ಉಕ್ಕಲಿಯಲ್ಲಿ ಸ್ವಚ್ಚತಾ ಹೀ ಸೇವಾ ಅಭಿಯಾನ ನಿಮಿತ್ತ ಶ್ರಮದಾನ
ಸಂಜೆವಾಣಿ ವರ‍್ತೆ,
ವಿಜಯಪುರ, ಸೆ. ೨೯: ನಗರದ ಬಿ.ಎಲ್.ಡಿ.ಇಡೀಮ್ಡ್ ವಿಶ್ವವಿದ್ಯಾಲಯದ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಸೆಪ್ಟೆಂಬರ್ ೧೭ರಿಂದ ಅಕ್ಟೋಬರ್ ೨ರ ವರೆಗೆ ಸ್ವಚ್ಛತಾ ಹಿ ಸೇವಾ-೨೦೨೪ ಕರ‍್ಯಕ್ರಮ ಆಯೋಜಿಸಲಾಗಿದೆ.
ಈ ಸ್ವಚ್ಛತೆ ಅಭಿಯಾನದ ಅಂಗವಾಗಿ ಗುರುವಾರ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ವಿದ್ಯರ‍್ಥಿನಿಯರಿಗೆ ಸ್ವಚ್ಛತೆ ಪ್ರತಿಜ್ಞೆ ಮಾಡಿಸಲಾಯಿತು. ಪ್ರತಿವಾರ ಎರಡು ಗಂಟೆಯಂತೆ ರ‍್ಷಕ್ಕೆ ೧೦೦ ಗಂಟೆ ಸ್ವಚ್ಛತೆಗೆ ಮೀಸಲಿಡಲು ಮತ್ತು ಸರ‍್ವಜನಿಕ ಸ್ಥಳದಲ್ಲಿ ಕಸ ಹಾಕದಿರಲು ಕುರಿತು ಗ್ರಾಮಸ್ಥರಲ್ಲಿ ಅರಿವು ಜನಜಾಗೃತಿ ಮೂಡಿಸಲು ತರಬೇತಿ ನೀಡಲಾಯಿತು.
ಈ ಸಂರ‍್ಭದಲ್ಲಿ ವಿದ್ಯರ‍್ಥಿನಿಯರು ಉಕ್ಕಲಿ ಬಸ್ ನಿಲ್ದಾಣದಲ್ಲಿ ವೈದ್ಯಕೀಯ ವಿದ್ಯರ‍್ಥಿಗಳು ಮತ್ತು ಕಾಲೇಜಿನ ಸಿಬ್ಬಂದಿಯ ಜೊತೆಗೂಡಿ ಸ್ವಚ್ಛತೆ ಕೈಗೊಂಡರು.
ಈ ಸ್ವಚ್ಛತಾ ಅಭಿಯಾನದಲ್ಲಿ ವೈದ್ಯಕೀಯ ಕಾಲೇಜಿನ ಡಾ. ಎಂ. ಸಿ.ಯಡವಣ್ಣವರ, ಡಾ. ಶೈಲಜಾ ಪಾಟೀಲ, ಡಾ. ರೇಖಾ ಉದಗಿರ, ಡಾ. ಎಂ.ಆರ್. ಗುಡದಿನ್ನಿ, ಡಾ. ಪ್ರವೀಣ ಗಂಗನಹಳ್ಳಿ, ಡಾ. ಸಂತೋಷ ಪಾಟೀಲ, ಡಾ. ತನುಜಾ ಪಟ್ಟಣಕರ, ಡಾ. ಪೂಜಾ ತೊದಲಬಾಗಿ, ಡಾ. ಸಂದೀಪ ಯಂಕಂಚಿ, ಸಂಜೀವಖಾನಗೌಡ್ರ, ಡಿ. ಐ. ಮಠಪತಿ ಮುಂತಾವದವರು ಪಾಲ್ಗೊಂಡಿದ್ದರು.