ರಕ್ತದಾನದಿಂದ ಅನೇಕರಿಗೆ ಜೀವದಾನ
ಗುಳೇದಗುಡ್ಡ,ಜು.೨೪: ರಕ್ತದ ಅಲಭ್ಯತೆಯಿಂದಾಗಿ ಅನೇಕ ರೋಗಿಗಳು, ಅಪಘಾತಕ್ಕೀಡಾದ ಜನರು ಸಾಯುತ್ತಿದ್ದಾರೆ. ಅಪಘಾತಗಳ ಸಂದರ್ಭ ಹಾಗೂ ಹೆರಿಗೆಯ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಆದ್ದರಿಂದ ಯುವಕರು ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನದಿಂದÀ ಅನೇಕರನ್ನು ಕಾಪಾಡಬಹುದು ಎಂದು ಗುಳೇದಗುಡ್ಡದ ಪ್ರಾಥಮಿಕ ಆರೋಗ್ಯ ಕೇಂದ್ರದ ಜ್ಯೋತಿ ಮೆಣಸಿನಕಾಯಿ ಹೇಳಿದರು.
ಅವರು ಸಮೀಪದ ಹಾನಾಪೂರ ಎಸ್‌ಪಿ ಗ್ರಾಮದಲ್ಲಿ ಪಟ್ಟಣದ ಭಂಡಾರಿ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ಶಿಬರದಲ್ಲಿ ಎಚ್‌ಐವಿ ಕುರಿತು ಜಾಗೃತಿ ಮತ್ತು ರಕ್ತದಾನ ಮಹತ್ವ ಕಾರ್ಯಕ್ರಮದಲ್ಲಿ ಮಾತನಾಡಿ, ರಕ್ತದಾನ ಮಾಡುವುದರಿಂದ ಅನೇಕ ಉಪಯೋಗಗಳಿವೆ. ದೇಹದಲ್ಲಿನ ಕೊಬ್ಬು ಕಡಿಮೆಯಾಗುತ್ತದೆ ಅಲ್ಲದೇ ಕೊಲೆಸ್ಟ್ರಾಲ್ ಫ್ಯಾಟ್‌ನಿಂದ ಮುಕ್ತಿ ಹೊಂದಬಹುದು. ನಿಮ್ಮ ರಕ್ತ ಮತ್ತೊಬ್ಬರ ಜೀವವನ್ನು ಉಳಿಸುತ್ತದೆ ಎಂದರು.
ಡಾ. ಸರೋಜಾ ಗುಡದೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಬಾಗಲಕೋಟೆಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸಂಯೋಜನೆಯಲ್ಲಿ ಮಹಾವಿದ್ಯಾಲಯದ ಎನ್‌ಸಿಸಿ, ಎನ್‌ಎಸ್‌ಎಸ್ ಮತ್ತು ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ರಕ್ತದಾನವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಡಾ. ಮಂಜಣ್ಣ, ಡಾ. ನಾಗೇಂದ್ರ ಸ್ವಾಮಿ, ಡಾ. ಗಿರೀಶ್ ಕುಮಾರ, ಪ್ರೊ. ಮೂಕಪ್ಪ ಚನ್ನದಾಸರ, ಪ್ರೊ. ಸನಾ ಶಿರಸಂಗಿ, ಶಿವಾನಂದ ಪರಗಿ ಮುಂತಾದವರು ಭಾಗವಹಿಸಿದ್ದರು