ಜನ್ಮದಿನ ನಿಮಿತ್ತ ರಕ್ತದಾನ ಶಿಬಿರ
ಚನ್ನಮ್ಮನ ಕಿತ್ತೂರು,ಜು೨೪: ಶಾಸಕ ಬಾಬಾಸಾಹೇಬ ಪಾಟೀಲ ಅವರ ೫೨ನೇ ಹಾಗೂ ಸಹೋದರ ನಾನಾಸಾಹೇಬ ಪಾಟೀಲ ಇವರ ಜನ್ಮದಿನದ ನಿಮಿತ್ಯ ಕ್ಷೇತ್ರಾಧ್ಯಂತ ವಿವಿಧ ಶಾಲಾ ಕಾಲೇಜ, ಅಂಗನವಾಡಿ ಮಕ್ಕಳಿಗೆ ಪೆನ್ಸಿಲ್, ನೋಟ್‌ಬುಕ್ ವಿತರಿಸಲಾಯಿತು.
ಅವರ ಸ್ವಗ್ರಾಮವಾದ ನೇಗಿನಹಾಳದಲ್ಲಿ ಶ್ರೀಗುರು ಮಡಿವಾಳೇಶ್ವರ ಮಠದಲ್ಲಿ ಅಭಿಮಾನಿ ಬಳಗದವರಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸರ್ಕಾರಿ ಬಾಲಕೀಯರ ಪ್ರೌಢಶಾಲೆ ಮತ್ತು ಪಿಯು ಕಾಲೇಜ, ಕೊಂಡವಾಡ ಚೌಕದಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಉರ್ದು ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜ ಶಾಲಾ ಮಕ್ಕಳಿಗೆ ಬ್ಯಾಗ ಹಾಗೂ ಪೆನ್ಸಿಲ್, ನೋಟ್‌ಬುಕ್ ವಿತರಿಸಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಕುರಿತು ಸಂವಾದ ನಡೆಸಿದರು. ಶಿಕ್ಷಣ ದೇಶ ಕಟ್ಟುವ ಸಾಧನಾ ಗ್ರಾಮೀಣ ಮಕ್ಕಳು ತಂತ್ರಜ್ಞಾನ ಬಳಸಿಕೊಂಡು ಗುಣಾತ್ಮಕ ಶಿಕ್ಷಣ ಪಡೆಯುವುದು ಇಂದಿನ ಕಾಲಮಾನದಲ್ಲಿ ಅಗತ್ಯತೆಯಿದೆ ಆದ್ದರಿಂದ ಸರ್ಕಾರದಿಂದ ನಿಮಗೆ ಬೇಕಾಗುವ ಎಲ್ಲ ಸೌಲತ್ತುಗಳನ್ನು ಒದಗಿಸಿಕೊಡುತ್ತೇನೆಂದು ಮಕ್ಕಳಿಗೆ ಭರವಸೆ ನೀಡಿದರು.
ನಂತರ ತಾಪಂದಲ್ಲಿ ಡಿಜಿಟಲ್ ಸಾಧನಾ ಸಲಕರಣೆಗಳನ್ನು ವಿತರಿಸಿ, ವಿದ್ಯಾಗಿರಿಯಲ್ಲಿಯ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ, ಪ್ರಧಾನಮಂತ್ರಿ ಪೋಷಣಾ ಶಕ್ತಿ ಯೋಜನೆಯಡಿ ಅಡುಗೆ ಸ್ವಸಹಾಯ ಸಂಘದಿಂದ ತಯಾರಾದ ಎಪ್ರಾನ್ ವಿತರಣೆ ಹಾಗೂ ಹಿರಿಯ ನಾಗರಿಕರಿಗೆ, ವಿಶೇಷಚೇತನರಿಗೆ ವಿವಿಧ ಸಲಕರಣೆ ವಿತರಿಸಿದರು.
ನಂತರ ಕ್ಷೇತ್ರಾಧ್ಯಂತ ನೇಸರಗಿ, ಎಂಕೆ,ಹುಬ್ಬಳ್ಳಿ ಕಾಲೇಜುಗಳಲ್ಲಿ ಮಕ್ಕಳಿಗೆ ನೋಟ್‌ಬುಕ್ ಹಾಗೂ ಪೆನ್ಸಿಲ್ ವಿತರಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಫಕ್ಕೀರನಾಯ್ಕ ಸೇರಿ ಹಲವರು ಇದ್ದರು.
ಬ್ಲಾಕ ಕಾಂಗ್ರೇಸ್ ಅಧ್ಯಕ್ಷ ಸಂಗನಗೌಡ ಪಾಟೀಲ, ತಾಪಂ ಮುಖ್ಯಾಧಿಕಾರಿ ಕಿರಣ ಘೋರ್ಪಡೆ, ನರೇಗಾ ಎಡಿ ಲಿಂಗರಾಜ ಹಲಕರ್ಣಿಮಠ, ಐಸಿ ಕೋ-ಆಡಿನೇಟರ್ ಶಿವಲೀಲಾ ಜವಳಿ, ತಾಂತ್ರಿಕ ಸಂಯೋಜಕ ವಿನಯಕುಮಾರ ಪಾಟೀಲ, ಟಿಎಂಆಯ್‌ಎಸ್ ಅವಿನಾಶ ಬೇಟಗಾರ, ಪಿಡಿಓಗಳು, ಬಿಎಫ್ಟಿಗಳು, ಸಿಬ್ಬಂದಿಗಳು ಮುಖಂಡರುಗಳಾದ ಅಶಪಾಕ ಹವಾಲ್ದಾರ, ಸಿದ್ದಣ್ಣಾ ಮಾರಿಹಾಳ, ಶಂಕರ ಬಡಿಗೇರ, ಸುನೀಲ್ ಘೀವಾರಿ, ಎಫ್,ಎಂ, ಜಕಾತಿ, ಮಹೇಶ ಶೆಟ್ಟರ್, ಕುತುಬುದ್ದೀನ ನದಿಮುಲ್ಲಾ, ಮುಸ್ತಾಕ ಸುತ್ತಗಟ್ಟಿ, ಪ್ರವೀಣ ಗೌಡ್ರ, ಚಂದ್ರಗೌಡ ಪಾಟೀಲ, ಮುದಕಪ್ಪ ಮರಡಿ, ಅಪ್ಪಾಸಾಹೇಬ ಶಿಲ್ಲೇದಾರ, ಬಸವರಾಜ ಸಂಗೋಳ್ಳಿ, ಸೇರಿದಂತೆ ಗ್ರಾಪಂ ಅಧ್ಯಕ್ಷ,ಉಪಾಧ್ಯಕ್ಷ,ಸದಸ್ಯ, ಪಪಂ ಸದಸ್ಯರು, ವಿವಿಧ ಸಂಘಟಿಗರು, ಪಪಂ ಸದಸ್ಯರು, ಆಪ್ತ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಬೈಲಹೊಂಗಲ-ಕಿತ್ತೂರ ಕ್ಷೇತ್ರದ ಸಾರ್ವಜನಿಕರಿದ್ದರು.