ಗುರುವಿನ ಶಕ್ತಿ ಅಪಾರ : ನಿಂಗನಗೌಡ ದೇಸಾಯಿ
ಸಂಜೆವಾಣಿವಾರ್ತೆ
ಕೆAಭಾವಿ:ಸೆ.೨೯: ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕನ ಪಾತ್ರ ಬಹುಮುಖ್ಯಪಾತ್ರವನ್ನು ವಹಿಸುತ್ತದೆ ಒಂದು ಶಿಲೆಗೆ ಕಲಾವಿದ ಹೇಗೆ ತನ್ನ ಕೈಚಳಕದಿಂದ ಪೂಜಿಸುವ ಭಾವನೆ ಮೂಡಿಸುವನೊ ಹಾಗೇ ಶಿಕ್ಷಕನ ಪಾತ್ರವು ಅಷ್ಟೇ ಪ್ರಮುಖವಾದದ್ದು ಎಂದು ಸಾಹಿತಿ ನಿಂಗನಗೌಡ ದೇಸಾಯಿ ಹೇಳಿದರು,
ಪಟ್ಟಣದ ಸಮೀಪದ ಪರಸನಹಳ್ಳಿ ಗ್ರಾಮದ ಸ.ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸುಮಾರು ೧೭ ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಯಾದ ಶಿಕ್ಷಕ ಶಂಭುಲಿAಗ ದುರ್ಗದ ಬೀಳ್ಕೋಡಿಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗುರುವಿಗೆ ಅತ್ಯಂತ ಬಹುದೊಡ್ಡ ಶಕ್ತಿಯಿದೆ ಗುರುವಿನ ಸನ್ಮಾರ್ಗದಲ್ಲಿ ನಡದರೆ ಸುಲಭವಾಗಿ ಗೋವಿಂದನನ್ನು ಕಾಣಬಹುದು ಎಂದು ಹೇಳಿದರು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿಕ್ಷಕ ದುರ್ಗದ ಅವರನ್ನು ಅವರ ನೆಚ್ಚಿನ ವಿದ್ಯಾರ್ಥಿಗಳು ಮೆರವಣಿಗೆ ಮಾಡಿದರು.
ನಂತರ ಮಾತನಾಡಿದ ಶಾಲೆಯ ಮುಖ್ಯಗುರುಗಳಾದ ಮಲ್ಲಣ್ಣ ಸುರಪುರ ಶಿಕ್ಷಕ ದುರ್ಗದ ಅವರ ಸೇವೆ ಅನನ್ಯವಾದದ್ದು ಅವರ ಸೇವಾಧಿಯಲ್ಲಿ ವಿದ್ಯಾರ್ಥಿಗಳಿಗ ಕಲಿಕೆಗೆ ಅವಿರತ ಶ್ರಮಿಸಿದವರು ಎಂದು ಹೇಳಿದರು
ಈ ಸಂದರ್ಭದಲ್ಲಿ ಶಾಲೆಯ
ಸಹ ಶಿಕ್ಷಕರು ಮತ್ತು ದುರ್ಗದ ಅವರ ಆತ್ಮೀಯ ಬಳಗದವರು,ಗ್ರಾಮದ ಹಿರಿಯರು ಸೇರಿದಂತೆ ಇತರಿದ್ದರು.ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ಕುಂಭಾರ ನಿರೂಪಿಸಿದರು, ರಮೇಶ ಪಂಚ್ ಸ್ವಾಗತಿಸಿದರು. ಹಳ್ಳೇಪ್ಪ ಸುರುಪೂರ ವಂದಿಸಿದರು.