ಪ್ರಪಂಚದಲ್ಲೇ ಕನ್ನಡ ಅದ್ಭು ಭಾಷೆ
ಧಾರವಾಡ,ಜು.೨೪: ಕನ್ನಡ ಭಾಷೆ ಪ್ರಪಂಚದಲ್ಲೇ ಸಮೃದ್ಧ ಭಾಷೆಯಾಗಿದ್ದುಇದೊಂದುಆತ್ಮವಿಶ್ವಾಸದ ಭಾಷೆಯಾಗಿದೆ. ಕನ್ನಡ ಭಾಷೆಗೆ ಸಶಕ್ತವಾದ ಭಾಷಾ ನೀತಿಅಗತ್ಯವಾಗಿದೆಎಂದುಕನ್ನಡಅಭಿವೃದ್ಧಿ ಪ್ರಾಧಿಕಾರದಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ಅವರು ಸಂಘದ ೧೩೫ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ೩ನೇ ದಿನದಕಾರ್ಯಕ್ರಮದಲ್ಲಿಆಯೋಜಿಸಿದ್ದ ಶಿಕ್ಷಣ ಸುಧಾರಕರು' ಪುಸ್ತಕ ಬಿಡುಗಡೆ, ಸುಗಮ ಸಂಗೀತ, ಶಿಕ್ಷಣ ಸಂಸ್ಥೆ ಸ್ಮರಣೆ, ಹಿರಿಯ ಸದಸ್ಯರಿಗೆಗೌರವ ಸಮರ್ಪಣೆ ಹಾಗೂ ತತ್ವಪದ ಸಾಂಸ್ಕೃತಿಕಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದಅವರು, ನಮ್ಮ ಹಿರಿಯರುಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದ್ದಾರೆ.ಆದರೆ ಸರ್ಕಾರಆಂಗ್ಲ ಭಾಷೆಯ ಶಾಲೆಗಳನ್ನು ತೆರೆದಿರುವುದರಿಂದ ಭವಿಷ್ಯದಲ್ಲಿಕನ್ನಡ ಭಾಷೆಯ ಸ್ಥಿತಿಗತಿ ಏನು ಎಂಬುದನ್ನುಆತ್ಮವಿಮರ್ಶೆ ಪ್ರತಿಯೊಬ್ಬಕನ್ನಡಿಗರು ಮಾಡಬೇಕಿದೆ. ಭಾರತೀಯ ೨೨ ಭಾಷೆಗಳಲ್ಲಿ ಹಿಂದಿ ಭಾಷೆಯದೇ ಪಾರಮ್ಯಇದ್ದು, ೪೦ ವರ್ಷಗಳಲ್ಲಿ ಕನ್ನಡದ ಬೆಳವಣಿಗೆ ಶೇಕಡಾ ೩.೭ ಮಾತ್ರ.ಹಿಂದಿನಂತೆ ಈಗ ಕನ್ನಡಕ್ಕೆಇಂದುಯಾವುದೇ ಕಾನೂನಿನ ಬಲ ಇಲ್ಲದಾಗಿದೆಎಂದುತಮ್ಮಆತಂಕ ವ್ಯಕ್ತಪಡಿಸಿದ ಅವರುಇಂತಹ ಶಕ್ತಿಶಾಲಿ ಭಾಷೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ.ಭಾಷೆ ನಾಶವಾದರೆ ಸಂಸ್ಕೃತಿಯೇ ನಾಶವಾದಂತೆಎಂದರು. ಶಿಕ್ಷಣ ಸಂಸ್ಥೆಯ ಸ್ಮರಣೆಯಲ್ಲಿಕರ್ನಾಟಕ ಶಿಕ್ಷಣ ಸಂಸ್ಥೆ(ಕೆ.ಇ.ಬೋರ್ಡ್) ಕುರಿತುಕನ್ನಡಉಪನ್ಯಾಸಕ ಸಂಗಮೇಶ ಹಡಪದ ಮಾತನಾಡಿ, ಧಾರವಾಡದ ಕೆ.ಇ. ಬೋರ್ಡ್ ನಾಡಿನಅತ್ಯಂತ ಹಳೆಯದಾದ ಸಂಸ್ಥೆಯಾಗಿದೆ.ಇದೊಂದು ಪ್ರತಿಷ್ಠಿತ ಸಂಸ್ಥೆ. ದಿ. ನಾರಾಯಣರಾವಕಬ್ಬೂರರಂತಹ ಪ್ರಾತಃಸ್ಮರಣೀಯರು ಹುಟ್ಟುಹಾಕಿದ ಸಂಸ್ಥೆಯಾಗಿದೆ.ಏಕೀಕರಣದ ಸಂದರ್ಭದಲ್ಲಿಕರ್ನಾಟಕ ಎಂಬ ಪರಿಕಲ್ಪನೆಯನ್ನುಜನಮಾನಸದಲ್ಲಿ ಮೂಡಿಸಿದ್ದೇ ಕೆ.