ಕೇಂದ್ರದ ಬಜೆಟ್ ಸಂತಸ-ಶ್ರೀನಾಥ್
ಕೋಲಾರ,ಜು,೨೪- ೨೦೨೪ ಆಯ್ಯವ್ಯಯ ಕೇಂದ್ರ ಸಚಿವೆ ನಿರ್ಮಾಲ ಸೀತಾರಾಮನ್ ಬಜೆಟ್‌ನಲ್ಲಿ ಎಲ್ಲಾ ಕ್ಷೇತ್ರವಾರು ಆರ್ಥಿಕ, ಸಾಮಾಜಿಕವಾಗಿ ರಾಜ್ಯವಾರು ನ್ಯಾಯ ಕಾಪಾಡುವ ನಿಟ್ಟಿನಲ್ಲಿ ಬಜೆಟ್ ಮಂಡಿಸಿರುವುದು ಸಂತಸವಾಗಿದೆ ಎಂದು ಸಮಾಜ ಸೇವಕ ಹಾಗೂ ಜೆ.ಡಿ.ಎಸ್. ಮುಖಂಡ ಸಿ.ಎಂ.ಆರ್. ಶ್ರೀನಾಥ್ ಪ್ರತಿಕ್ರಿಯಿಸಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ತರಕಾರಿ ಸಂಸ್ಕರಣೆಗಾಗಿ ಶೀತಲೀಕರಣ ಹಾಗೂ ಸಾಗಾಣೆಗೆ ಕೇಂದ್ರ ತೀರ್ಮಾನ ಕೈಗೊಂಡಿರುವುದು ಶೇ.೧೦-೧೫ರಿಂದ ತರಕಾರಿ ಉತ್ಪನ್ನಗಳನ್ನು ಕಾಪಾಡಬಹುದಾಗಿದೆ. ಕರ್ನಾಟದಲ್ಲಿ ೨೦ ಹೊಸ ರೈಲುಗಳನ್ನು ಬಿಡುಗಡೆ ಮಾಡಿವುದರಿಂದ ಸಾರ್ವಜನಿಕರ ಖರ್ಚು ವೆಚ್ಚ ಕಡಿಮೆಯಾಗುವುದರಿಂದ ಆರ್ಥಿಕ ಹೊರೆ ತಪ್ಪಿಸುವ ಕೆಲಸ ಉತ್ತಮವಾಗಿದೆ. ಒಟ್ಟಾರೆ ಈ ಬಾರಿಯ ಬಜೆಟ್ ಮಂಡನೆ ಉತ್ತಮವಾಗಿದೆ ಎಂದು ಪ್ರತಿಪಾದಿಸಿದ್ದಾರೆ.