ಬಂದೂಕು ತರಬೇತಿ ದುರುಪಯೋಗ ಬೇಡ
ಚನ್ನಪಟ್ಟಣ,ಜು.೨೪: ಬಂದೂಕು ತರಬೇತಿ ಪಡೆದು ಸರ್ಟಿಫಿಕೆಟ್ ಪಡೆದು, ತಮಗೆ ಇಷ್ಟ ಬಂದ ರೀತಿಯಲ್ಲಿ, ದುರುಪಯೋಗಪಡಿಸಿಕೊಳ್ಳಬಾರದು ಎಂದು ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀನಾರಾಯಣ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಜಿಲ್ಲಾ ಶಸಸ್ತ್ರ ಮೀಸಲು ಪಡೆ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಆಶ್ರಯದಲ್ಲಿ ನಾಗರೀಕರಿಗೆ ಬಂದೂಕು ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಬಂದೂಕು ತರಬೇತಿಯನ್ನು ಪಡೆದು, ನಾನು ಬಂದೂಕು ಪಡೆದಿದ್ದೇನೆ ಎಂದು ತಮ್ಮ ಚಿಂತನೆಯನ್ನು ಬೇರೆಡೆಗೆ ವರ್ಗಾವಣೆ ಮಾಡಬಾರದು, ಬಂದೂಕು ಪಡೆದಿರುವುವರು ಕೂಡ ಪೊಲೀಸರ ಜೊತೆ ಕೈ ಜೋಡಿಸಿ, ಸಮಾಜದಲ್ಲಿ ನಡೆಯುವ ಅಪರಾಧ ಪ್ರಕರಣಗಳ ನಿಯಂತ್ರಣದಲ್ಲಿ ಪಾಲುದಾರರಾಗಬೇಕೆಂದು ತಿಳಿಸಿದರು.
ತಮ್ಮ ಹಾಗೂ ತಮ್ಮ ಆಸ್ತಿಯ ರಕ್ಷಣೆಗಾಗಿ ಬಂದೂಕು ಪಡೆಯುವ ಸಾಕಷ್ಟು ಮಂದಿ. ಯಾವ ಸಂದರ್ಭದಲ್ಲಿ ಯಾವ ರೀತಿಯಾಗಿ ಬಂದೂಕನ್ನು ನಿರ್ವಹಣೆ ಮಾಡಬೇಕಾದ ಜ್ಞಾನದ ಅಬಾವದಿಂದ ಹಲವಾರು ಅವಘಡಗಳು ಸಂಭವಿಸಿರುವ ಉದಾಹರಣೆ ಇದೆ ಎಂದು ಎಚ್ಚರಿಸಿ ಹೇಳಿದರು.
ಶಸಸ್ತ್ರ ಕಾಯ್ದೆಗಳ ಬಗ್ಗೆಯೂ ಅರಿವು ಮೂಡಿಸಲು ಈ ಬಂದೂಕು ತರಬೇತಿ ಹೆಚ್ಚು ಅವಶ್ಯಕತೆಯಾಗಿದೆ, ಅನವಶ್ಯಕವಾಗಿ ಬಂದೂಕು ಬಳಸುವುದು ಕಾನೂನಿನ ಪ್ರಕಾರ ಬಹಳ ಅಪರಾಧವಾಗಿದೆ, ಪಡೆದ ಬಂದೂಕುಗಳನ್ನು ಜೋಪಾನವಾಗಿರಿಸುವುದು ಅಷ್ಟೆ ಮುಖ್ಯವಾಗಿದ್ದು, ಮನೆಯಲ್ಲಿ ಯಾರಿಗೂ ಸಿಗದ ರೀತಿಯಲ್ಲಿ ಬಂದೂಕನ್ನುಇಡಲುಎಚ್ಚರ ವಹಿಸಬೇಕೆಂದರು.
ಈ ಸಂದರ್ಭಲ್ಲಿ ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಮಾತನಾಡಿ, ಬಂದೂಕು ತರಬೇತಿ ಪಡೆಯುವವರಿಗೆ ತಾಳ್ಮೆ ಎಂಬುದು ಹೆಚ್ಚು ಅವಶ್ಯಕತೆಯಾಗಿದೆ ಈ ನಿಟ್ಟಿನಲ್ಲಿ ತಾಳ್ಮೆ ಇಲ್ಲದಿರುವುವರಿಗೆ ಈ ತರಬೇತಿ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಬಂದೂಕು ಶಿಬಿರದಲ್ಲಿ ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಡಿ.ವೈ.ಎಸ್.ಪಿ.ರಘು, ಸರ್ಕಲ್‌ಇನ್ಸ್‌ಪೆಕ್ಟರ್ ರವಿಕಿರಣ್, ರವಿ, ಆರ್.ಎಸ್.ಐ.ಗಳಾದ ಪ್ರದೀಪ್, ಪರಮೇಶ್, ಶಶಿಕುಮಾರ್ ಹಾಗೂ ಹಲವಾರು ಮಂದಿ ಹಾಜರಿದ್ದರು.