ಮಾಹಿತಿ ಪ್ರಸಾರ ಸಾಧನಗಳ ಸದುಪಯೋಗಅಗತ್ಯ
ಕಲಬುರಗಿ: ಜು.೨೪:ಜಗತ್ತಿನಯಾವುದೇ ಭಾಗದ ಮಾಹಿತಿಯನ್ನುಎಲ್ಲೆಡೆ ಪ್ರಸರಿಸುವ ಸಾಧನಗಳಾದ ಮುದ್ರಣ ಮಾಧ್ಯಮ, ಎಲೆಕ್ಟಾçನಿಕ್ಸ್ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳ ಸದುಪಯೋಗವನ್ನು ಪಡಿಸಿಕೊಳ್ಳಬೇಕು. ಇವುಗಳ ಮೂಲಕ ತಪ್ಪಾಗಿ ಪ್ರಸಾರವಾದರೆ ತೊಂದರೆಗಳು ಉಂಟಾಗುವುದರಿAದ ಮಾಹಿತಿಯು ನಿಖರವಾಗಿರುವುದುಅಗತ್ಯವಾಗಿದೆ. ಮಾಹಿತಿ ಪ್ರಸಾರದ ಸಾಧನಗಳ ಸದುಪಯೋಗಅಗತ್ಯವಾಗಿದೆಎಂದುಉಪನ್ಯಾಸಕ, ಚಿಂತಕಎಚ್.ಬಿ.ಪಾಟೀಲ ಹೇಳಿದರು.
ನಗರದಆಳಂದ ರಸ್ತೆಯಖಾದ್ರಿಚೌಕ್‌ನಲ್ಲಿರುವ ‘ಸಕ್ಸಸ್‌ಕಂಪ್ಯೂಟರತರಬೇತಿಕೇAದ್ರ’ದಲ್ಲಿ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಬುಧವಾರಜರುಗಿದ ‘ರಾಷ್ಟಿçÃಯಮಾಹಿತಿ ಪ್ರಸಾರ ದಿನಾಚರಣೆ’ಯಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಸ್ತುತವಾಗಿ ಅನೇಕ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಬಹಳ ವರ್ಷಗಳ ಹಿಂದೆಯೆಆಕಾಶವಾಣಿ, ದೂರದರ್ಶನಆರಂಭವಾಗಿ ಮಾಹಿತಿಯ ಪ್ರಸಾರಕಾರ್ಯ ಮಾಡುತ್ತಿವೆ. ಇಂಟರನೆಟ್ ವ್ಯಾಪಕವಾಗಿ ಹರಡುವ ಮೂಲಕ ಇಂದು ಮಾಹಿತಿತಂತ್ರಜ್ಞಾನದಕ್ರಾAತಿ ಸಂಭವಿಸಿದೆ. ಎಲ್ಲೆಡೆ ಮೋಬೈಲ್ ಬಳಕೆ ವ್ಯಾಪಕವಾಗಿದ್ದು, ಸಾಮಾಜಿಕ ಮಾಧ್ಯಮಗಳಾದ ವ್ಯಾಟ್ಸ್ಪ್, ಫೇಸ್‌ಬುಕ್, ಟ್ವಿಟರ್‌ನಂತಹ ಮುಂತಾದ ಜಾಲತಾಣಗಳ ಬಳಕೆ ಹೆಚ್ಚಾಗಿದೆಎಂದರು.
ಸಂಸ್ಥೆಯಅಧ್ಯಕ್ಷಅಸ್ಲಾA ಶೇಖ್‌ಮಾತನಾಡಿ, ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ, ಭಯ ಹುಟ್ಟಿಸುವ ಸಂಗತಿಗಳು, ಉಪಯೋಗವಿಲ್ಲದ ಸಂದೇಶಗಳನ್ನು ಹರಡಿಸುವ ಬದಲು, ಸಮಾಜಮುಖಿ ಚಿಂತನೆಗಳು ಮತ್ತುಅಂತಹ ಕಾರ್ಯಕ್ರಮಗಳು, ಜನರಿಗೆ, ಸಮಾಜಕ್ಕೆಉಪಯೋಗವಾಗುವ ವಿಚಾರಗಳನ್ನು ವಿನಿಮಯ ಮಾಡುವ ವೇದಿಕೆಯನ್ನಾಗಿ ಇವುಗಳನ್ನು ಬಳಸಿಕೊಳ್ಳುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕಾಗಿರುವುದು ಇಂದಿನ ತುರ್ತುಅವಶ್ಯಕತೆಇದೆಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗೆಪ್ಪಾ ಎಸ್. ಬಿರಾದಾರ, ಸುಲೇಮಾನ್ ಶೇಖ್, ಸಾನಿಯಾ ಶೇಖ್, ನಿಲೋಫರ್ ಶೇಖ್, ಹೀನಾ ಪರ್ವಿನ್ ಸೈಯದ್, ಕಾವೇರಿ ಪೂಜಾರಿ, ಸ್ವಾತಿ ಮುನ್ನಳ್ಳಿ, ಸುಪ್ರಿಯಾಕೂಕುಮಕರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.