ಜ್ಞಾನ, ಯೋಗ, ಮಾನಸಿಕ ಚೈತನ್ಯಕ್ಕೆ ಕಾರಣ: ಡಾ.ಪುರುಷೋತ್ತಮ
ವಾಡಿ: ಸೆ.೨೯:ಜ್ಞಾನ ಮತ್ತು ಯೋಗ ಮೈಗೂಡಿಸಿಕೊಂಡರೆ ರೋಗಗಳಿಂದ ಮುಕ್ತವಾಗಿ ಬದುಕಬಹುದು ಎಂದು ಹುಬ್ಬಳ್ಳಿ ನವಜೀವನ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ಪುರುಷೋತ್ತಮ ಆರೋರ್ ಹೇಳಿದರು.
ಪಟ್ಟಣದ ಸಂತ ಶ್ರೀಸೇವಾಲಾಲ್ ಮಂದಿರದ ಕಲ್ಯಾಣ ಮಂಟಪದಲ್ಲಿ ಸಂತ ನಿರಂಕಾರಿ ಚಾರಿಟೇಬಲ್ ಫೌಂಡೇಶನ್ ಬೆಂಗಳೂರು ಹಾಗೂ ವಾಡಿ ಶಾಖೆ ಸಹಭಾಗಿತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂತ ನಿರಂಕಾರಿ ಫೌಂಡೇಶನ್ ಇಡೀ ಜಗತ್ತಿನಾದ್ಯಂತ ಜನರ ಆರೋಗ್ಯ ಸೇವೆ ಮಾಡುತ್ತಿದೆ. ಬಾಬಾ ಗುರುಬಚನ ಸಿಂಗ್ ಜೀ ಮಹಾರಾಜ್ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಈ ಫೌಂಡೇಶನ್ ನಡೆಯುತ್ತಿದೆ. ಮಾನವನ ಏಕತೆ ಕಾಪಾಡುವ ನಿಟ್ಟಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾಬಾ ಗುರುಬಚ್ಚನ್ ಸಿಂಗ್ ಅವರ ಅನುಯಾಯಿಗಳು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ.
ನಾವುಗಳು ಸತ್ವಯುತ ಆಹಾರ ಸೇವನೆಯ ಕೊರತೆಯಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಊಟದಲ್ಲಿ ಯಥೇಚ್ಛ ಪ್ರಮಾಣದ ತರಕಾರಿ ಹಾಗೂ ಮೊಳಕೆ ಭರಿಸಿದ ಕಾಳುಗಳ ಸೇವನೆಯಿಂದ ಪರಿಪೂರ್ಣ ಆರೋಗ್ಯ ಪಡೆಯಬಹುದಾಗಿದೆ ಎಂದರು.
ಸAತ ನಿರಂಕಾರಿ ಫೌಂಡೇಶನ್ ಸ್ಥಳೀಯ ಉಸ್ತುವಾರಿ ಪ್ರಕಾಶ ಪವಾರ, ವೈದ್ಯರಾದ ಡಾ.ತುಕಾರಾಮ ಕೋಟ್, ಡಾ.ಪಾಂಡುರAಗ ನಾಕರ್ಡೆ, ಡಾ.ಅಂಕುಶ ನವಲೆ, ಡಾ.ದಿಗಂಬರ ವಾಗಮೋಡೆ, ಡಾ.ಆದಿತ್ಯ ಚವ್ಹಾಣ, ಡಾ.ಧನಂಜಯ ಮಾನೆ, ಡಾ.ಅನಿತಾ ಪವಾರ, ಸ್ಥಳೀಯ ಮುಖಂಡರಾದ ಶಿವರಾಮ ಪವಾರ, ರೂಪಾಸಿಂಗ್ ರಾಠೋಡ, ಕರಣ ರಾಠೋಡ, ರಮೇಶ ಕಾರಬಾರಿ, ತುಳಸಿರಾಮ್ ರಾಠೋಡ, ಗೋವಿಂದ ಚವ್ಹಾಣ, ರಾಮಚಂದ್ರ ರಾಠೋಡ, ಮನೋಜ ರಾಯಚೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಬಿಪಿ, ಶುಗರ್, ಹೃದಯ ಸಂಬAಧಿ ಹಾಗೂ ಕಿಡ್ನಿ ತಪಾಸಣೆ ಮಾಡಿದ ರೋಗಿಗಳಿಗೆ ಉಚಿತವಾಗಿ ಮಾತ್ರೆಗಳನ್ನು ವಿತರಿಸಲಾಯಿತು. ನಿರಂಕಾರಿ ಸೇವಾದಾರಿಗಳು ತಮ್ಮ ಉಡುಪು ಧರಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದರು. ಹಲವಾರು ಜನ ರೋಗಿಗಳು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಸಂತ ನಿರಂಕಾರಿ ಫೌಂಡೇಶನ್‌ಗೆ ಕೃತಜ್ಞತೆಗಳ ಸಲ್ಲಿಸಿದರು
. ರಮೇಶ ಕಾರಭಾರಿ ವಾಡಿ ಪಠಾಣ್ದದ ಸೇವಾಲಾಲ್ ನಗರದಲಿ ಸುಮಾರು ೩೦ ವರ್ಷದಿಂದ ಇಲ್ಲಿ ಸಂತ ನಿರಂಕಾರಿ ಮಿಷನ್ ಕೆಲಸ ಮಾಡುತ್ತಿದೆ ಇದು ಯಾವುದೇ ಜಾತಿ ಧರ್ಮ ಕೇಳ್ಳು ಮೇಲು ಸಣ್ಣ ದೋಡವರು ಇಲ್ಲ ಎಲರು ಒಂದೆ ಸಮನ ಮಾನವರು ಎಲರು ಒಂದೆ ವಿಶ್ವದಲ್ಲಿ ಸುಮಾರು ೧೦೮ ದೇಶದಲ್ಲಿ ಈ ಸಂತ ನಿರಂಕಾರಿ ಮಷಿನ್ ಇದೆ ಮಾನವ ಉದ್ದಾರಕ್ಕಾಗಿ ಮನುಷ್ಯ ಜೀವನದಲಿ ಹೇಗಿರಬೇಕು ಶಾಂತಿ ಸುಖ ನೀಡುವುದು ಇಂತಹ ಕೆಲಸ ಮಾಡುತ್ತದೆ ಪ್ರತಿಯೊಂದು ಮನುಷ್ಯ ಈ ಸತ್ತಸಂಗ ಬಂದರೆ ಒಳ್ಳೆ ಗುಣ ಬರುತ್ತೆ ಮನುಷ್ಯ ಹೇಗೆ ಬದುಕು ಬೇಕು ತಂದೆ ತಾಯಿ ದೇವರು ಇದನ್ನು ಇಲ್ಲಿ ತೋರಿಸುತ್ತದೆ ಸತ್ತಸಂಗ ಅಂದರೆ ದೇವರ ಒಂದು ಮಾರ್ಗ ತೋರಿಸುವ ಸಂತರ ಒಂದು ಸ್ಥಳ ಎಂದು ಹೇಳಿದರು