ಇ.ಬೋರ್ಡ್ ಸಂಸ್ಥೆ, ಶಿಕ್ಷಣದ ವ್ಯಾಪಾರಿಕರಣದಿಂದ ಮುಕ್ತವಾದ ಈ ಸಂಸ್ಥೆ ಇಂದು ಸಹಸ್ರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ.ಈ ನಾಡಿಗೆ ೫ ಹೆಸರಾಂತಚಿಂತಕರನ್ನು ಶಿಕ್ಷಣ ತಜ್ಞರನ್ನು ಮತ್ತು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನೂ ನೀಡಿದಕೀರ್ತಿಇದೆಎಂದರು. ಡಾ. ಎಂ.ಎಂ. ಕಲಬುರ್ಗಿಟ್ರಸ್ಟ್ಅಧ್ಯಕ್ಷಡಾ. ವೀರಣ್ಣರಾಜೂರಶಿಕ್ಷಣ ಸುಧಾರಕರು’ ಕೃತಿ ಬಿಡುಗಡೆ ಮಾತನಾಡಿ, ಪರಭಾಷಾ ಪ್ರಾಭಲ್ಯ ಬರುವುದೇ ಸವಾಲಿನ ಕೆಲಸ. ಇಂದುಕನ್ನಡದ ಅಸ್ಮಿತೆಗೆ ಹೋರಾಡುವ ಕಾಲ ಸನ್ನದ್ಧವಾಗಿದೆ. ಕ.ವಿ.ವ. ಸಂಘ ಅನೇಕ ಮೌಲಿಕಕೃತಿ ಪ್ರಕಟಿಸಿದ್ದು ತನ್ನ ವಾಗ್ಭೂಷಣ ಪತ್ರಿಕೆಗೆ ಮರುಜೀವ ನೀಡಬೇಕಿದೆಎಂದರು.
ಕೃತಿ ಸಂಪಾದಕಡಾ.ಧನವಂತ ಹಾಜವಗೋಳ ಸಂಪಾದಕರ ನುಡಿಗಳನ್ನಾಡಿದರು. ಪ್ರೊ.ಮಾಲತಿ ಪಟ್ಟಣಶೆಟ್ಟಿಅಧ್ಯಕ್ಷೀಯ ನುಡಿಗಳನ್ನಾಡಿದರು.ವೇದಿಕೆಯಲ್ಲಿಚಂದ್ರಕಾಂತ ಬೆಲ್ಲದ, ಡಾ.ಡಿ.ಎಸ್. ರಾಜಪುರೋಹಿತಇದ್ದರು. ಸಂಘದ ಹಿರಿಯ ಸದಸ್ಯ ಸಿ.ಎಂ.ಚನ್ನಬಸಪ್ಪಅವರನ್ನುಕಲ್ಪನಾದೊಡಗೌಡರ ಸನ್ಮಾನಿಸಿದರು.
ಡಾ. ಸದಾಶಿವ ಮರ್ಜಿ ಹಾಗೂ ಅನುರಾಗ ಸಾಂಸ್ಕೃತಿಕ ಬಳಗ ಸುಗಮ ಸಂಗೀತಕಾರ್ಯಕ್ರಮ ನಡೆಸಿಕೊಟ್ಟರು.ತಬಲಾದಲ್ಲಿ ಅನೀಲ ಮೇತ್ರಿ ಸಾಥ ನೀಡಿದರು. ಬಂಕಾಪುರದ ಸಿದ್ಧಲಿಂಗಪ್ಪ ಚನ್ನಬಸಪ್ಪ ನರೇಗಲ್ಲ ತತ್ವಪದಗಳನ್ನು ಹಾಡಿದರು. ಶಿವಯ್ಯ ಇಟಗಿಮಠತಬಲಾ ಸಾಥ್ ನೀಡಿದರು.
ವೀರಣ್ಣಒಡ್ಡೀನ ಸ್ವಾಗತಿಸಿ, ನಿರೂಪಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶತುರಮರಿ, ಡಾ.ಸಂಜೀವಕುಲಕರ್ಣಿ, ಡಾ.ಶೈಲಜಾಅಮರಶೆಟ್ಟಿ, ಗುರು ಹಿರೇಮಠ, ಡಾ.ಮಹೇಶ ಹೊರಕೇರಿ, ಡಾ.ಜಿನದತ್ತ ಹಡಗಲಿ, ಶ್ರೀಮತಿ ವಿಶ್ವೇಶ್ವರಿ ಹಿರೇಮಠ, ಶಿವಾನಂದ ಭಾವಿಕಟ್ಟಿ, ವೆಂಕಟೇಶ ಮಾಚಕನೂರ, ಬಾಳಪ್ಪಾ ಚಿನಗುಡಿ, ಡಾ. ಲಿಂಗರಾಜಅಂಗಡಿ, ಬಸವರಾಜ ಬೆಂಗೇರಿ, ಎಂ.ಎಂ.ಚಿಕ್ಕಮಠ, ಹರ್ಷ ಡಂಬಳ, ಬಿ.ಜಿ. ಬಾರ್ಕಿ, ಅರುಣ ನಾಗೀರ, ಶಿವಾನಂದ ಹೂಗಾರ, ಆಶಾ ಸೈಯ್ಯದ ಸೇರಿದಂತೆ ಮುಂತಾದವರಿದ್ದರು.