ಸಾಹಿತ್ಯ,ಸಂಸ್ಕೃತಿ ಉಳಿವಿಗಾಗಿ ಪ್ರೋತ್ಸಾಹ ಅಗತ್ಯ
ದೇವನಹಳ್ಳಿ.ಜು.೨೪-ಭಾರತದ ಸಾಹಿತ್ಯ ಸಂಸ್ಕೃತಿ ಮತ್ತು ಸನಾತನ ಧರ್ಮವನ್ನು ದೇಶ ವಿದೇಶಗಳಲ್ಲಿ ದಿವ್ಯಾ ದಿನೇಶ್ ರವರು ತಮ್ಮ ಕಲಾ ಪ್ರತಿಭೆ ಮೂಲಕ ಪ್ರದರ್ಶನಗಳನ್ನು ನೀಡುತ್ತಿರುವುದು ಅಭಿನಂದನೀಯ,ಸಾಹಿತ್ಯ ಮತ್ತು ಸಂಸ್ಕೃತಿ ಗಳ ಉಳಿವಿಗಾಗಿ ಪ್ರೋತ್ಸಾಹ ಅಗತ್ಯ ಅವಶ್ಯಕ ಎಂದು ರಾಜಶ್ರೀ ನಾಗರಾಜು ಯಾದವ್ ತಿಳಿಸಿದರು.
ಅವರು ಪಟ್ಟಣದ ಕಲಾಮಂಟಪದ ಸಭಾಂಗಣದಲ್ಲಿ ಆರಾಧನ ನೃತ್ಯ ಶಾಲೆಯ ವತಿಯಿಂದ ಆಯೋಜಿಸಿದ್ದ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರಾಥಮಿಕ ಹಂತದಿಂದಲೇ ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಜೊತೆಯಲ್ಲಿ ಸಂಗೀತ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿ ಕೊಳ್ಳಲು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮೀನಾಕ್ಷಿ ಕೃಷ್ಣಬೈರೇಗೌಡ ಪಾಶ್ಚಿಮಾತ್ಯ ಸಂಸ್ಕೃತಿಯ ಹಾವಳಿಯಿಂದ ನಮ್ಮ ದೇಶದ ಸಂಸ್ಕೃತಿ ನಶಿಸುತ್ತಿದೆ. ಯುವ ಸಮೂಹ ಬಹುಬೇಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ. ಪ್ರಾರ್ಥಮಿಕ ಹಂತದಿಂದಲೇ ಮಕ್ಕಳಿಗೆ ಮಹಾಭಾರತ, ರಾಮಾಯಣ ಮತ್ತು ಭಗವದ್ಗೀತೆಯ ಗ್ರಂಥಗಳ ಸಾರಾಂಶವನ್ನು ಮಕ್ಕಳಿಗೆ ಮನೆ ಮತ್ತು ಶಾಲೆಗಳಲ್ಲಿ ಅಭ್ಯಾಸ ಮಾಡಿಸಬೇಕು ಎಂದು ತಿಳಿಸಿದರು. ಶ್ರೀಮತಿ ದಿವ್ಯಾಶ್ರೀ ದಿನೇಶ್ ರವರು ರಂಗಪ್ರವೇಶ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಯಾದವ ಸಮೂದಾಯದ ಅಧ್ಯಕ್ಷರಾದ ಡಾ? ನಾರಾಯಣಸ್ವಾಮಿ, ನಂದಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವೈ.ಕೆ. ಚಂದ್ರಶೇಖರ್, ಲಲಿತಮ್ಮ, ರಾಧಮ್ಮ, ಉಷಾ, ಮತ್ತು ಆನಂದ್ ಎಸ್. ನಂಜುಂಡರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಹರಿಕುಮಾರ್, ವಿಶ್ವನಾಥ್, ಆರಾಧನ ನೃತ್ಯ ಶಾಲೆಯ ವಿದ್ವಾನ್ ನಾಗಭೂಷಣ್ ಹಾಜರಿದ್ದರು.
ಭರತನಾಟ್ಯ ಕಲಾವಿದೆ ಅಶ್ವಿನಿ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.