ದೇಶದ ಸ್ವಾತಂತ್ರö್ಯಕ್ಕೆ ಕ್ರಾಂತಿಕಾರರ ಕೊಡುಗೆ ಅಪಾರ: ಪ್ರಾಚಾರ್ಯ ಮೇರವಾಡೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨೯ : ದೇಶಕ್ಕೆ ಸ್ವಾತಂತ್ರö್ಯ ತಂದು ಕೊಡುವಲ್ಲಿ ಭಗತ್‌ಸಿಂಗ್‌ರAತಹ ಕ್ರಾಂತಿಕಾರರ ಕೊಡುಗೆ ಅಪಾರವಾಗಿದೆ ಎಂದು ನಗರದ ಚಾಣಕ್ಯ ಕಲೆ ಮತ್ರು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಟಿ. ಮೇರವಾಡೆ
ಸ್ಥಳೀಯ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಭಗತ ಸಿಂಗ್‌ರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರತದ ರಾಷ್ಟಿçÃಯ ಸ್ವಾತಂತ್ರö್ಯ ಹೋರಾಟಕ್ಕೆ ಎಲ್ಲ ಭಾರತೀಯ ಪ್ರಜೆಗಳು ಒಮ್ಮತದ ಮೂಲಕ ಭಾಗವಹಿಸಿದರು. ಅದರಂತೆ ಕ್ರಾಂತಿಕಾರಿಗಳಾದ ಭಗತ ಸಿಂಗ್, ರಾಜಗುರು ಮತ್ತು ಸುಖದೇವ ಅವರು ತಮ್ಮ ಜೀವನುದ್ದಕ್ಕೂ ಹೋರಾಟದಲ್ಲಿ ಭಾಗವಹಿಸಿ ಸ್ವಾತಂತ್ರö್ಯ ತಂದುಕೊಡುವಲ್ಲಿ ತಮ್ಮ ಜೀವನವನ್ನು ಅರ್ಪಿಸಿದರು ಎಂದು ತಿಳಿಸಿದರು.
ಭಾರತದ ಕ್ರಾಂತಿಕಾರಿಗಳಿಗೆ ಮಾದರಿ ಎಂಬAತೆ ಬದುಕಿ ಕೇವಲ ೨೩ ವರ್ಷದಲ್ಲಿ ಸೇಡಿಗೆ ಸೇಡು ತೀರಿಸಿಕೊಂಡು ಬ್ರೀಟಿಷ ಅಧಿಕಾರಿಯನ್ನು ಹತ್ಯೆಗೈದು ನೇಣು ಕಂಬಕ್ಕೆ ಏರಿದ ಭಗತ ಸಿಂಗ್‌ರವರು ಕ್ರಾಂತಿ ಚಿರಾಯುವಾಗಲಿ ಎಂದು ಅಂತಿಮ ಘೋಷಣೆ ಕೂಗಿ ಎಲ್ಲ ಭಾರತೀಯರಿಗೆ ಸಂದೇಶವನ್ನು ಸಾರಿದರು ಎಂದು ಪ್ರೊ. ಬಿ.ವ್ಹಿ. ಹಿರೇಮಠ ತಿಳಿಸಿದರು.
ಭಾರತೀಯ ಇತಿಹಾಸದಲ್ಲಿ ಚಿಕ್ಕ ವಯಸ್ಸಿನಲ್ಲಿ ಎಲ್ಲ ಯುವಕರಿಗೆ ಆಸಕ್ತಿ, ಗುರಿ ಮತ್ತು ಉದ್ದೇಶಗಳು ನಿಖರವಾಗಿರಬೇಕು. ಕೇವಲ ನೀವು ನನ್ನನ್ನು ಕೊಲ್ಲಬಹುದು ಹೊರತು ನನ್ನ ಆತ್ಮವನ್ನಲ್ಲ, ಭಾರತೀಯರಿಗೆ ಹೇಳುವುದು ಸ್ಪಷ್ಟವಾಗಿ ಹೇಳಿ. ಏಕೆಂದರೆ ಒಮ್ಮೆಲೆ ತಿಳಿದುಕೊಳ್ಳುವ ಸಾಮರ್ಥ್ಯವಿಲ್ಲ. ನಮ್ಮ ವ್ಯಕ್ತಿಗಳೇ ನಮಗೆ ಮೋಸ ಮಾಡುವಂತೆ ಭಗತ ಸಿಂಗ್‌ರವರಿಗೆ ನಮ್ಮ ಭಾರತೀಯ ವಕೀಲರೆ ಎದುರು ವಕಾಲತ್ತು ವಹಿಸಿ ಮರಣ ದಂಡನೆಗೆ ಗುರಿ ಮಾಡಿದರು ಎಂದು ಪ್ರೊ. ಎಸ್.ಎಮ್. ಚುಂಚೂರ ತಿಳಿಸಿದರು.
ಭಗತ ಸಿಂಗ್‌ರವರ ಜೀವನ ಮತ್ತು ಸಾಧನೆ ಕುರಿತು ವಿದ್ಯಾರ್ಥಿ ಸಾನಿಯಾ ತಾಂಬೋಲಿ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಚನ್ನಮ್ಮ ಖಾನಾಪೂರ ನಿರೂಪಿಸಿದರು ಮತ್ತು ರಾಧಾ ಕದಂಪುರ ವಂದಿಸಿದರು.
ಮಹಾವಿದ್ಯಾಲಯದ ಉಪನ್ಯಾಸಕರಾದ ಪ್ರೊ. ಜಿ.ಎಸ್. ಬಗಲಿ, ಪ್ರೊ. ಶ್ರೀಶೈಲ ತರಳಗಟ್ಟಿ, ಪ್ರೊ. ಎನ್.ಎಸ್. ಹರನಾಳ, ಪ್ರೊ. ಜಿ.ಎ. ಮೇಟಿ, ಪ್ರೊ. ಆರ್.ಎಸ್. ಚಲವಾದಿ, ಪ್ರೊ. ವ್ಹಿ.ಆಯ್. ಅಂಗಡಿ, ಎಮ್.ಟಿ. ಶೇಲಾರ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಿದ್ದರು.