ಪ್ರತಿಭಟನೆ: ಮನವಿ
ಬಾದಾಮಿ,ಜು೨೪: ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲೂಕ ಘಟಕ ಬಾದಾಮಿ ಇವರಿಂದ ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಮಾಡಿದನ್ನು ಖಂಡಿಸಿ, ಎಸ್.ಮತ್ತು ಎಸ್.ಟಿ. ಸಮಾಜದ ಮುಖಂಡರು ವಿವಿಧ ಬೇಡಿಕೆಗಳ ಇಡೇರಿಕೆಗಾಗಿ ಆರ್ಗಹಿಸಿ ಬೃಹತ ಪ್ರತಿಭಟಣೆಯನ್ನು ಹಮ್ಮಿಕೊಂಡು ಕಾಂಗ್ರೇಸ್ ಸರಕಾರದ ವಿರುದ್ದ ಘೋಷಣೆಗಳನ್ನು ಕುಗುತ್ತಾ ತಾಲೂಕಾ ದಂಡಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯ ಸರಕಾರದ ವಾಲ್ಮೀಕಿ ನಿಗಮದ ಬಹುಕೋಟಿ ಹಣವನ್ನು ನಮ್ಮ ಸಮಾಜದ ಮೀಸಲು ಕ್ಷೇತ್ರದಿಂದ ಚುಣಾಯಿತರಾಗಿ ನಮ್ಮ ಸಮಾಜದ ಹಿತ ಕಾಪಾಡಬೇಕಾದ ನಮ್ಮ ವಾಲ್ಮೀಕಿ ನಿಗಮದ ಮಂತ್ರಿಗಳು ನಿಗಮದ ಅಧ್ಯಕ್ಷರು ಹಣವನ್ನು ದುರುಪಯೋಗ ಮಾಡಿಕೊಂಡಿರುದು ದೃಡವಾಗಿದ್ದು ಮತ್ತು ಈಗಿರುವ ಸರಕಾರ ಕಾಂಗ್ರೇಸ್ ಪಕ್ಷವು ಚುಣಾವನೆಗೆ ಬಳಸಿರುವ ಸಂಗತಿ ಬೆಳಕಿಗೆ ಬಂದಿದೆ ಹಗರಣದ ಹಿಂದೆ ಯಾರೆಯಾಗರಲಿ ಅವರ ವಿರುದ್ದ ಕಟಿನಕ್ರಮವನ್ನು ತೆಗೆದುಕೊಂಡು ಸಮಾಜಕ್ಕೆ ಮೀಸಲಿಟ್ಟಿರುವ ಹಣವನ್ನು ಮರಳಿ ನೀಡ ಬೇಕು ಇಲ್ಲವಾದಲ್ಲಿ ಬರುವದಿನಗಳಲ್ಲಿ ಬೃಹತ ಪ್ರತಿಭಟನೆಯೊಂದಿಗೆ ಊಗ್ರ ಹೋರಾಟ ಮಾಡುವುದರ ಮೂಲಕ ಸರಕಾರಕ್ಕೆ ಸಮಾಜದವತಿಯಿಂದ ತಕ್ಕ ಪಾಟವನ್ನು ಕಲಿಸಲಾಗುವುದು ಎಂದು ಅಧ್ಯಕ್ಷ ಪ್ರಕಾಶ ನಾಯ್ಕರ ಆಗ್ರಹಿಸಿದರು.
ಪ್ರತಿಭಟಣೆಯಲ್ಲಿ ಪುರಸಭೆ ಸದಸ್ಯ ಬಸುರಾಜ ತಳವಾರ, ಮಲ್ಲಪ್ಪ ಕಲಾದಗಿ, ಯಲ್ಲಪ್ಪ ಪಾತ್ರೋಟಿ, ರಮೇಶ ಗೌಡರ, ಹುಚ್ಚಪ್ಪ ಹದ್ದನ್ನವರ, ರಮೇಶ ಕಳಸದ, ರಂಗಪ್ಪ ಕೊಳ್ಳನ್ನವರ, ರವಿ ತಳವಾರ, ರಾಮಣ್ಣ ಕಾವಳ್ಳಿ ಸೇರಿದಂದೆ ಸಮಾಜ ಭಾಂದವರು ಮುಖಂಡರು ಪ್ರತಿಭಟಣೆಯಲ್ಲಿ ಭಾಗವಹಿಸಿದ್ದರು.