ಅಕ್ಷರ ಜಾತ್ರೆಗೆ ಅಕ್ಕರೆಯಿಂದ ಸ್ವಾಗತಿಸುತ್ತೇವೆ:ಕೊಪ್ಪದ
ತಾಳಿಕೋಟೆ:ಸೆ.೨೯: ಅಕ್ಟೋಬರ್ ೧ರಂದು ತಾಳಿಕೋಟೆ ಪಟ್ಟಣದಲ್ಲಿ ಜರುಗಿಸಲು ನಿರ್ಧರಿಸಲಾಗಿರುವ ಪ್ರಥಮ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ತಯಾರಿಯ ಕಾರ್ಯ ಭರದಿಂದ ಸಾಗಿದ್ದು ನಾಡಿನ ಕನ್ನಡ ಸಾಹಿತ್ಯ ಚಿಂತಕರ, ಸಂತರ, ಕವಿಗಳ ಒಳಗೊಂಡAತೆ ಎಲ್ಲರಿಗೂ ಅಕ್ಷರ ಜಾತ್ರೆಗೆ ಅಕ್ಕರೆಯಿಂದ ಸ್ವಾಗತಿಸುತ್ತೇವೆಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ಆರ್.ಎಲ್.ಕೊಪ್ಪದ ಅವರು ಹೇಳಿದರು.
ಶನಿವಾರರಂದು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದ ಅವರು ಅಕ್ಟೋಬರ್ ೧ ರಂದು ಜರುಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಮಹಾ ವೇದಿಕೆಗೆ ಪೂಜ್ಯ ಶ್ರೀ ಖಾಸ್ಗತೇಶ್ವರ ಮಹಾ ಸವಾಮಿಗಳ ಪ್ರಧಾನ ವೇದಿಕೆ ಎಂದು ಹೆಸರಿಡಲಾಗಿದ್ದು ಬೆಳಿಗ್ಗೆ ೮ ಗಂಟೆಗೆ ರಾಷ್ಟç ದ್ವಜಾರೋಹಣ, ನಾಡ ಧ್ವಜಾರೋಹಣ, ಪರಿಷತ್ತಿನ ದ್ವಜಾರೋಹಣ, ಪುಸ್ತಕ ಮಳಿಗೆ ಉದ್ಘಾಟನೆ, ದಾಸೋಹ ಮನೆ ಉದ್ಘಾಟನೆ, ಜರುಗಲಿದೆ ಎಂದರು.
೮-೩೦ ಗಂಟೆಗೆ ಸಮ್ಮೇಳನಾಧ್ಯಕ್ಷರ ಮೇರವಣಿಗೆಯು ಶ್ರೀ ಬಸವೇಶ್ವರ ವೃತ್ತದಿಂದ ಪ್ರಾರಂಭಗೊಳ್ಳಲಿದ್ದು ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಶ್ರೀ ಅಂಬಾಭವಾನಿ ಮಂದಿರ ರಸ್ತೆ, ಕತ್ರಿ ಭಜಾರ, ಶ್ರೀ ಬಾಲಾಜಿ ಮಂದಿರ ರಸ್ತೆ, ಶ್ರೀ ವಿಠ್ಠಲ ಮಂದಿರ ರಸ್ತೆ, ಬಸ್ ನಿಲ್ದಾಣದ ಮುಂಭಾಗದ ರಸ್ತೆಯ ಮೂಲಕ ಶ್ರೀ ಸಂಗಮೇಶ್ವರ ಸಭಾ ಭವನದಲ್ಲಿ ಸಿದ್ದಪಡಿಸಲಾದ ಪ್ರಧಾನ ವೇದಿಕೆಗೆ ಮೇರವಣಿಗೆಯು ಬಂದು ತಲುಪಲಿದೆ ಎಂದು ಅಧ್ಯಕ್ಷ ಕೊಪ್ಪದ ಅವರು ಹೇಳಿದರು.
೧೦-೩೦ ಗಂಟೆಗೆ ಸಮ್ಮೇಳನದ ಉದ್ಘಾಟನೆ ಜರುಗಲಿದ್ದು ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ನಾಡಿನ ಹೆಸರಾಂತ ಮಠವಾದ ಶ್ರೀ ಖಾಸ್ಗತೇಶ್ವರ ಮಠದ ಬಾಲ ಶೀವಯೋಗಿ ಶ್ರೀ ಸಿದ್ದಲಿಂಗ ದೇವರು ವಹಿಸಲಿದ್ದು, ಈ ಸಮಯದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ ಶಕೀಲಅಹ್ಮದ ಖಾಜಿ ಅವರು ಉಪಸ್ಥಿತರಿರುವದು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಅವರು ನೇರವೇರಿಸಲಿದ್ದು ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಅವರು ಪುಷ್ಪಾರ್ಚನೆ ಮಾಡಲಿದ್ದಾರೆಂದು ಹೇಳಿದ ಅಧ್ಯಕ್ಷ ಆರ್.ಎಲ್.ಕೊಪ್ಪದ ಅವರು ಉದ್ಘಾಟನೆಯ ಕಾರ್ಯಕ್ರಮದ ನಂತರ ಸಾಧಕರಿಗೆ ಗೌರವ ಪುರಸ್ಕಾರ ಜರುಗಲಿದೆ, ನಂತರ ಗೋಷ್ಠಿ ೧ ಪ್ರಾರಂಭಗೊಳ್ಳಲಿದೆ ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಹಾಗೂ ಹಿರೂರ ಅನ್ನದಾನೇಶ್ವರ ಮಠದ ಶ್ರೀ ಗುರುಜಯಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರೆಂದರು. ನಂತರ ಕವಿಗೋಷ್ಠಿ ಪ್ರಾರಂಭಗೊಳ್ಳಲಿದೆ ಈ ಕಾರ್ಯಕ್ರಮದ ನಂತರ ಪುರಸಭಾ ಸದಸ್ಯ ಸನ್ಮಾನ ಕಾರ್ಯಕ್ರಮ, ಜರುಗುವದೆಂದರು.
