಗೆ
ಶಿರಹಟ್ಟಿ,ಜು೨೪: ತಾಲೂಕಿನ ಅಲಗಿಲವಾಡ ಗ್ರಾಮದ ಪ್ರಾಥಮಿಕ ಶಾಲೆಗೆ ಯಂಗ ಇಂಡಿಯಾ ಸಂಸ್ಥೆ ಹಾಗೂ ಯುತ್ ಪಾರ್ ಸೇವಾ ಬೆಂಗಳೂರ ಇವರ ಸಹಯೋಗದಲ್ಲಿಶಾಲಾ ಮಕ್ಕಳಿಗಾಗಿ ಕ್ರೀಡಾ ಸಾಮಗ್ರಿಗಳನ್ನು ಕೊಡುಗೆಯಾಗಿನೀಡಿದ್ದಾರೆ ಎಂದು ಶಾಲಾ ಮುಖ್ಯೋಪಾದ್ಯಯ ಹಾಲೇಶ ಜಕ್ಕಲಿ ಹೇಳಿದರು.
ಸಂಸ್ಥೆಯ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ಸರಕಾರಿ ಶಾಲಾ ಮಕ್ಕಳು ಕೂಟಾ ಎಲ್ಲಾ ಆಟಗಳ ಪರಿಚಯದ ಜೊತೆಗೆ ಕೌಶಲ್ಯಗಳನ್ನು ಹೊಂದಬೇಕು. ಅವರು ತಮ್ಮ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿ ಎನ್ನುವುದು ಮುಖ್ಯ ಉದ್ದೇಶವಾಗಿದೆ. ಈ ಸೇವಾ ಕಾರ್ಯದಲ್ಲಿ ಸಂಜೀವ ಪಲ್ಲೇದ , ಮಹಾಂತೇಶ ಎಮ್ಮಿಯವರ, ಪ್ರಕಾಶ ಎಮ್ಮಿಯವರ ರವರ ಪರಿಶ್ರಮ ಇದ್ದು, ಇವರ ಸಹಕಾರ ಸ್ಮರಣೀಯವಗಿದೆ. ಎಂದು ಹೇಳಿದರು.
ಈ ಸಂಧರ್ಭದಲ್ಲಿ ಎಸ್‌ಡಿಎಮ್‌ಸಿ ಅಧ್ಯಕ್ಷರಾದ ಮರಿಯಪ್ಪ ದೊಡ್ಡಮನಿ, ಪೇಮಯ್ಯ ಬಾಳಿಹಳ್ಳಿಮಠ, ತಿರಕಪ್ಪ ಪೂಜಾರ, ಮಾಂತೇಶ ಕೊಗನೂರ, ಜಿ.ಹೆಚ್,ರೆಡ್ಡೇರ, ರಮೇಸ ಪೂಜಾರ, ತಿರಕಪ್ಪ ದೇಸಳ್ಳಿ, ಮುಂತಾದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.