ಅಭಿವೃದ್ಧಿಗೆ ಅನುದಾನ ನೀಡುವಂತೆ ಸಚಿವರಿಗೆ ಮನವಿ
ವಾಡಿ: ಸೆ.೨೯:ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಸಚಿವ ಪ್ರಿಯಾಂಕ್ ಖರ್ಗೆಗೆ ಕಾಂಗ್ರೆಸ್ ಮುಖಂಡರು ಮನವಿ ಸಲ್ಲಿಸಿದರು.
ಬೆಂಗಳೂರಿನ ಸಚಿವರ ಕಚೇಯಲ್ಲಿ ಭೇಟಿಯಾದ ಕಾರ್ಯಕರ್ತರು, ಗ್ರಾಮಕ್ಕೆ ಸಿಸಿ ರಸ್ತೆ, ಒಳಚರಂಡಿ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಗ್ರಾಮದ ವಾರ್ಡ೨ ರಲ್ಲಿನ ಡಾ.ಸುರೇಶ ಮನೆಯಿಂದ ರತ್ನಮ್ಮ ಮನೆಯವರೆಗೆ ಸಿಸಿ ರಸ್ತೆ, ಶಾಮರಾಯ ತೆಗನೂರ ಮನೆಯಿಂದ ತಮ್ಮಣ್ಣ ಭಜಂತ್ರಿ ಮನೆಯವರೆಗೆ ಸಿಸಿ ರಸ್ತೆ ಮತ್ತು ಎರಡು ಬದಿಯಲ್ಲಿ ಚರಂಡಿ ಕಾಮಗಾರಿ ನಿರ್ಮಿಸಬೇಕು. ಕಾಶಿನಾಥ ಮನೆಯವರೆಗೆ ಸಿಸಿ ರಸ್ತೆ ಹಾಗೂ ಎರಡು ಬದಿಯಲ್ಲಿ ಚರಂಡಿ, ವಾಡಿ ಮುಖ್ಯ ರಸ್ತೆಯಿಂದ ಜಗಪ್ಪ ಬಾವನೋರ ಮನೆಯವರೆಗೆ ಸಿಸಿ ರಸ್ತೆ ಮತ್ತು ಎರಡು ಬದಿಯಲ್ಲಿ ಚರಂಡಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ರಹೆಮನ್‌ಸಾಬ್ ಬಾಂಬೆ, ಬಸವರಾಜಗೌಡ ದೇಶಮುಖ, ಪ್ರೇಮನಾಥ ದ್ಯಾವಕಾರ, ಮಹೆಬೂಬ್ ಮುಲ್ಲಾ, ಹೀರಾ ಜಾಧವ್, ಹರಿಸಿಂಗ್ ಚವ್ಹಾಣ, ಖದೀರ್ ಮುಲ್ಲಾ ಸೇರಿದಂತೆ ಇನ್ನಿತರರು ಇದ್ದರು.