ಮಧ್ಯಾಹ್ನ ೨-೧೫ಕ್ಕೆ ಮಹಿಳಾ ಗೋಷ್ಠಿ ಪ್ರಾರಂಭಗೊಳ್ಳಿದೆ ಈ ಕಾರ್ಯಕ್ರಮದ ನಂತರ ಕರ್ನಾಟಕ ಸುವರ್ಣ ಸಂಭ್ರಮ ೫೦ ರ ನಿಮಿತ್ಯವಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಪುರಸ್ಕಾರ ಜರುಗಲಿದೆ, ನಂತರ ೪-೧೫ಕ್ಕೆ ಜಾನಪದ ಚಿಂತನ ಗೋಷ್ಠಿ ಪ್ರಾರಂಭಗೊಳ್ಳಲಿದೆ ಎಂದು ಅಧ್ಯಕ್ಷ ಆರ್.ಎಲ್.ಕೊಪ್ಪದ ಅವರು ತಿಳಿಸಿದರು.
೬-೧೫ಕ್ಕೆ ತಾಳಿಕೋಟೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪದಾಧಿಕಾರಿಗಳಿಂದ ಬಹಿರಂಗ ಅಧಿವೇಶನ ಜರುಗಲಿದ್ದು ಸಾಯಂಕಾಲ ೬-೩೦ ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಕುಂಟೋಜಿಯ ಶ್ರೀ ಡಾ.ಚನ್ನವೀರ ಸ್ವಾಮಿಗಳು ವಹಿಸಲಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ), ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ನೇರವೇರಿಸುವರು.
ಈ ಸಮಯದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಹಾಸೀಂಫೀರ ವಾಲಿಕಾರ ಅವರು ಉಪಸ್ಥಿತರಿರಲಿದ್ದು ಅಧ್ಯಕ್ಷತೆಯನ್ನು ಕಸಾಪ ತಾಲೂಕಾ ಅಧ್ಯಕ್ಷ ಆರ್.ಎಲ್.ಕೊಪ್ಪದ, ಒಳಗೊಂಡAತೆ ಅನೇಕ ಮಹಿನಿಯರು, ಸಾಹಿತಿಗಳು ಭಾಗಿಯಾಗಲಿದ್ದಾರೆಂದು ತಿಳಿಸಿದ ಕೊಪ್ಪದ ಅವರು ಸಂಜೆ ೭ ಘಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು ಈ ಕಾರ್ಯಕ್ರಮದಲ್ಲಿ ಕೆಸರಟ್ಟಿಯ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಸಾನಿದ್ಯ ವಹಿಸಲಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಧಾರವಾಡದ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಅವರು ನೇರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನೇಕ ಸಾಹಿತಿಗಳು, ಕನ್ನಡಾಭಿಮಾನಿಗಳು, ಸಾಹಿತ್ಯ ಪರಿಷತ್ತಿನ ಕೇಂದ್ರಾಡಳಿತದ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು ಒಳಗೊಂಡAತೆ ಅನೇಕ ಜನರು ಭಾಗಿಯಾಗಿ ಸಂಪೂರ್ಣ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷೀಕರಿಸಲಿದ್ದಾರೆಂದು ಕಸಾಪ ತಾಲೂಕಾ ಅಧ್ಯಕ್ಷ ಆರ್.ಎಲ್.ಕೊಪ್ಪದ ಅವರು ಹೇಳಿದರು.
ಈ ಸಮಯದಲ್ಲಿ ಕಸಾಪ ಗೌರವಾಧ್ಯಕ್ಷ ಎಚ್.ಎಸ್.ಪಾಟೀಲ, ಸಾತು ಗೊಂಗಡಿ, ವಿಜಯಸಿಂಗ್ ಹಜೇರಿ, ಸಚೀನ ಪಾಟೀಲ, ಆರ್.ಬಿ.ದಾನಿ, ಡಾ.ನಜೀರ ಕೊಳ್ಯಾಳ, ಹುಸೇನ ಮಕಾಂದಾರ, ರಾಜು ಹಂಚಾಟೆ, ಆರ್.ಆಯ್.ಜಾಲವಾದಿ, ಎಸ್.ವ್ಹಿ.ಜಾಮಗೊಂಡಿ, ಆನಂದ ಮದರಕಲ್ಲ, ಚಿತ್ತರಗಿ, ಎಂ.ಆರ್.ಪಾಟೀಲ, ಪ್ರಭು ಗುಡಗುಂಟಿ, ಸುರೇಶ ನಾರಿ ಮೊದಲಾದವರು ಉಪಸ್ಥಿತರಿದ್ದರು.