ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಫ್.ಪಿ.ಓ. ನೆರವು
ಕೋಲಾರ,ಜು.೨೪- ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುವ ರೈತ ಹಾಗೂ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪರಿಕರಗಳನ್ನು ನೀಡುವ ನಿಟ್ಟಿನಲ್ಲಿ ರೈತ ಉತ್ಪಾದಕರ ಕಂಪನಿಯಿಂದ ( ಎಫ್.ಪಿ.ಒ ) ಪೋಷಕರಿಗೆ ಸಹಕರಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಲಕ್ಷ್ಮೀಸಾಗರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ನಿಯಮಿತ ಅಧ್ಯಕ್ಷ ಟಿ.ಎಂ.ಶ್ರೀನಿವಾಸಗೌಡ ಹೇಳಿದರು.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯದರೂರು ಮತ್ತು ಲಕ್ಷ್ಮೀಸಾಗರ ಸರಕಾರಿ ಶಾಲೆಗಳಿಗೆ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, ಗ್ರಾಮಗಳಲ್ಲಿ ಪೋಷಕರು ಕೂಲಿನಲಿ ಮಾಡಿ, ಜೀವನ ಸಾಗಿಸುವ ಪರಿಸ್ಥಿತಿ ಇದ್ದು, ಲಕ್ಷ್ಮಿಸಾಗರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯಿಂದ ಸರಕಾರಿ ಶಾಲೆಯ ಮಕ್ಕಳನ್ನು ಗಮನಹರಿಸಿ ಶೈಕ್ಷಣಿಕ ಪರಿಕರಗಳನ್ನು ನೀಡಿ, ಮಕ್ಕಳ ಉಜ್ವಲ ಭವಿಷ್ಯಕ್ಕೆ ಕೈಲಾದಷ್ಟು ಶ್ರಮವಹಿಸಲಾಗುತ್ತದೆ ಎಂದರು.
ಲಕ್ಷ್ಮೀಸಾಗರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ನಿಯಮಿತ ಉಪಾಧ್ಯಕ್ಷ ಎಲ್.ವಿ.ಶ್ರೀನಿವಾಸ, ಪ್ರಗತಿಪರ ರೈತ ಹನುಮೇಗೌಡ, ಮಂಜಲನಗರ ಕೋದಂಡಪ್ಪ, ಸಿಇಒ ಮಂಜುನಾಥ, ಡಿ.ಇ.ಒ ಕೌಶಿಕ್, ಕಮ್ಮಸಂದ್ರ ನಾಗರಾಜಯ್ಯ, ಸೈಗಲ್ ಶಿವಾರೆಡ್ಡಿ, ವಿನೋದ್, ಶಿಕ್ಷಕರು ಉಪಸ್ಥಿತರಿದ್ದರು.